Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತಿಳಿಸಾರು ಮಜ್ಜಿಗೆಗೆ ಈ ಸಿಂಗಲ್ ಬೀನ್ಸ್ ಪಲ್ಯ ಮಾಡಿ..! ಬಾಯಲ್ಲಿ ನೀರು ತರಿಸುವ ರುಚಿ ಇದು!
ಬೀನ್ಸ್ ಆರೋಗ್ಯಕ್ಕೆ ಎಷ್ಟು ಮುಖ್ಯವಾದ ತರಕಾರಿ ಅನ್ನೋದನ್ನು ನೀವು ಕೇಳಿರಬಹುದು. ಬೀನ್ಸ್ನಲ್ಲಿರುವ ಅತಿಯಾದ ಫೈಬರ್ ನಿಮ್ಮ ಜೀರ್ಣಕ್ರಿಯೆಗೆ ಅತ್ಯಂತ ಸಹಕಾರಿಯಾಗಿರಲಿದೆ. ಬೀನ್ಸ್ ನಲ್ಲಿ ಇರುವ ಪೋಷಕಾಂಶಗಳು ಸಂಪೂರ್ಣ ಆರೋಗ್ಯವನ್ನು ಸುಧಾರಿಸಲಿವೆ. ಈ ಬೀನ್ಸ್ನಲ್ಲಿರುವ ವಿಟನಿನ್ ಸಿ ಅಂಶ ನಿಮ್ಮ ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಬಹಳ ಉತ್ತಮ. ಹಾಗೆ ಬೀನ್ಸ್ನಲ್ಲಿರುವ ವಿಟಮಿನ್ ಕೆ ಅಂಶವಿ ಮೂಳೆಗಳ ಆರೋಗ್ಯಕ್ಕೂ ಬಹಳ ಉತ್ತಮ.
ಇನ್ನು ಇಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿರುವ ಬೀನ್ಸ್ ನಿಂದ ಎಷ್ಟೊಂದು ಬಗೆಯ ಖಾದ್ಯಗಳ ತಯಾರಿಸಬಹುದು ಎಂಬುದನ್ನು ನೀವು ತಿಳಿದಿರಬಹುದು. ಬೀನ್ಸ್ ಬಳಸಿ ಮಾಡುವಂತಹ ಸಾಂಬಾರ್ ಬಹಳ ರುಚಿಕರವಾಗಿರಲಿದೆ. ಹಾಗೆ ಬೀನ್ಸ್ ಅನ್ನು ಪಲಾವ್ಗೂ ಬಳಸುತ್ತಾರೆ, ಫ್ರೈಡ್ ರೈಸ್ ರೀತಿಯ ಖಾದ್ಯಗಳಿಗೂ ರುಚಿ ಹೆಚ್ಚಿಸಲಿದೆ. ಹಾಗೆ ಬೀನ್ಸ್ ಪಲ್ಯ ಸಹ ಎಲ್ಲರಿಗೂ ಇಷ್ಟವಾಗುತ್ತೆ.

ಅದರಲ್ಲೂ ಮದುವೆ ಮನೆಯಲ್ಲಿ ನೀವು ಸವಿದಿರುವ ಬೀನ್ಸ್ ಪಲ್ಯ ಎಲ್ಲರಿಗೂ ಇಷ್ಟವಾಗುತ್ತೆ. ಆ ರುಚಿಯಲ್ಲಿ ನೀವು ಮನೆಯಲ್ಲೆ ಮಾಡಲು ಪ್ರಯತ್ನಿಸಿರಬಹುದು. ಬೀನ್ಸ್ ಹಾಗೆ ತೆಂಗಿನ ತುರಿ ಹೆಚ್ಚಾಗಿ ಬಳಸಿ ಮಾಡುವಂತಹ ಈ ಪಲ್ಯ ನೀವು ಸವಿದರೆ ಬಾಯಲ್ಲಿ ನೀರು ಬರುತ್ತದೆ. ಈ ಸಿಂಗಲ್ ಬೀನ್ಸ್ ಪಲ್ಯ ಊಟ ಹಾಗೆ ತಿಂಡಿಯ ಜೊತೆಗೂ ಕೂಡ ಅದ್ಬುತವಾದ ರುಚಿ ನೀಡಲಿದೆ.
ಹಾಗಾದ್ರೆ ಈ ಆರೋಗ್ಯಕರ ಅಂಶ ಹೊಂದಿರುವ ಬೀನ್ಸ್ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮದುವೆ ಮನೆಯಲ್ಲಿ ಮಾಡುವಂತಹ ಈ ರುಚಿಕರ ಬೀನ್ಸ್ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೀನ್ಸ್
- ತೆಂಗಿನ ಕಾಯಿ ತುರಿ
- ಈರುಳ್ಳಿ
- ಬ್ಯಾಡಗಿ ಮೆಣಸಿನಕಾಯಿ
- ಸಾಸಿವೆ
- ಇಂಗು
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಜೀರಿಗೆ
- ಅರಿಶಿನ ಪುಡಿ
- ಬೆಲ್ಲ
- ಶುಂಠಿ
- ಉಪ್ಪು
- ಎಣ್ಣೆ
ರುಚಿಕರ ಬೀನ್ಸ್ ಪಲ್ಯ ಮಾಡುವುದು ಹೇಗೆ?
ಮೊದಲಿಗೆ ಬೀನ್ಸ್ ಅನ್ನು ತೊಳೆದು ಸಣ್ಣದಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಈ ಬೀನ್ಸ್ ಅನ್ನು ಹಾಕಿಕೊಂಡು ನೀರು ಹಾಕಿ ಉಪ್ಪು, ಅರಶಿಣ ಸಹ ಹಾಕಿಕೊಂಡು ಮುಚ್ಚಳ ಮುಚ್ಚಿ ಒಂದು ಸೀಟಿ ಹೊಡೆಯಲು ಬಿಡಿ. ಬಳಿಕ ತಣ್ಣಗಾಗಲು ಬಿಡಿ. ಈಗ ಇನ್ನೊಂದು ಕಡೆ ಮಿಕ್ಸಿ ಜಾರ್ ತೆಗೆದುಕೊಳ್ಳಿ.
ಆ ಮಿಕ್ಸಿ ಜಾರ್ಗೆ ಒಣ ಮೆಣಸು, ಬೆಲ್ಲ, ಜೀರಿಗೆ, ಸಾಸಿವೆ, ಬೆಲ್ಲ, ಶುಂಠಿ, ಕರಿಬೇವು, ಅರಶಿಣ ಹಾಕಿಕೊಂಡು ತರಿ ತರಿಯಾಗು ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿಯನ್ನು ಸಹ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ. ಇದು ತರಿತರಿಯಾಗಿ ಬರಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
ನಂತರ ಇದಕ್ಕೆ ಸಾಸಿವೆ, ಇಂಗು, ಕರಿಬೇವು, ಈರುಳ್ಳಿ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿರುವ ಮಸಾಲೆಯನ್ನು ಹಾಕಿಕೊಂಡು 1 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ನಂತರ ಕುಕ್ಕರ್ನಲ್ಲಿ ಬೇಯಿಸಿದ್ದ ಬೀನ್ಸ್ ಅನ್ನು ಕೂಡ ಇದಕ್ಕೆ ಹಾಕಿ 2 ನಿಮಿಷ ಕೈ ಬಿಡದೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಕೊನೆಯದಾಗಿ ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮದುವೆ ಮನೆ ಶೈಲಿಯ ಬೀನ್ಸ್ ಪಲ್ಯ ರೆಡಿಯಾಗುತ್ತದೆ. ಒಮ್ಮೆ ಈ ವಿಧಾನದಲ್ಲಿ ಮಾಡಿದ್ರೆ ಪದೇ ಪದೇ ಮಾಡಿಯೇ ಮಾಡುತ್ತೀರಿ.



Click it and Unblock the Notifications
