Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಲ್ಲಿಗೆ ದೋಸೆ ಸವಿದಿದ್ದೀರಾ? ಮಾಡೋದು ಎಷ್ಟು ಸುಲಭ ಗೊತ್ತಾ?
ನೀವು ಬೆಳಗ್ಗೆ ತಿಂಡಿಗೆ ಅನೇಕ ರೀತಿಯ ತಿಂಡಿಯನ್ನು ಮಾಡಿ ಸವಿದಿರುವುದು ಸಹಜ. ಅದರಲ್ಲೂ ದೋಸೆ ಹಾಗೆ ಇಡ್ಲಿ ಎಲ್ಲರ ಮನೆಯ ಸಾಮಾನ್ಯ ತಿಂಡಿ ಎನ್ನಬಹುದು. ದೋಸೆಯಂತು ಎಲ್ಲರು ಇಷ್ಟಪಟ್ಟು ಸವಿಯುವ ಖಾದ್ಯ. ಹಾಗೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ಮನೆಯಲ್ಲಿ ವಿಶೇಷ ದಿನ ಇಲ್ಲವೆ ಸಂಬಂಧಿಕರು ಬಂದರೆ ದೋಸೆ ಮಾಡುವುದು ಸರ್ವೇ ಸಾಮಾನ್ಯ. ಇನ್ನು ದೋಸೆಯಲ್ಲಿಯೂ ಹತ್ತಾರು ವಿಧಗಳಿವೆ ಅನ್ನೋದು ಕೂಡ ತಿಳಿದಿದೆ.
ದೋಸೆಯಲ್ಲಿ ಹಲವು ಬಗೆಯನ್ನು ಮಾಡಬಹುದು. ಮನೆಯಲ್ಲಿ ಸಾಮಾನ್ಯವಾಗಿ ಸೆಟ್ ದೋಸೆಯಂತೆ ಮಾಡಲಾಗುತ್ತೆ. ಇದರ ಜೊತೆಗೆ ಇಡ್ಲಿ, ಸಾಂಬಾರ್ ಸವಿಯಲು ನೀಡುತ್ತಾರೆ. ಇನ್ನು ಮಡಸಾಲೆ ದೋಸೆ, ಈರುಳ್ಳಿ ದೋಸೆ, ರವೆ ದೋಸೆ, ಬೆಣ್ಣೆ ದೋಸೆ, ತುಪ್ಪದ ದೋಸೆ ಇದೆಲ್ಲವು ಬಹಳ ರುಚಿ ನೀಡುವ ದೋಸೆಯ ವಿಧಗಳಾಗಿವೆ.

ಅದರಲ್ಲು ನಾವಿಂದು ಹತ್ತಿಯಂತೆ ಮೃದುವಾದ ಮಲ್ಲಿಗೆ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಹೂವಿನಂತ ಇಡ್ಲಿ ಮಾಡಿರುತ್ತೀರಿ. ಆದ್ರೆ ನಾವಿಂದು ಮಲ್ಲಿಗೆ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ದೋಸೆ ಸವಿಯೋಕೆ ಮೃದುವಾಗಿರುತ್ತೆ. ಹಾಗಾದ್ರೆ ಈ ಮಲ್ಲಿಗೆ ದೋಸೆ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಲ್ಲಿಗೆ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಅಕ್ಕಿ
ಉದ್ದಿನ ಬೇಳೆ
ಮೆಂತ್ಯ
ತಾಜಾ ತೆಂಗಿನಕಾಯಿ ತುರಿ
ಉಪ್ಪು
ಎಣ್ಣೆ
ಮಲ್ಲಿಗೆ ದೋಸೆ ಮಾಡುವ ವಿಧಾನವೇನು?
ಮೊದಲು 2 ಕಪ್ ಅಕ್ಕಿಯನ್ನು ತೊಳೆದು ನೆನೆಸಿಡಿ, ಹಾಗೆ ಉದ್ದಿನ ಬೇಳೆ ಹಾಗೂ ಮೆಂತ್ಯ ಕೂಡ ಹಾಕಿ ತೊಳೆದು ನೆನೆಸಿಡಬೇಕು. ಸುಮಾರು 6ರಿಂದ 8 ಗಂಟೆಯಾದರು ನೆನೆಸಿಡಬೇಕು. ಮಾರನೆ ದಿನ ಬೆಳಗ್ಗೆ ಮಿಕ್ಸಿ ಜಾರ್ಗೆ ಅಕ್ಕಿ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿಕೊಂಡು ರುಬ್ಬಬೇಕು.
ಹಾಗೆ ಮೆಂತ್ಯ ಮತ್ತು ಉದ್ದಿನ ಬೇಳೆ ಕೂಡ ಬೇರೆ ಬೇರೆಯಾಗಿ ರುಬ್ಬಿಕೊಂಡು ಹಿಟ್ಟು ಮಾಡಿಕೊಳ್ಳಿ. ಆದ್ರೆ ರುಬ್ಬುವಾಗ ಹೆಚ್ಚು ನೀರು ಹಾಕಿಕೊಳ್ಳಬೇಡಿ. ಓ ಹಿಟ್ಟನ್ನು ತೆಗೆದು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅರ್ಧ ಕಪ್ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಬರಲು ಆರಂಭಿಸಿದಾಗ ಸ್ವಲ್ಪ ದೋಸೆ ಹಿಟ್ಟು ಹಾಕಿ ಬೇಯಿಸಿಬೇಕು.
ಹಾಲಿನಂತೆ ಕಾಣಿಸುವ ಹದಕ್ಕೆ ಮಾಡಿ ಚೆನ್ನಾಗಿ ಕುದಿಬರಲು ಬಿಡಿ. ಇದು ಕುದಿಬಂದು ಗಟ್ಟಿಯಾಗಿ ಪೇಸ್ಟ್ ರೀತಿ ಆಗಬೇಕು. ಗಂಜಿ ರೀತಿಯಲ್ಲಿ ಇದು ಹದವಾಗಬೇಕು. ಈಗ ಈ ಗಂಜಿಯನ್ನು ತೆಗೆದು ದೋಸೆ ಹಿಟ್ಟಿಗೆ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ. ಈಗ ಒಂದು ಕಾಯಿಯನ್ನು ತುರಿದು ಅದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿ ಹಾಲು ತೆಗೆದುಕೊಳ್ಳಿ. ಈ ಹಾಲನ್ನು ಸಹ ದೋಸೆ ಹಿಟ್ಟಿಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ದೋಸೆ ಹಿಟ್ಟು ಚೆನ್ನಾಗಿ ರೆಡಿಯಾದ ಬಳಿಕ ಈಗ 8 ಗಂಟೆಯಾದರು ಹಿಟ್ಟು ಹದ ಬರಲು ಬಿಡಬೇಕು. ಬಳಿಕ ಹಿಟ್ಟನ್ನು ಮತ್ತೆ ಮಿಶ್ರಣ ಮಾಡಬೇಕು. ಈ ಒಲೆ ಮೇಲೆ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿ ಕಾಯಲು ಬಿಡಿ. ಈಗ ಹಿಟ್ಟನ್ನು ಕಾವಲಿ ಮೇಲೆ ಹಾಕಿಕೊಳ್ಳಿ. ಹಿಟ್ಟು ತೀರ ದಪ್ಪವಾಗಿ ಅಥವಾ ತೀರ ತೆಳ್ಳಗೆ ಮಾಡಿಕೊಳ್ಳಬೇಡಿ. ಇಷ್ಟಾದರೆ ಮೃದುವಾದ ಮಲ್ಲಿಗೆಯಂತಹ ದೋಸೆ ರೆಡಿಯಾಗುತ್ತದೆ. ಇದು ಬಹಳ ಮೃದುವಾಗಿ ಬಾಯಲ್ಲಿ ಇಟ್ಟರೆ ಕರಗುವಂತಿರಲಿದೆ.



Click it and Unblock the Notifications