Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಲ್ಲಿ ನೀರು ತರಿಸುವ ಮೈಸೂರು ಬೋಂಡಾ: ದಿನ ಮಾಡಿ ಸವಿಯೋದು ಪಕ್ಕಾ!
ಬೆಳಗ್ಗೆ ತಿಂಡಿಗೆ ನೀವು ವಿವಿಧ ಬಗೆಯ ತಿಂಡಿ ಮಾಡಿ ಸವಿಯುವುದು ಸಾಮಾನ್ಯ. ಆದ್ರೆ ನಿತ್ಯವು ನೀವು ಒಂದೇ ರೀತಿ ಖಾದ್ಯ ಮಾಡಿ ಸವಿಯಲು ಇಷ್ಟಪಡೋದಿಲ್ಲ. ಹಾಗೆ ಬೇರೆ ಬೇರೆ ಖಾದ್ಯಗಳ ಮಾಡುವುದು ಕೂಡ ನಿಮಗೆ ಸುಲಭವಲ್ಲ. ಇನ್ನು ಹೋಟೆಲ್ಗಳಲ್ಲಿ ಸಿಗುವಂತಹ ರುಚಿ ರುಚಿಯ ಖಾದ್ಯಗಳನ್ನು ಮನೆಯಲ್ಲೂ ಮಾಡಿ ಸವಿಯಲು ನೀವು ಮುಂದಾಗುವುದು ಸಾಮಾನ್ಯ.
ಇನ್ನು ಹೋಟೆಲ್ಗಳಲ್ಲಿ, ಕ್ಯಾಂಟೀನ್ಗಳಲ್ಲಿ ಸಿಗುವಂತಹ ಮೈಸೂರು ಬೋಂಡಾ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ತೆಂಗಿನಕಾಯಿ ಚಟ್ನಿಯ ಜೊತೆಗೆ ಮೈಸೂರು ಬೋಂಡಾ ಬಹಳ ರುಚಿ ನೀಡಲಿದೆ. ಮೈಸೂರು ಬೋಂಡಾ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ರಾಜ್ಯದ ಹೊರಗು ಬಹಳ ಫೇಮಸ್. ಕೆಲವರು ಬೆಳಗ್ಗೆ ಇದನ್ನು ಸವಿಯಲು ಇಷ್ಟಪಟ್ಟರೆ ಮತ್ತೆ ಕೆಲವರು ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿಯೂ ಸವಿಯಲು ಮುಂದಾಗೋದು ನೋಡಬಹುದು.

ಆದ್ರೆ ಕೆಲವರಿಗೆ ಮೈಸೂರು ಬೋಂಡಾ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದಿರುವುದಿಲ್ಲ. ನಾವಿಂದು ಸುಲಭವಾಗಿ ಈ ಮೈಸೂರು ಬೋಂಡಾ ಮಾಡುವುದು ಹೇಗೆ ಅನ್ನೋದನ್ನು ಹೇಳಲಿದ್ದೇವೆ. ಅದ್ರಲ್ಲೂ ಬಹಳ ಸುಲಭ ಮಾರ್ಗದಲ್ಲಿ ಈ ಬೋಂಡಾ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿಯೋಣ.
ಮೈಸೂರು ಬೋಂಡಾ ಮಾಡುವುದು ಹೇಗೆ?, ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮೈಸೂರು ಬೋಂಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕಾಗುತ್ತದೆ?
- ಮೈದಾ ಹಿಟ್ಟು
- ಸಕ್ಕರೆ
- ಶುಂಠಿ
- ಉಪ್ಪು
- ಸೋಡಾ ಪುಡಿ
- ಮೊಸರು
- ಎಣ್ಣೆ
- ಕರಿಬೇವು
- ಕೊತ್ತಂಬರಿ
- ಹಸಿ ಮೆಣಸು
- ಜೀರಿಗೆ
- ಕೊಬ್ಬರಿ
ಮೈಸೂರು ಬೋಂಡಾ ಮಾಡುವುದು ಹೇಗೆ ನೋಡಿ
ಮೊದಲು ಒಂದು ಬೌಲ್ನಲ್ಲಿ ಒಂದೂವರೆ ಕಪ್ ಮೈದಾ ಹಿಟ್ಟು 2 ಸ್ಪೂನ್ ಸಕ್ಕರೆ, ಕತ್ತರಿಸಿದ ಶುಂಠಿ, ಉಪ್ಪು, ಸೋಡಾ ಪುಡಿ, ಅರ್ಧ ಕಪ್ ಮೊಸರು ಹಾಕಿ ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 1 ಸ್ಪೂನ್ ಬಿಸಿ ಎಣ್ಣೆ ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು.
ಬಹಳ ಸಮಯ ಮಿಕ್ಸ್ ಮಾಡಿದರೆ ಅದು ಗಟ್ಟಿಯಾದ ಅಂಟು ಅಂಟಾದ ರೀತಿಯಲ್ಲಿ ಹಿಟ್ಟು ಬರಬೇಕು. ನಂತರ ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿ ಮೆಣಸು, ಜೀರಿಗೆ, ಸಣ್ಣದಾಗಿ ಕತ್ತರಿಸಿಕೊಂಡ ಕೊಬ್ಬರಿ ತುರಿ ಹಾಕಿಕೊಂಡು ಕೈಗೆ ನೀರು ಹಚ್ಚಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. 3 ನಿಮಿಷ ಮಿಕ್ಸ್ ಮಾಡಿ ಈ ಹಿಟ್ಟನ್ನು 10 ನಿಮಿಷ ಬಟ್ಟಲು ಮುಚ್ಚಿ ಇಟ್ಟುಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಒಲೆ ಮೇಲೆ ಇಟ್ಟು ಕೊಳ್ಳಿ. ನಂತರ ಎಣ್ಣೆ ಕಾಯುವಾಗ ಕೈಯಿಂದ ಹಿಟ್ಟು ತೆಗೆದುಕೊಂಡು ವೃತ್ತವಾಗಿ ಬರುವಂತೆ ಹಿಟ್ಟನ್ನು ಎಣ್ಣೆಗೆ ಬಿಟ್ಟುಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ರೀತಿ ಬೋಂಡಾ ಬಿಟ್ಟುಕೊಳ್ಳಿ, ಬೋಂಡಾದ ಬಣ್ಣ ಚೆನ್ನಾಗಿ ಬದಲಾಗಬೇಕು. ಅಲ್ಲಿಯವರೆಗೂ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೈಸೂರು ಬೋಂಡಾ ರೆಡಿಯಾಗುತ್ತೆ. ಬೆಳಗ್ಗೆ ತಿಂಡಿಗೆ ಇಲ್ಲವೆ ಸಂಜೆ ಸ್ನ್ಯಾಕ್ಸ್ಗೆ ಇದು ಅದ್ಭುತವಾಗಿರಲಿದೆ.
ಈ ಮೈಸೂರು ಬೋಂಡಾದೊಂದಿಗೆ ಸಿಂಪಲ್ ಕಾಯಿ ಚಟ್ನಿ ಮಾಡಿ ಸವಿಯಲು ನೀಡಿದರೆ ಅದರ ರುಚಿ ಅದ್ಭುತವಾಗಿರಲಿದೆ. ನೀವು ಸಹ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ತಿಂಡಿ ಇದಾಗಲಿದೆ.



Click it and Unblock the Notifications
