Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮೃದುವಾದ ಹತ್ತಿಯಂತಹ ಬನ್ ದೋಸೆ ಮಾಡಿದ್ದೀರಾ? ಒಂದು ದಿನ ಮಾಡಿದ್ರೆ ನಿತ್ಯವೂ ಇದೇ ತಿಂಡಿ ಫಿಕ್ಸ್!
ನೀವು ಬೆಳಗ್ಗೆ ತಿಂಡಿಗೆ ವಿವಿಧ ಬಗೆಯ ದೋಸೆಯನ್ನು ಮಾಡಿ ಸವಿದಿರುತ್ತೀರಿ. ಮನೆಯಲ್ಲಿ ಮಾತ್ರವಲ್ಲ ಹೋಟೆಲ್ಗಳಲ್ಲಿಯೂ ಸಹ ವಿವಿಧ ಬಗೆಯ ದೋಸೆಗಳ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ದೋಸೆಗಳಲ್ಲಿ ಮಸಾಲೆ ದೋಸೆ, ಬೆಣ್ಣೆ ದೋಸೆ, ರವೆ ದೋಸೆ, ನೀರ್ ದೋಸೆ ಹಾಗೆ ಹತ್ತಾರು ಬಗೆಯ ದೋಸೆಗಳು ನಿಮ್ಮ ಬಾಯಲ್ಲಿ ನೀರು ತರಬಹುದು.
ಹಾಗೆ ದೋಸೆಗಳಲ್ಲಿ ಇರುವ ಹತ್ತಾರು ಬಗೆಯಲ್ಲಿ ನೀವು ಹಲವು ಬಗೆಯನ್ನು ಮನೆಯಲ್ಲಿ ಮಾಡಿರಬಹುದು. ಆದ್ರೆ ನಾವಿಂದು ಇದ್ರಲ್ಲಿ ವಿಶೇಷ ಎನಿಸುವ ಹಾಗೆ ನೀವೆಂದು ಮಾಡಿರದಂತಹ ವಿಭಿನ್ನ ದೋಸೆ ಕುರಿತು ಹೇಳಲಿದ್ದೇವೆ. ಇಂದು ಮೃದುವಾದ ಬನ್ ದೋಸೆಯನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳಿ. ಈ ದೋಸೆ ಮೃದುವಾದ ಹಾಗೆ ಸ್ಪಂಜಿನಂತೆ ಇರಲಿದೆ.

ಒಂದೇ ರೀತಿಯ ದೋಸೆ ಮಾಡಿ ಬೇಸರ ತರಿಸಿದ್ದರೆ ಈ ರೀತಿ ಹೊಸ ಬಗೆಯ ದೋಸೆ ಮಾಡಬಹುದು. ಈ ದೊಸೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಕೂಡ ಬಹಳ ಇಷ್ಟಪಡುತ್ತಾರೆ. ಮೃದುವಾದ ಈ ದೋಸೆ ಬೆಳಗಿನ ನಿಮ್ಮ ತಿಂಡಿಯ ಸಮಯವನ್ನು ವಿಶೇಷವಾಗಿಸಬಹುದು. ಹಾಗಾದ್ರೆ ಈ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬನ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ - 1 ಕಪ್
- ಮೊಸರು - 1/4 ಕಪ್
- ಅಕ್ಕಿ ಹಿಟ್ಟು - 2 ಚಮಚ
- ಇನೋ - 1/2 ಚಮಚ
- ಈರುಳ್ಳಿ - 1
- ಶುಂಠಿ - 1 ಚಮಚ
- ಜೀರಿಗೆ - 1/4 ಚಮಚ
- ಸಾಸಿವೆ - 1/4 ಚಮಚ
- ಕರಿಬೇವು - 2 ಚಮಚ
- ಕೊತ್ತಂಬರಿ ಸೊಪ್ಪು - 1 ಚಮಚ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬನ್ ದೋಸೆ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಹಸಿ ಮೆಣಸು, ಒಂದು ಈರುಳ್ಳಿ, ಶುಂಠಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಈಗ ಇದಕ್ಕೆ ಕರಿಬೇವು, ಉಪ್ಪು, ಸಹ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ಇನ್ನೊಂದು ಕಡೆ ಮಿಕ್ಸಿ ಜಾರ್ಗೆ ಉಪ್ಪಿಟ್ಟು ರವೆ ಹಾಕಿಕೊಂಡು ಅದಕ್ಕೆ ಕಾಲು ಕಪ್ ಮೊಸರು, 2 ಸ್ಪೂನ್ ಅಕ್ಕಿ ಹಿಟ್ಟು, ಅರ್ಧ ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಇದು ಇಡ್ಲಿ ಹಿಟ್ಟಿನ ಹದಕ್ಕೆ ಬರಬೇಕು. ಅನಂತರ ಅದೇ ಮಿಕ್ಸಿ ಜಾರ್ಗೆ ಕಾಲು ಕಪ್ ನೀರು ಹಾಕಿ ತೊಳೆದು ಹಿಟ್ಟಿಗೆ ಸೇರಿಸಿ.
ಈ ಹಿಟ್ಟಿಗೆ ಮೊದಲು ಮಾಡಿದ್ದ ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಕಲಸಿಕೊಳ್ಳಿ. ಮೊದಲು ಉಪ್ಪು ಹಾಕಿರುವ ಕಾರಣ ಈಗ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಹಾಗೆಯೇ ಬಿಡಿ.
ಅನಂತರ ಅಡುಗೆ ಸೋಡಾ ಅಥವಾ ಈನೋ ಸಾಲ್ಟ್ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ದೋಸೆ ಕಾವಲಿ ಇಟ್ಟುಕೊಂಡು ಅದಕ್ಕೆ ಹಿಟ್ಟನ್ನು ಹಾಕಿ ಎರಡೂ ಕಡೆ ದೋಸೆಯನ್ನು ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೃದುವಾದ ದೋಸೆ ಸಿದ್ದವಾಗುತ್ತೆ. ನೀವು ಸುಲಭವಾಗಿ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು.



Click it and Unblock the Notifications
