Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
3 ವಸ್ತು ಇದ್ರೆ 10 ನಿಮಿಷದಲ್ಲಿ ಈ ಎಳ್ಳುಂಡೆ ಮಾಡಬಹುದು..! ಮಾಡೋದು ಹೇಗೆ?
ಎಳ್ಳಿನಿಂದ ಮಾಡುವಂತಹ ಎಲ್ಲಾ ತಿಂಡಿಗಳು ಕೂಡ ಬಹಳ ರುಚಿಕರವಾಗಿರುತ್ತೆ. ಎಳ್ಳು ಆರೋಗ್ಯಕ್ಕೂ ಬಹಳ ಉತ್ತಮ. ಎಳ್ಳಿನಿಂದ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದು ನೋಡಬಹುದು. ಕಪ್ಪು ಹಾಗೂ ಬಿಳಿ ಎರಡೂ ಎಳ್ಳುಗಳು ಕೂಡ ಆರೋಗ್ಯಕ್ಕೆ ಉತ್ತಮ. ಕಪ್ಪು ಎಳ್ಳಿನಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಇದು ಬಿಳಿ ಎಳ್ಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ.
ಇನ್ನು ಬಿಳಿ ಎಳ್ಳಿನಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಕಪ್ಪು ಎಳ್ಳಿಗಿಂತ ಕಡಿಮೆ ಪೌಷ್ಟಿಕಾಂಶ ಹೊಂದಿದ್ದರೂ, ಬಿಳಿ ಎಳ್ಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಉತ್ತಮ. ಬಿಳಿ ಎಳ್ಳಿನಲ್ಲಿ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲ ಹೊಂದಿದೆ. ಇದು ಹೃದಯದ ಆರೋಗ್ಯದ ಬಹಳ ಉತ್ತಮ. ಇನ್ನು ಅಡುಗೆಗಳಿಗೆ ಹಲವು ತಿಂಡಿಗಳಿಗೆ ಬಿಳಿ ಎಳ್ಳು ಬಳಸುವುದು ನೋಡಬಹುದು.

ಎಳ್ಳು ಆಯುರ್ವೇದದಲ್ಲೂ ಔಷಿ ಬಳಕೆಯಲ್ಲಿ ಉಪಯೋಗಿಸಲಾಗುತ್ತದೆ. ಇದರಿಂದ ಹಲವು ರೀತಿಯ ಆರೋಗ್ಯಕರ ಲಾಭಗಳ ನೋಡಬಹುದು. ಹೀಗಾಗಿ ನಾವಿಂದು ಈ ಬಿಳಿ ಎಳ್ಳು ಬಳಸಿ ಮಾಡುವಂತಹ ಉಂಡೆ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಅಂಗಡಿ ಬೇಕರಿಯಲ್ಲಿ ಈ ಎಳ್ಳಿನಿಂದ ಮಾಡಿರುವ ಹಲವು ರೀತಿಯ ಸಿಹಿ ತಿಂಡಿ ನೀವು ಕೂಡ ಸವಿದಿರಬಹುದು. ಇದರ ರುಚಿಗೆ ನೀವು ಕೂಡ ಫಿದಾ ಆಗುತ್ತೀರಿ.
ಬಿಳಿ ಎಳ್ಳು ಹಾಕಿ ಮಾಡುವಂತಹ ಎಲ್ಲಾ ತಿಂಡಿಗಳು ಅದ್ಭುತ ರುಚಿ ನೀಡಲಿದೆ. ಅದರಲ್ಲೂ ಬಿಳಿ ಎಳ್ಳಿನ ಉಂಡೆ ರುಚಿ ರುಚಿಯಾಗಿ ಮಾಡಿದ್ರೆ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ಮಕ್ಕಳಿಗಂತು ಈ ಎಳ್ಳು ಉಂಡೆ ಬಹಳ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಈ ಬಿಳಿ ಎಳ್ಳಿನ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಿಳಿ ಎಳ್ಳು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಬಿಳಿ ಎಳ್ಳು
ತುಪ್ಪ
ಬೆಲ್ಲ
ಏಲಕ್ಕಿ ಪುಡಿ
ಬಿಳಿ ಎಳ್ಳು ಉಂಡೆ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಬಿಳಿ ಎಳ್ಳು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಎಳ್ಳು 3 ನಿಮಿಷ ಹುರಿದಾಗ ಅದು ಸುವಾಸನೆ ಬರಲಿದೆ. ಜಾಸ್ತಿ ಸಮಯ ಹುರಿದರೆ ಕಹಿಯಾಗುತ್ತದೆ. ಈಗ ಎಳ್ಳು ತೆಗೆದು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಪುಡಿ ಬೆಲ್ಲ ಹಾಕಿಕೊಂಡು ಕರಗಲು ಬಿಡಿ. ಹಾಗೆ ಇದಕ್ಕೆ 1 ಸ್ಪೂನ್ ತುಪ್ಪ ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿದರೆ ತುಪ್ಪ ಕರಗಲಿದೆ.
ಬೆಲ್ಲದ ಪಾಕ ಬರಬೇಕು. ಒಂದು ಎಳೆ ಪಾಕ ಮಾಡಿಕೊಳ್ಳಿ. ಕೊನೆಯದಾಗಿ 1 ಸ್ಪೂನ್ ಏಲಕ್ಕಿ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿಕೊಂಡು ಬಿಳಿ ಎಳ್ಳು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಪಾಕದಲ್ಲಿ ಎಳ್ಳು ಚೆನ್ನಾಗಿ ಮಿಕ್ಸ್ ಮಾಡಬೇಕು. ಪಾಕ ಚೆನ್ನಾಗಿ ಎಳ್ಳಿಗೆ ಅಂಟಿಕೊಳ್ಳಬೇಕು. ನಂತರ ಅದನ್ನು ತೆಗೆದು ಒಂದು ಪ್ಲೇಟ್ಗೆ ಹಾಕಿಕೊಂಡು ಬಿಸಿ ಆದಾಗಲೇ ಕೈಗೆ ಎಣ್ಣೆ ಹಚ್ಚಿಕೊಂಡು ಉಂಡೆ ಕಟ್ಟಿಕೊಳ್ಳಲು ಮುಂದಾಗಿ.
ಉಂಡೆ ಮಾಡಿ ಗಟ್ಟಿಯಾಗಲು ಬಿಡಿ. ಉಂಡೆ ಗಟ್ಟಿಯಾದ ಬಳಿಕ ಸವಿಯಲು ನೀಡಬಹುದು. ಇದನ್ನು ಬಹಳ ಸುಲಭವಾಗಿ 3 ವಸ್ತು ಇದ್ದರೆ ಮಾಡಬಹುದು. ನೀವು ಕೂಡ ಈ ಎಳ್ಳುಂಡೆ ಮಾಡಿ ಸವಿದು ನೋಡಿ. ಎಳ್ಳಿನ ಆರೋಗ್ಯಕರ ಅಂಶಗಳಿಂದ ಮತ್ತಷ್ಟು ರುಚಿಕರವಾಗುತ್ತೆ. ಮಾಡುವ ವಿಧಾನವನ್ನು ನೀವು ನಿಮ್ಮ ಪ್ರಮಾಣಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಿ.



Click it and Unblock the Notifications