ಶ್ರಾವಣ ಉಪವಾಸಕ್ಕೆ ಬೆಸ್ಟ್ ಫುಡ್! ಟೇಸ್ಟಿ & ಹೆಲ್ದಿ 'ಸಬ್ಬಕ್ಕಿ ಪರೋಟ' ಒಮ್ಮೆ ಟ್ರೈ ಮಾಡಿ

Posted By:

ಉಪವಾಸದಲ್ಲಿ ಏನು ತಿನ್ನೋದು? ಈ ಟೇಸ್ಟಿ & ಹೆಲ್ದಿ ಸಾಬುದಾನ ಪರೋಟ ಮಾಡಿ ನೋಡಿ. ಹೊಟ್ಟೆ ತುಂಬುತ್ತೆ ಮತ್ತು ಮಾಡೋದು ತುಂಬಾ ಸುಲಭ. ಹೌದು, ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ರುಚಿಕರವಾದ ಮತ್ತು ಶಕ್ತಿಯುತವಾದ ಸಬ್ಬಕ್ಕಿ ಪರೋಟವನ್ನು (Sabudana Paratha) ಒಮ್ಮೆ ಟ್ರೈ ಮಾಡಿ. ಇದು ರುಚಿಕರ ಮಾತ್ರವಲ್ಲದೆ, ಹೊಟ್ಟೆಗೂ ಹಗುರವಾಗಿರುತ್ತದೆ ಮತ್ತು ಶಕ್ತಿಯಿಂದ ತುಂಬಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಮೊಸರು ಅಥವಾ ವ್ರತಕ್ಕೆ ಅನುಕೂಲಕರವಾದ ಚಟ್ನಿಯೊಂದಿಗೆ ಸವಿಯಲು ಇದು ರುಚಿಕರವಾಗಿರುತ್ತದೆ. ಸಬ್ಬಕ್ಕಿ ಪರೋಟಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಸಬ್ಬಕ್ಕಿ ಪರೋಟವನ್ನು ತಯಾರಿಸುವುದು ಹೇಗೆ (Sabudana Paratha Recipe) ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಶ್ರಾವಣ ಮಾಸದ ಆಗಮನದೊಂದಿಗೆ ಪರಿಸರವು ಹೊಸ ಚೈತನ್ಯ ಮತ್ತು ಭಕ್ತಿಯಿಂದ ತುಂಬಿರುತ್ತದೆ. ಹಚ್ಚ ಹಸಿರಿನಿಂದ ಕೂಡಿದ ವಾತಾವರಣ, ತಂಪಾದ ಗಾಳಿ ಮತ್ತು ಶಿವನ ಆರಾಧನೆಯು ಈ ಮಾಸದ ವಿಶೇಷತೆ. ಈ ಸಮಯದಲ್ಲಿ ಸೋಮವಾರದಂದು ಉಪವಾಸ ಮಾಡುವುದು ಒಂದು ಮುಖ್ಯ ಸಂಪ್ರದಾಯವಾಗಿದೆ. ಹಣ್ಣುಗಳು ಮತ್ತು ಲಘು ಆಹಾರಗಳು ಸಾಮಾನ್ಯವಾಗಿ ಸೇವಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಬಿಸಿ ಮತ್ತು ರುಚಿಕರವಾದ ಆಹಾರವನ್ನು ಸೇವಿಸಲು ಬಯಸುವಿರಿ. ನೀವು ಪ್ರತೀ ಸಲ ಸಬುದಾನ ಖಿಚಡಿ ಅಥವಾ ಸಬ್ಬಕ್ಕಿ ಟಿಕ್ಕಿಯನ್ನು ತಿಂದು ಬೇಸರಗೊಂಡಿದ್ದರೆ, ಸಬ್ಬಕ್ಕಿ (Sabbakki) ಪರೋಟ ಪ್ರಯತ್ನಿಸಿ. ಇದು ರುಚಿಕರ ಮತ್ತು ತೃಪ್ತಿಕರ ಮಾತ್ರವಲ್ಲದೆ, ಉಪವಾಸಕ್ಕೆ ಸೂಕ್ತವಾಗಿದೆ.

How To Make Sabudana Paratha Recipe

ಸಬ್ಬಕ್ಕಿ ಪರೋಟಕ್ಕೆ ಬೇಕಾಗುವ ಸಾಮಗ್ರಿಗಳು

• 1 ಕಪ್ ಸಾಬುದಾನ (ನೆನೆಸಿದ ಸಬ್ಬಕ್ಕಿ)
• 2 ಬೇಯಿಸಿದ ಆಲೂಗಡ್ಡೆ
• ರುಚಿಗೆ ತಕ್ಕಷ್ಟು ಕಲ್ಲು ಉಪ್ಪು
• 1-2 ಹಸಿ ಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ್ದು)
• 2 ಚಮಚ ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ್ದು)
• ½ ಚಮಚ ಜೀರಿಗೆ
• 1 ಚಮಚ ನಿಂಬೆ ರಸ
• ¼ ಚಮಚ ಕರಿಮೆಣಸಿನ ಪುಡಿ
• ಕರಿಯಲು ತುಪ್ಪ ಅಥವಾ ಎಣ್ಣೆ

ಸಬ್ಬಕ್ಕಿ ಪರೋಟ ಮಾಡುವ ವಿಧಾನ

ಮೊದಲಿಗೆ, ಸಬ್ಬಕ್ಕಿ ಅಥವಾ ಸಾಬುದಾನವನ್ನು 2 ರಿಂದ 3 ಬಾರಿ ಚೆನ್ನಾಗಿ ತೊಳೆಯಿರಿ. ನಂತರ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನೆನೆಸಿದ ಬಳಿಕ, ಒಂದು ದೊಡ್ಡ ಬಟ್ಟಲಿನಲ್ಲಿ ಸಬ್ಬಕ್ಕಿ, ಬೇಯಿಸಿದ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕರಿಮೆಣಸಿನ ಪುಡಿ, ಕಲ್ಲು ಉಪ್ಪು ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟು ತುಂಬಾ ಜಿಗುಟಾಗಿದ್ದರೆ, ಸ್ವಲ್ಪ ರಜಗೀರ ಹಿಟ್ಟು ಅಥವಾ ನೀರಿನ ಚೆಸ್ಟ್ನಟ್ ಹಿಟ್ಟನ್ನು ಬೆರಸಿ.

Sabudana Paratha Recipe

ಇದಾದ ಬಳಕ, ನಿಮ್ಮ ಕೈಗಳಿಗೆ ತುಪ್ಪವನ್ನು ಸವರಿಕೊಂಡು, ಸಣ್ಣಗೆ ಉಂಡೆಗಳನ್ನು ಕಟ್ಟಿ. ಪ್ರತಿಯೊಂದು ಉಂಡೆಯನ್ನು ಗ್ರೀಸ್ ಮಾಡಿದ ಪ್ಲಾಸ್ಟಿಕ್ ಹಾಳೆಗಳ ನಡುವೆ ಇಟ್ಟು, ಲಟ್ಟಿಸಿ. ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಅಥವಾ ಕಡಲೆಕಾಯಿ ಎಣ್ಣೆ ಹಾಕಿ. ಲಟ್ಟಿಸಿದ ಪರೋಟವನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡು ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಬೇಯಿಸಿ. ಇಷ್ಟು ಮಾಡಿದರೆ, ಬಿಸಿ ಬಿಸಿಯಾದ ಸಬ್ಬಕ್ಕಿ ಪರೋಟ ಸವಿಯಲು ಸಿದ್ಧ.

ನೀವು ಸಬ್ಬಕ್ಕಿ ಪರೋಟವನ್ನು ಮೊಸರು, ಕಲ್ಲು ಉಪ್ಪು ಮತ್ತು ಹುರಿದ ಜೀರಿಗೆಯೊಂದಿಗೆ ಸವಿಯಬಹುದು. ನೀವು ಕೊತ್ತಂಬರಿ-ಪುದೀನ ಚಟ್ನಿಯೊಂದಿಗೆ ಕೂಡ ತಿನ್ನಬಹುದು. ಬೇಕಿದ್ದರೆ, ಹುರಿದ ಶೇಂಗಾ ಬೀಜಗಳನ್ನು ಸೇರಿಸಬಹುದು. ಸಬ್ಬಕ್ಕಿಯನ್ನು ಸರಿಯಾಗಿ ನೆನೆಸಿ. ಇಲ್ಲದಿದ್ದರೆ ಅದು ಮೆತ್ತಗಾಗಿರುತ್ತದೆ. ಪರೋಟವನ್ನು ಸಣ್ಣ ಉರಿಯಲ್ಲಿ ಬೇಯಿಸಿ. ತುಪ್ಪವು ಉತ್ತಮ ರುಚಿಯನ್ನು ನೀಡುತ್ತದೆ. ಆದರೆ, ಕಡಲೆಕಾಯಿ ಎಣ್ಣೆಯನ್ನು ಸಹ ಬಳಸಬಹುದು.

Sabudana Paratha

ಉಪವಾಸಕ್ಕೆ ಸಬ್ಬಕ್ಕಿ ಪರೋಟ ಒಳ್ಳೆಯದೇ?

ಉಪವಾಸದ ಸಮಯದಲ್ಲಿ ಸಬ್ಬಕ್ಕಿ ಪರೋಟ ಒಳ್ಳೆಯ ಆಯ್ಕೆಯೆ? ಎಂಬುವುದು ಹಲವರ ಪ್ರಶ್ನೆ. ಹೌದು, ಏಕೆಂದರೆ ಇದು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಸಬ್ಬಕ್ಕಿಯು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಶಕ್ತಿಯನ್ನು ನೀಡುತ್ತದೆ. ಆಲೂಗಡ್ಡೆ ಮತ್ತು ಮಸಾಲೆಗಳು ವಿಟಮಿನ್ ಸಿ ಮತ್ತು ರುಚಿಯನ್ನು ಹೆಚ್ಚಿಸುತ್ತವೆ. ಹಾಗಾಗಿ, ಈ ಶ್ರಾವಣದಲ್ಲಿ ಸಬ್ಬಕ್ಕಿ ಖಿಚಡಿಯನ್ನು ಬಿಟ್ಟು, ಈ ರುಚಿಕರವಾದ ಮತ್ತು ಶಕ್ತಿಯುತವಾದ ಸಬ್ಬಕ್ಕಿ ಪರೋಟವನ್ನು ಟ್ರೈ ಮಾಡಿ. ಇದು ತಯಾರಿಸಲು ಸುಲಭ ಮತ್ತು ಉಪವಾಸಕ್ಕೆ ಹೇಳಿಮಾಡಿಸಿದಂತಿದೆ.

[ of 5 - Users]
X
Desktop Bottom Promotion