Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹತ್ತಿಗಿಂತಲೂ ಮೃದುವಾದ ದೋಸೆ ಮಾಡಿ..! ಉದ್ದು-ಅಕ್ಕಿ ಬಳಸಬೇಡಿ..!
ಬೆಳಗ್ಗಿನ ತಿಂಡಿ ಚೆನ್ನಾಗಿರಬೇಕು, ಎಲ್ಲರು ಇಷ್ಟಮಟ್ಟು ಮನೆ ಮಂದಿಯಲ್ಲ ಸವಿದು ಹೊಗಳಬೇಕು ಎಂಬ ಆಸೆ ಗೃಹಿಣಿಯರಲ್ಲಿ ಇರುತ್ತೆ. ಇದಕ್ಕಾಗಿ ಅವರು ಬೆಳಗ್ಗೆ ತಿಂಡಿಗೆ ವಿವಿಧ ರೀತಿಯ ಖಾದ್ಯಗಳ ಮಾಡುವುದು, ಹೊಸ ಬಗೆಯ ತಿನಿಸು ಮಾಡುವುದು ಸೇರಿ ಹಲವು ರೀತಿಯಲ್ಲಿ ಬೆಳಗ್ಗೆಯ ತಿಂಡಿ ರುಚಿಕರವಾಗಿರುವಂತೆ ನೋಡಿಕೊಳ್ಳುತ್ತಾರೆ.
ಆದ್ರೆ ನಿತ್ಯ ಹೊಸ ಬಗೆಯ ತಿಂಡಿ ಮಾಡುವುದು ಸವಾಲಿನ ಕೆಲಸ. ಬೆಳಗ್ಗೆ ಎದ್ದಾಗ ಇಡೀ ದಿನದ ಕೆಲಸಗಳು ಕಣ್ಣ ಮುಂದಿರುತ್ತವೆ. ಹೀಗಿರುವಾಗ ತಿಂಡಿಯ ಕುರಿತು ಹೆಚ್ಚು ಯೋಚಿಸಲು ಸಮಯವಿರುವುದಿಲ್ಲ. ಆದರೆ ನಾವು ಅಂದುಕೊಂಡಂತೆ ಯಾವ ತಿಂಡಿ ಮಾಡಬೇಕೋ ಅದನ್ನೇ ರುಚಿಕರವಾಗಿ ಮಾಡಲು ನಿರ್ಧರಿಸುತ್ತೇವೆ.

ಹಾಗಾದ್ರೆ ಬೆಳಗ್ಗೆಯ ತಿಂಡಿಗೆ ನೀವು ದೋಸೆ ಮಾಡುವುದು ಕಾಮನ್ ಆದ್ರೆ ಅದೇ ದೋಸೆಯನ್ನ ವಿಶೇಷವಾಗಿ ವಿಭಿನ್ನ ರೀತಿಯಲ್ಲಿ ಮಾಡಿದರೆ ಹೇಗೆ? ಹೌದು ದೋಸೆಯನ್ನ ಹತ್ತಿಯಂತೆ ಮೃದುವಾಗಿ ಎಲ್ಲರಿಗೂ ಇಷ್ಟವಾಗುವ ರೀತಿ ಮಾಡಬಹುದು. ಇದಕ್ಕೆ ಹೆಚ್ಚಿನ ಶ್ರಮದ ಅಗತ್ಯವೇನು ಇರುವುದಿಲ್ಲ. ಬದಲಿಗೆ ನಾವು ಹಿಂದಿನ ದಿನ ಹಿಟ್ಟು ರೆಡಿ ಮಾಡುವಾಗ ಸಣ್ಣದ ಟ್ರಿಕ್ಸ್ ಫಾಲೋ ಮಾಡಿದರೆ ಬೆಳಗ್ಗೆ ಹತ್ತಿಯಂತೆ ಮೃದುವಾದ ದೋಸೆ ರೆಡಿ ಮಾಡಬಹುದು.
ಇನ್ನು ಉದ್ದಿನ ಬೇಳೆ ಹಾಕದೆಯೇ ಮೃದುವಾದ ದೋಸೆ ಮಾಡುವ ರೆಸಿಪಿ ಬಗ್ಗೆ ನಿಮಗೆ ತಿಳಿದಿದ್ಯಾ? ಇಲ್ಲಾ ಎಂದಾದರೆ ನಾವಿಂದು ಈ ಕುರಿತು ಹೇಳುತ್ತೇವೆ ಕೇಳಿ. ಉದ್ದು ಬಳಸದೆ ಕೇವಲ 2 ವಸ್ತುಗಳ ಬಳಸಿ ಮೃದುವಾದ ಹೂವಿನಂತಹ ದೋಸೆ ಮಾಡಬಹುದು.
ಹಾಗಾದ್ರೆ ಈ ದೋಸೆ ಮಾಡುವುದು ಹೇಗೆ? ಇದಕ್ಕೆ ಯಾವೆಲ್ಲಾ ವಸ್ತು ಬೇಕು? ಹಿಟ್ಟು ರೆಡಿ ಮಾಡಿಕೊಳ್ಳುವುದು ಹೇಗೆ? ದೋಸೆ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೃದುವಾದ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಚಿರೋಟಿ ರವೆ - 2 ಕಪ್
- ತೆಂಗಿನ ತುರಿ - 1 ಕಪ್
- ಎಣ್ಣೆ
ಮೃದುವಾದ ದೋಸೆ ಮಾಡುವುದು ಹೇಗೆ?
ಒಂದು ಪಾತ್ರೆಗೆ ರವೆ ಹಾಕಿಕೊಂಡು ಅದಕ್ಕೆ ನೀರು ಹಾಕಿಕೊಳ್ಳಿ. ಸರಿಯಾಗಿ ರವೆ ನೆನೆಯುವಂತೆ ನೀರು ಹಾಕಿ ತಟ್ಟೆ ಮುಚ್ಚಿ 10 ನಿಮಿಷ ಬಿಡಿ. ಬಳಿಕ ಇದನ್ನು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ, ಇದಕ್ಕೆ ತೆಂಗಿನ ತುರಿ ಸಹ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ಹಿಟ್ಟು ನುಣ್ಣಗೆ ಆಗುವಂತೆ ರುಬ್ಬಿಕೊಳ್ಳಬೇಕು. ಬಳಿಕ ಈ ಹಿಟ್ಟನ್ನು ಮತ್ತೊಂದು ಪಾತ್ರೆಗೆ ಹಾಕಿ ಇಡಿ. ಈ ಹಿಟ್ಟನ್ನು ಒಂದು ದಿನ ರಾತ್ರಿ ಬಿಡಬೇಕು. ಮಾರನೆ ದಿನ ಬೆಳಗ್ಗೆ ಈ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ನೀರು ಹಾಕಿಕೊಳ್ಳುವ ಅಗತ್ಯವಿಲ್ಲ. ಇನ್ನು ಬೆಳಗ್ಗೆ ಹಿಟ್ಟು ಮಾಡಿಕೊಳ್ಳುವುದಾದರೆ ಸ್ವಲ್ಪ ಸೋಡಾ ಪುಡಿ ಸಹ ಹಾಕಿಕೊಳ್ಳಬೇಕು. ಆದರೆ ಹಿಂದಿನ ದಿನ ಹಿಟ್ಟು ಮಾಡುವುದಾದರೆ ಸೋಡಾ ಪುಡಿ ಬಳಸುವ ಅಗತ್ಯವಿಲ್ಲ.
ಬಳಿಕ ಒಲೆ ಮೇಲೆ ಕಾವಲಿ ಇಟ್ಟು ಬಿಸಿಯಾಗಲು ಬಿಡಿ. ಬಳಿಕ ಇದಕ್ಕೆ ಎಣ್ಣೆ ಹಾಕಿಕೊಂಡು ಈರುಳ್ಳಿ ಮೂಲಕ ಚೆನ್ನಾಗಿ ಉಜ್ಜಿಕೊಳ್ಳಬೇಕು. ಬಳಿಕ ಹಿಟ್ಟನ್ನು ಕಾವಲಿ ಮೇಲೆ ಹಾಕಿ ದೋಸೆ ಮಾಡಿಕೊಳ್ಳಿ. ದೋಸೆಯನ್ನ ಎರಡೂ ಕಡೆಗಳಲ್ಲಿ ಕಾಯಲು ಬಿಡಿ. 3 ನಿಮಿಷ ಕಾಯಿಸಿದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಹತ್ತಿಯಂತಹ ದೋಸೆ ರೆಡಿಯಾಗುತ್ತದೆ. ಇದೆ ವಿಧಾನದಲ್ಲಿ ಎಲ್ಲಾ ದೋಸೆ ಮಾಡಿಕೊಳ್ಳಿ.
ಈ ದೋಸೆಯನ್ನು ಕಡಲೆ ಚಟ್ನಿ, ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಲು ನೀಡಿದರೆ ಸಿಕ್ಕಾಪಟ್ಟೆ ರುಚಿ ನೀಡಲಿದೆ.



Click it and Unblock the Notifications
