Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
5 ನಿಮಿಷದಲ್ಲಿ ಮಾಡಿ ಬಿಡಿ ಶೇಂಗಾ ಮಸಾಲೆ: ಎಷ್ಟು ಸುಲಭ ಗೊತ್ತಾ?
ಸಂಜೆ ಸಮಯದಲ್ಲಿ ಬಾಯಿಗೆ ಸವಿಯಲು ಯಾವುದಾದರು ಒಂದು ಸ್ನ್ಯಾಕ್ಸ್ ಇದ್ದರೆ ಸಂಜೆ ಸಮಯದಲ್ಲಿ ಉತ್ತಮವಾಗಿರುತ್ತೆ. ಟೀ ಕಾಪಿ ಜೊತೆಗೆ ಏನಾದರು ಕರಿದ ತಿಂಡಿಗಳಿದ್ದರೆ ರುಚಿ ಅದ್ಭುತ. ಹೀಗಾಗಿ ಹಲವರು ಸಂಜೆ ಸಮಯದಲ್ಲಿ ಬಿಸ್ಕೆಟ್, ಪಾನಿಪೂರಿ, ಗೊಬಿ, ಚಿಪ್ಸ್ ಹೀಗೆ ಏನಾದರು ಒಂದು ಸ್ನ್ಯಾಕ್ಸ್ ಸವಿಯುತ್ತಾರೆ. ಅದರಲ್ಲೂ ಮನೆಯಲ್ಲೇ ಮಾಡಿದ ಕರಿದ ಕಡ್ಲೆಗಳು ಬಾಯಲ್ಲಿ ನೀರು ತರಿಸುತ್ತವೆ.
ಕಡ್ಲೆಗಳು ಅಂದ್ರೆ, ಶೇಂಗಾ, ಬೇಳೆ, ಹುಡಿಗಡಲೆ ಕರಿದು ಸವಿಯುವ ಅಭ್ಯಾಸ ಇರುತ್ತದೆ. ಕಡಲೆಗಳಲ್ಲಿ ಹತ್ತಾರು ವಿಧವಾದ ಖಾದ್ಯ ಮಾಡಬಹುದು. ಮಸಾಲೆಗಳು ಮಾತ್ರ ಬದಲಾಗುತ್ತದೆ. ಹಾಗಾದ್ರೆ ನಾವಿಂದು ಬಿಡಿ ಶೇಂಗಾ ಮಸಾಲೆಯನ್ನು ಮಾಡುವುದನ್ನು ನೋಡೋಣ. ಬಿಡಿ ಶೇಂಗಾ ಮಸಾಲೆಯು ಬೇಕರಿಗಳಲ್ಲಿ, ಅಂಗಡಿಗಳಲ್ಲಿ ಸಿಗುತ್ತದೆ.

ಈ ಶೇಂಗಾ ಬೀಜವನ್ನು ಬಿಡಿಸಿ, ಎರಡು ಪೀಸ್ ಮಾಡಿ ಮಸಾಲೆ ಹಾಕಿ ಕರಿದಿರುತ್ತಾರೆ. ಈಗ ಇಂತಹ ಮಸಾಲೆ ಕಡ್ಲೆ ಪ್ಲಾಸ್ಟಿಕ್ ಪ್ಯಾಕೇಟ್ನಲ್ಲಿ ಸಿಗುತ್ತವೆ. ಆದ್ರೆ ದುಬಾರಿ ಬೆಲೆಯಾಗಿರುತ್ತೆ. ಹಾಗಾದ್ರೆ ನಾವು ಮನೆಯಲ್ಲೇ ಬಿಡಿ ಶೇಂಗಾ ಮಸಾಲೆಯನ್ನು ಮಾಡುವುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಬಿಡಿ ಶೇಂಗಾ ಮಸಾಲೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕಾಗುತ್ತದೆ?, ಮಾಡುವಾಗ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಿಡಿ ಶೇಂಗಾ ಮಸಾಲೆ ಮಾಡಲು ಬೇಕಾಗುವ ವಸ್ತುಗಳೇನು?
ಶೇಂಗಾ ಕಡಲೆ ಬೀಜ - 2 ಕಪ್
ಖಾರದ ಒಉಡಿ
ಕರಿಮೆಣಸಿನ ಪುಡಿ 1 ಟೀಸ್ಪೂನ್
ಅರಿಶಿನ ಪುಡಿ
ಕರಿಬೇವು
ಉಪ್ಪು
ಎಣ್ಣೆ
ಬಿಡಿ ಶೇಂಗಾ ಮಸಾಲೆ ಮಾಡುವುದು ಹೇಗೆ?
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದು ಬಿಸಿಯಾದ ಬಳಿಕ ಆ ಪಾತ್ರೆಗೆ 2 ಬೌಲ್ನ ಶೇಂಗಾ ಬೀಜವನ್ನು ಹಾಕಿಕೊಂಡು 5 ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ಶೇಂಗಾ ಬೀಜ ಕಪ್ಪಗಾಗುವಂತೆ ಮಾಡಬಾರದು. ಕೈ ಆಡಿಸುತ್ತಾ ಇರಿ. 5 ನಿಮಿಷ ಹುರಿದುಕೊಂಡ ಬಳಿಕ ಒಲೆ ಆಫ್ ಮಾಡಿಕೊಂಡು ಶೇಂಗಾವನ್ನು ತಟ್ಟೆಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.
ಶೇಂಗಾ ತಣ್ಣಗಾದ ಬಳಿಕ ಅದರ ಸಿಪ್ಪೆ ತೆಗೆಯಬೇಕಾಗುತ್ತದೆ. ಸ್ವಲ್ಪ ಕೈಯಲ್ಲಿ ಹಿಡಿದು ಉಜ್ಜಿದರೆ ಸಿಪ್ಪೆ ಬಿಡುತ್ತದೆ ಹಾಗೆ ಎರಡು ಪೀಸ್ಗಳಾಗುತ್ತವೆ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾಗಲು ಬಿಡಿ. ನಂತರ ಇದಕ್ಕೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಶಿನ ಪುಡಿ, ಉಪ್ಪು, ಕರಿಬೇವು ಸೇರಿಸಿ ಫ್ರೈ ಮಾಡಿ. 1 ನಿಮಿಷಕ್ಕಿಂತ ಹೆಚ್ಚು ಸಮಯ ಫ್ರೈ ಮಾಡಬೇಡಿ.
ಈಗ ರೆಡಿ ಮಾಡಿಕೊಂಡಿರುವ ಶೇಂಗಾ ಬೀಜವನ್ನು ಈ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲಾ ಶೇಂಗಾ ಬೀಜಕ್ಕೂ ಮಸಾಲೆ ಹಿಡಿಯುವಂತೆ ಚೆನ್ನಾಗಿ ಕಲಸಿಕೊಳ್ಳಿ. 2 ನಿಮಿಷಗಳ ಕಾಲ ಹುರಿದುಕೊಂಡರೆ ಸಾಕು. ಇಷ್ಟಾದರೆ ನಿಮ್ಮ ಮುಂದೆ ಬಿಡಿ ಶೇಂಗಾ ಮಸಾಲೆ ಕಡಲೆ ರೆಡಿಯಾಗುತ್ತದೆ. ಈ ರುಚಿಗೆ ನೀವು ದಿನ ಮಾಡಿ ಸವಿಯುತ್ತೀರಿ, ಸಂಜೆ ಸಮಯದಲ್ಲಿ ಸವಿಯಲು ಇದಕ್ಕಿಂತ ಮತ್ತೊಂದು ತಿಂಡಿ ಯಾವುದೂ ಇಲ್ಲ ಎನಿಸುತ್ತೆ.



Click it and Unblock the Notifications
