Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಚಪಾತಿ ಬಲೂನ್‌ನಂತೆ ಉಬ್ಬಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..!
ಚಪಾತಿ ಎಲ್ಲರ ಮನೆಯ ಸಾಮಾನ್ಯ ಖಾದ್ಯ, ಬೆಳಗಿನ ತಿಂಡಿ ಹಾಗೂ ರಾತ್ರಿ ಊಟದ ಜೊತೆಗೆ ಚಪಾತಿ ಸರ್ವೇ ಸಾಮಾನ್ಯ. ಆದ್ರೆ ಕೆಲವರು ಚಪಾತಿಗೆ ಹಿಟ್ಟು ಮಾಡಿಕೊಳ್ಳುವಾಗ ಯಡವಟ್ಟು ಮಾಡುತ್ತಾರೆ. ಏಕೆಂದರೆ ಹಿಟ್ಟು ಮಾಡಿಕೊಳ್ಳುವ ಸುಲಭದ ಕೆಲಸವಾದರು ಅದಕ್ಕೆ ನೀರು, ಹಿಟ್ಟು, ಎಣ್ಣೆ ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಆಗದಿದ್ದರೆ ಚಪಾತಿ ಚೆನ್ನಾಗಿ ಬರುವುದಿಲ್ಲ.
ಚಪಾತಿ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾದ ತಿಂಡಿ ಆಗಿದೆ. ಅತ್ಯುತ್ತಮ ಫೈಬರ್‌ನಿಂದ ಕೂಡಿದ್ದು, ಕಡಿಮೆ ಕ್ಯಾಲೋರಿ ಹೊಂದಿದೆ. ಹೀಗಾಗಿ ತೂಕ ಇಳಿಸುವವರ ಫೇವರಿಟ್ ಫುಡ್ ಅಂದ್ರೆ ಅದು ಚಪಾತಿಯಾಗಿದೆ. ಆದ್ರೆ ಚಪಾತಿಗೆ ಹಿಟ್ಟು ಮಾಡಿಕೊಳ್ಳುವುದೇ ಹಲವರಿಗೆ ಸಮಸ್ಯೆಯಾಗಿರುತ್ತದೆ.

ಅದರಲ್ಲು ಚಪಾತಿ ಚೆನ್ನಾಗಿ ಉಬ್ಬಬೇಕು ಎಂದಾದರೆ ಚಪಾತಿ ಹಿಟ್ಟಿನ ಮಿಶ್ರಣ ಚೆನ್ನಾಗಿ ಮಾಡಿಕೊಳ್ಳಬೇಕು,. ಹಿಟ್ಟು ಮಾಡಿಕೊಳ್ಳಲು ಸಣ್ಣದಾದ ಟ್ರಿಕ್ಸ್ ಇದೆ ಈ ರೀತಿ ಮಾಡಿದರೆ ಚಪಾತಿ ಬಲೂನ್‌ನಂತೆ ಉಬ್ಬಿಕೊಳ್ಳುತ್ತದೆ. ಹಾಗಾದ್ರೆ ಚಪಾತಿ ಉಬ್ಬಿ ಬರಬೇಕು ಅಂದರೆ ಏನು ಮಾಡಬೇಕು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ನೋಡೋಣ.
ಚಪಾತಿ ಹಿಟ್ಟು ಮಾಡಿಕೊಳ್ಳಲು ಏನು ಬೇಕು?
ಗೋಧಿ ಹಿಟ್ಟು
ಎಣ್ಣೆ
ನೀರು
ಉಪ್ಪು
ಚಪಾತಿ ಹಿಟ್ಟು ಮಾಡಿಕೊಳ್ಳುವುದು ಹೇಗೆ?
ಚಪಾತಿ ಹಿಟ್ಟು ಮಾಡುವಾಗ ಸಾಮಾನ್ಯವಾಗಿ ಎಲ್ಲಾರು ಒಂದೇ ರೀತಿಯ ವಿಧಾನ ಅನುಸರಿಸುತ್ತಾರೆ. ಚಪಾಯಿ ಲಟ್ಟಿಸುವಾಗ ಹಾಗೂ ಚಪಾತಿ ಮಾಡುವಾಗ ಹೇಗೆ ಎಣ್ಣೆ ಒಣ ಹಿಟ್ಟು ಹಾಕಿಕೊಳ್ಳಬೇಕು ಎನ್ನುವುದನ್ನು ನೋಡೋಣ.
ಮೊದಲು ಗೋಧಿ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ನುಣುಪಾಗಿ ಹಿಟ್ಟು ರೆಡಿ ಮಾಡಿಕೊಳ್ಳಿ. ಹೀಗೆ ಹಿಟ್ಟು ರೆಡಿ ಮಾಡುವಾಗ ಎರಡು ಸ್ಪೂನ್ ಎಣ್ಣೆ ಸಹ ಸೇರಿಸಿಕೊಳ್ಳಿ. ಹಿಟ್ಟು ರೆಡಿಯಾದ ಬಳಿಕ ಅರ್ಧ ಗಂಟೆ ಅದನ್ನು ಒಂದು ಪಾತ್ರೆಯಲ್ಲಿ ಮುಚ್ಚಿಡಿ. ಇದಾದ ಬಳಿಕ ಹಿಟ್ಟನ್ನು ಹೇಗೆ ಹದವಾಗಿಸಬೇಕು ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ಹಿಟ್ಟಿನ ಒಂದು ಉಂಡೆ ತೆಗೆದುಕೊಂಡು ಕೈಗೆ ಎಣ್ಣೆ ಅವರಿ ಚೆನ್ನಾಗಿ ಉಂಡೆ ಮಾಡಿಕೊಳ್ಳಬೇಕು. ಈ ಉಂಡೆಯಲ್ಲಿ ಎಲ್ಲಿಯೂ ಸೀಳು ಅಥವಾ ಕ್ರ್ಯಾಕ್ ಆಗದಂತೆ ನೋಡಿಕೊಳ್ಳಿ. ಹೀಗೆ ಹಿಟ್ಟನ್ನು ಒಂದೊಂದು ಉಂಡೆಯಾಗಿ ಮಾಡಿಟ್ಟುಕೊಳ್ಳಿ.
ಈಗ ಲಟ್ಟಿಸುವ ಮುನ್ನ ಲಟ್ಟಣಿಗೆಗೆ ಎಣ್ಣೆ ಹಚ್ಚಿಕೊಂಡು ಮಣೆಗೆ ಒಣ ಹಿಟ್ಟು ಹಾಕಿಕೊಂಡ ಬಳಿಕ ಅದರ ಮೇಲೆ ಉಂಡೆ ಇಟ್ಟು ನಿಧಾನವಾಗಿ ಪ್ರೇಸ್ ಮಾಡಿಕೊಳ್ಳಿ. ಉಂಡೆಗೆ ಎರಡು ಕಡೆ ಒಣ ಹಿಟ್ಟು ಹಿಡಿದಿರಬೇಕು. ಈಗ ಎರಡೂ ಕಡೆ ಲಟ್ಟಿಸಿಕೊಳ್ಳಿ. ನಿಧಾನವಾಗಿ ಲಟ್ಟಿಸಿಕೊಳ್ಳಬೇಕು. ಬಳಿಕ ಎರಡೂ ಕಡೆ ಚಪಾತಿಗೆ ಎಣ್ಣೆ ಹಚ್ಚಿಕೊಳ್ಳಬೇಕು. ಬಳಿಕ ಒಣ ಹಿಟ್ಟನ್ನು ಚಪಾತಿ ಮೇಲೆ ಉದುರಿಸಬೇಕು. ಈಗ ಸೀರೆಯ ನರಿಗೆ ಮಡಿಚಿದಂತೆ ಒಂದು ಕಡೆಯಿಂದ ಚಪಾತಿಯನ್ನು ಸುತ್ತಿಕೊಂಡು ಮತ್ತೊಮ್ಮೆ ಉಂಡೆ ಮಾಡಬೇಕು. ಬಳಿಕ ಅದರ ಮೇಲೆ ಒಣ ಹಿಟ್ಟಿ ಹಾಕಿ ಮತ್ತೆ ಲಟ್ಟಿಸಿಕೊಳ್ಳಬೇಕು.
ಹೀಗೆ ಲಟ್ಟಿಸಿಕೊಂಡು ಚಪಾತಿ ಒಣಗಲು ಬಿಡಬಾರದು. ಬಳಿಕ ಕಾವಲಿಯ ಮೇಲೆ ಚಪಾತಿ ಹಾಕಿ ಕಾಯಲು ಬಿಡಬೇಕು. ಈ ವೇಳೆ ಕಾವಲಿಗೆ ಸ್ವಲ್ಪ ಎಣ್ಣೆ ಸವರಿಕೊಳ್ಳಿ. ಚಪಾತಿಯ ಒಂದು ಮೈ ಮಾತ್ರ ಕಾಯಲು ಬಿಡಬಾರದು, ತಕ್ಷಣ ತಿರುಗಿಸಿ ಹಾಕಬೇಕು. ಈ ವೇಳೆ ಚಪಾತಿ ಉಬ್ಬಿಕೊಳ್ಳುತ್ತದೆ. ಚಪಾತಿಯ ಇನ್ನೊಂದು ಮೈಗೆ ಎಣ್ಣೆ ಸವರಬೇಕು.
ಈ ರೀತಿ ಮಾಡುವುದರಿಂದ ಬಲೂನ್‌ನಂತೆ ಚಪಾತಿ ಉಬ್ಬಿ ಬರಲಿದೆ. ಇಲ್ಲಿ ಎರಡು ಬಾರಿ ಉಂಡೆ ಮಾಡಿ ಲಟ್ಟಿಸಿಕೊಳ್ಳುವುದೇ ಸೀಕ್ರೆಟ್ ಟಿಪ್ಸ್ ಆಗಿದೆ. ಇದನ್ನು ನೀವು ಸಹ ಮನೆಯಲ್ಲಿ ಟ್ರೈ ಮಾಡಿ. ಉಬ್ಬುವಂತಹ ಮೃದುವಾದ ಚಪಾತಿ ಮಾಡಿ ನೋಡಿ.



Click it and Unblock the Notifications
