Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶಾವಿಗೆ ಉಪ್ಪಿಟ್ಟು ಅಂಟು ಅಂಟಾಗದಂತೆ ಹುಡಿಯಾಗಿ ಮಾಡೋದು ಹೇಗೆ? ಈ ಟಿಪ್ಸ್ ಬಳಸಿ!
ನೀವು ಬೆಳಗ್ಗೆ ತಿಂಡಿಯ ಸಮಯಕ್ಕೆ ರುಚಿ ರುಚಿಯಾದ ತಿಂಡಿಗಳನ್ನು ಮಾಡಿ ಸವಿಯುವುದು ಕಾಮನ್. ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕಂತು ನೀವು ಅನ್ನ ಮಾಡಿರುತ್ತೀರಿ. ಹೀಗಾಗಿ ಬೆಳಗ್ಗೆ ತಿಂಡಿಗೆ ವಿಶೇಷವಾಗಿ ಹಾಗೆ ವಿಭಿನ್ನ ರುಚಿ ನೀಡುವಂತಹ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಅದ್ರಲ್ಲೂ ಶಾವಿಗೆಯಿಂದ ಕೂಡ ಮಾಡುವ ಹಲವು ರುಚಿಯ ಖಾದ್ಯಗಳ ಸವಿಯಲು ಎಲ್ಲರು ಇಷ್ಟಪಡುತ್ತಾರೆ.
ಹಾಗೆ ನಾವಿಂದು ರುಚಿ ರುಚಿಯಾಗಿ ಮನೆಯಲ್ಲಿ ಮಾಡುವಂತಹ ಶಾವಿಗೆ ಉಪ್ಪಿಟ್ಟಿನ ಕುರಿತು ನಾವು ತಿಳಿದುಕೊಳ್ಳೋಣ. ನೀವು ಕೂಡ ಮನೆಯಲ್ಲಿ ಈ ಶಾವಿಗೆ ಉಪ್ಪಿಟ್ಟು ಮಾಡಿರಬಹುದು. ಆದ್ರೆ ಮನೆಯಲ್ಲಿ ಮಾಡಿದಾಗ ಅದು ಗಟ್ಟಿಯಾಗಿ ಇಲ್ಲವೆ ಹುಡಿ ಹುಡಿಯಾಗಿ ಬಾರದೆ ಅಂಟು ಅಂಟಾಗಿ ಬಂದಿರಬಹುದು. ಆದ್ರೆ ನಾವಿಂದು ಸುಲಭವಾಗಿ ಮಾಡುವ ವಿಧಾನ ಕುರಿತು ತಿಳಿದುಕೊಳ್ಳೋಣ.

ಶಾವಿಗೆ ಉಪ್ಪಿಟ್ಟು ಬಹಳ ರುಚಿ ರುಚಿಯಾಗಿ ಮಾಡಬಹುದು. ಆದ್ರೆ ನೀವು ಮಾಡಿದಾಗಲೆಲ್ಲ ಗಟ್ಟಿಯಾಗಿಯೂ ಇಲ್ಲವೆ ಅಂಟು ಅಂಟಾಗಿ ಬರುತ್ತಿದ್ದರೆ ಈ ರೀತಿಯ ವಿಧಾನ ಅನುಸರಿಸಿ. ಇದರಿಂದ ಉಪ್ಪಿಟ್ಟು ಹುಡಿ ಹುಡಿಯಾಗಿ ರುಚಿಯಾಗಿಯು ಮಾಡಬಹುದು. ಹಾಗಾದ್ರೆ ಈ ಶಾವಿಗೆ ಉಪ್ಪಿಟ್ಟು ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶಾವಿಗೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶಾವಿಗೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಶಾವಿಗೆ
- ಕರಿಬೇವು
- ಕಡಲೆ ಬೇಳೆ
- ಒಣ ಮೆಣಸು
- ಹಸಿ ಮೆಣಸು
- ಅರಶಿಣ
- ಉಪ್ಪು
- ತುಪ್ಪ/ ಎಣ್ಣೆ
- ಉದ್ದಿನ ಬೇಳೆ
- ಗೋಡಂಬಿ
- ಕೊತ್ತಂಬರಿ
- ನಿಂಬೆ ಹಣ್ಣು
ಶಾವಿಗೆ ಉಪ್ಪಿಟ್ಟು ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ನೀರು ಇಟ್ಟು ಕುದಿಬರಲು ಬಿಡಿ. ನೀರು ಕುದಿಬರುವಾಗ 1 ಕಪ್ ಶಾವಿಗೆಯನ್ನು ನೀರಿನಲ್ಲಿ ಹಾಕಿ. 2 ನಿಮಿಷ ಬೇಯಿಸಿಕೊಂಡು ಒಂದು ಜರಡಿಯಲ್ಲಿ ಸೋಸಿಕೊಂಡು ಕೊನೆಯಲ್ಲಿ ತಣ್ಣೀರು ಅದರ ಮೇಲೆ ಹಾಕಿದರೆ ಹುಡಿ ಹುಡಿಯಾಗಿ ಶಾವಿಗೆ ಬರಲಿದೆ. ಈ ಶಾವಿಗೆಯನ್ನು ಈಗ ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಇಲ್ಲವೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಹಸಿ ಮೆಣಸು, ಒಣ ಮೆಣಸು, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಕರಿಬೇವು, ಅರಶಿಣ, ಉಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷ ಬೇಯಿಸಿಕೊಂಡ ಬಳಿಕ ಇದಕ್ಕೆ ಮೊದಲು ಬೇಯಿಸಿಕೊಂಡ ಶಾವಿಗೆಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಮಿಕ್ಸ್ ಮಾಡಿದ ಬಳಿಕ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ಮುಚ್ಚಳ ಮುಚ್ಚಿ 2 ನಿಮಿಷ ಸಣ್ಣ ಉರಿಯಲ್ಲಿ ಬಿಡಿ. ಅನಂತರ ಮುಚ್ಚಳ ತೆರೆದು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಶಾವಿಗೆ ಉಪ್ಪಿಟ್ಟು ರೆಡಿಯಾಗುತ್ತದೆ. ನೀವು ಕೂಡ ಇದನ್ನು ಸವಿದು ನೋಡಿ. ಎಲ್ಲರಿಗೂ ಇಷ್ಟವಾಗುತ್ತೆ, ಹಾಗೆ ಇದು ಅಂಟು ಅಂಟಾಗಿ ಇರುವುದಿಲ್ಲ ಹುಡಿ ಹುಡಿಯಾಗಿ ಬರಲಿದೆ. ನೀವು ಕೂಡ ಬಳಗ್ಗೆ ಇದನ್ನು ಸವಿದು ನೋಡಿ. ಈ ವಿಧಾನವಾಗಿ ಮಾಡಿದ್ರೆ ರುಚಿ ಕೂಡ ಅದ್ಭುತವಾಗಿಲಿದೆ. ನೀವು ಕೂಡ ಟ್ರೈ ಮಾಡಿ ನೋಡಿ.



Click it and Unblock the Notifications
