Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹತ್ತಿಯಂತೆ ಮೃದುವಾದ ಬೇಕರಿ ಬನ್ ಮನೆಯಲ್ಲೇ ಮಾಡಿ..! ಹೇಗೆ ಎಂಬ ವಿಧಾನ ಇಲ್ಲಿದೆ?
ನೀವು ಟೀ -ಕಾಫಿಯ ಸಮಯದಲ್ಲಿ ಬನ್ ಸವಿಯು ಅಭ್ಯಾಸ ಇಟ್ಟುಕೊಂಡಿರಬಹುದು. ಬೇಕರಿಯಲ್ಲಿ ಸಿಗುವಂತಹ ಬನ್ಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಗೂ ಕೂಡ ಇದನ್ನು ನೀಡಬಹುದು. ಹಾಗೆ ವಡಾಪಾವ್ ಜೊತೆಗೆ ಹಾಗೆ ಬಜ್ಜಿಯ ಜೊತೆಗೆ ಈಗ ಬನ್ಗೆ ಹಸಿ ಮೆಣಸಿನ ಚಟ್ನಿ ಹಾಕಿ ಸವಿಯಲು ನೀಡುವುದು ನೋಡಬಹುದು. ಉತ್ತರ ಭಾರತದಲ್ಲಿ ಬನ್ ಜನರ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇಂತಹ ಬನ್ಗಳನ್ನು ನೀವು ಕೂಡ ಬೇಕರಿಯಲ್ಲಿ ಖರೀದಿಸಿ ಸವಿದಿರಬಹುದು.
ಆದ್ರೆ ಮನೆಯಲ್ಲೇ ಈ ಮೃದುವಾದ ಹತ್ತಿಯಂತಹ ಬನ್ ನಾವು ಮಾಡಿ ಸವಿಯಬಹುದು ಅನ್ನೋದು ನಿಮಗೆ ಗೊತ್ತಾ? ಹೌದು ಮನೆಯಲ್ಲಿ ಸುಲಭದ ವಿಧಾನದಲ್ಲೇ ಈ ಬನ್ ಮಾಡಬಹುದು. ಬೇಕರಿಗಳಲ್ಲಿ ಕೂಡ ಒಂದೇ ಬಾರಿಗೆ ನೂರಾರು ಬನ್ ಮಾಡುತ್ತಾರೆ. ಹಾಗೆ ನಾವು ಕೂಡ ಮನೆಯಲ್ಲಿ ಸುಲಭವಾಗಿ ಹತ್ತಾರು ಬನ್ ಒಂದೇ ಬಾರಿಗೆ ಮಾಡಬಹುದು.

ಈ ಬನ್ ಮಾಡಲು ಓವರ್ ಇದ್ದರೆ ಬಹಳ ಸುಲಭವಾಗಿ ಮಾಡಬಹುದು. ಹಾಗಾದ್ರೆ ಬೇಕರಿಯಲ್ಲಿ ನೀಡುವ ಮೃದುವಾದ ಈ ಬನ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಕರಿ ರುಚಿಯ ಬನ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು- 2 ಕಪ್
- ಸಕ್ಕರೆ- ಕಾಲು ಕಪ್
- ಎಣ್ಣೆ
- ಉಪ್ಪು
- ಡ್ರೈ ಈಸ್ಟ್ ಪುಡಿ
- ಹಾಲು
ಬೇಕರಿ ಬನ್ ಮಾಡುವುದು ಹೇಗೆ?
ಮೊದಲಿಗೆ ಒಂದು ಬೌಲ್ ತೆಗೆದಿಕೊಂಡು ಅದಕ್ಕೆ 2 ಕಪ್ ಮೈದಾ ಹಿಟ್ಟು, ಉಪ್ಪು, ಅದೇ ಅಳತೆ ಕಪ್ನಲ್ಲಿ ಕಾಲು ಕಪ್ ಸಕ್ಕರೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಇನ್ಸ್ಸ್ಟಂಟ್ ಡ್ರೈ ಈಸ್ಟ್ 1 ಚಮಚ ಹಾಕಿಕೊಳ್ಳಿ. ಈ ಈಸ್ಟ್ ಎಲ್ಲಾ ಅಂಗಡಿಯಲ್ಲಿ ಸಿಗುತ್ತೆ. ಇದನ್ನೆಲ್ಲಾ ಹಾಕಿ ಮಿಕ್ಸ್ ಮಾಡಿ, ಹಾಗೆ 1 ಕಪ್ ನೀರು ತೆಗೆದುಕೊಂಡು ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಹದ ಮಾಡಿಕೊಳ್ಳಬೇಕು.
ಹಾಗೆ ಒಂದು ಸ್ಪೂನ್ ಎಣ್ಣೆ ಕೂಡ ಹಾಕಿಕೊಂಡು ಚೆನ್ನಾಗಿ ಹದ ಮಾಡಿಕೊಳ್ಳಿ. ಇದು ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿ ಮೃದುವಾಗಿ ಬರುವಂತೆ ಹದ ಮಾಡಿಕೊಳ್ಳಿ. ಎಣ್ಣೆ ಬೇಕಿದ್ದರೆ ಮತ್ತೆ ಹಾಕಿ ಚೆನ್ನಾಗಿ ಹದ ಮಾಡಿಕೊಳ್ಳಿ. ಕೈಗೆ ಅಂಟಿಕೊಳ್ಳುತ್ತಿದ್ದರೆ ಹಾಗೆ ಎಣ್ಣೆ ಹಾಕಿ ಹದ ಮಾಡಿಕೊಳ್ಳಿ. ಈಗ ಮತ್ತೊಂದು ಬೌಲ್ಗೆ ಎಣ್ಣೆ ಸವರಿಕೊಂಡು ಅದರಲ್ಲಿ ಹಿಟ್ಟು ಇಟ್ಟು 2 ಗಂಟೆ ಮುಚ್ಚಿ ಇಡಬೇಕು.
2 ಗಂಟೆಯ ಬಳಿಕ ಇದು ಉಬ್ಬಿಕೊಂಡು ಬಂದಿರುತ್ತದೆ. ಈಗ ಮೆತ್ತಗಿರುವ ಹಿಟ್ಟನ್ನು ಮತ್ತೆ ಹದ ಮಾಡಿಕೊಳ್ಳಿ. ಹೀಗೆ ನಾದಿಕೊಳ್ಳುವುದರಿಂದ ಮೃದುವಾಗುತ್ತದೆ. ಈಗ ಸ್ವಲ್ಪ ಪ್ರಮಾಣದ ಹಿಟ್ಟನ್ನು ತೆಗೆದುಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಮಾಡಿ, ಟೆನಿಸ್ ಬಾಲ್ ರೀತಿಯ ಉಂಡೆ ಮಾಡಿಕೊಂಡರೆ ಅದ್ಭುತವಾಗಿರುತ್ತೆ.
ಹಿಟ್ಟನ್ನು ಉಂಡೆ ಮಾಡಿಕೊಂಡ ಬಳಿಕ ಒಂದು ಟ್ರೇಗೆ ಎಣ್ಣೆ ಸವರಿಕೊಂಡು ಆ ಟ್ರೇನಲ್ಲಿ ಈ ಉಂಡೆಗಳ ಇಟ್ಟುಕೊಳ್ಳಿ. ಹಾಗೆ ಉಂಡೆಗಳ ಮೇಲೆ ಹಾಲನ್ನು ಸವರಿಕೊಳ್ಳಬೇಕು. ಎಣ್ಣೆಯಂತೆ ಹಾಲನ್ನು ಉಂಡೆಗಳ ಮೇಲೆ ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿದ ಬಳಿಕ ಈ ಉಂಡೆಗಳ ಮೇಲೆ ಒಂದು ತೆಳು ಬಟ್ಟೆ ನೀರಿನಲ್ಲಿ ಅದ್ದಿಕೊಂಡು ಉಂಡೆಗಳ ಮೇಲೆ ಹಾಸಿ ಅರ್ಧ ಗಂಟೆ ಬಿಡಬೇಕು. ಅರ್ಧ ಗಂಟೆಯ ನಂತರ ಈ ಹಸಿ ಬನ್ಗಳನ್ನು 5 ನಿಮಿಷ ಹೀಟ್ ಮಾಡಿದ ಓವನ್ ಒಳಗೆ ಇರಿಸಿಕೊಳ್ಳಿ. ಸುಮಾರು 25 ನಿಮಿಷ ಹೀಟ್ ಮಾಡಿಕೊಳ್ಳಬೇಕು.
ಓವನ್ ಇಲ್ಲದಿದ್ದರೆ ಇಡ್ಲಿ ಕುಕ್ಕರ್ ಅಥವಾ ಕುಕ್ಕರ್ನಲ್ಲಿಯೂ ಇಟ್ಟು ಮಾಡಬಹುದು. ಕೇಕ್ ಮಾಡುವ ವಿಧಾನದಲ್ಲೇ ಈ ಬನ್ಗಳ ಇಟ್ಟು 30 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ ಆಯಿತು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬನ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿ ಮಾಡಿ ನೋಡಿ.



Click it and Unblock the Notifications
