Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆಯಲ್ಲೇ ಸಖತ್ ರುಚಿಯ ಸಮೋಸಾ ಮಾಡಿ ನೋಡಿ..!
ನೀವು ಸ್ನ್ಯಾಕ್ಸ್ ಪ್ರಿಯರಾಗಿದ್ದರೆ ಬೇಕರಿಯಲ್ಲೋ ಅಥವಾ ಅಂಗಡಿಯಲ್ಲೋ ಸಮೋಸಾ ನೋಡಿ ಬಾಯಲ್ಲಿ ನೀರು ಸುರಿಸಿರುತ್ತೀರಿ. ಅಲ್ಲದೆ ಹಣ ಕೊಟ್ಟು ಖರೀದಿ ರುಚಿ ನೋಡಿರುತ್ತೀರಿ. ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಖಾದ್ಯ ಎಂದರೆ ಅದು ಸಮೋಸಾ ಆಗಿದೆ. ಪ್ರತಿ ಬೀದಿ ಬೀದಿಯಲ್ಲು ಸಮೋಸಾ ಮಾರುವವರು ಅಲ್ಲಿ ಕಾಣಸಿಗುತ್ತಾರೆ. ಸಂಜೆ ಸ್ನ್ಯಾಕ್ಸ್ಗೆ ಸಮೋಸಾಕ್ಕಿಂತ ಅದ್ಭುತ ರುಚಿಯ ತಿಂಡಿ ಮತ್ತೊಂದಿಲ್ಲ.
ಇನ್ನೂ ಟೀ-ಕಾಫಿ ಜೊತೆ ಸವಿಯಲು ಸಮೋಸಾ ಬಿಟ್ಟರೆ ಮತ್ತೊಂದು ತಿಂಡಿ ಸಿಗಲು ಸಾಧ್ಯವಿಲ್ಲ. ಹಲವು ಕಡೆಗಳಲ್ಲಿ ಟೀ ಜೊತೆ ಸಮೋಸಾವನ್ನೇ ಸವಿಯಲು ನೀಡುತ್ತಾರೆ. ಇನ್ನು ಭಾರತೀಯ ಮೂಲದ ಸಮೋಸಾ ವಿದೇಶದಲ್ಲೂ ಸಹ ಫೇಮಸ್ ಆಗಿದೆ. ಇದನ್ನು ಬೇಕರಿಯಲ್ಲಿ ಹಣ ನೀಡಿ ಖರೀದಿಸುವವರೆ ಹೆಚ್ಚು. ಆದರೆ ಮನೆಯಲ್ಲೇ ಮಾಡಿ ತಿಂದರೆ ಅದರ ರುಚಿಯೇ ಬೇರೆ.

ಹಾಗಾದರೆ ನಾವಿಂದು ರುವಿ ರುಚಿಯ ಸಮೋಸಾವನ್ನು ಮನೆಯಲ್ಲೇ ಮಾಡುವುದು ಹೇಗೆ? ಸಮೋಸಾ ಮಾಡಲು ಬೇಕಾಗುವ ಪದಾರ್ಥಗಳೇನು? ಸಮೋಸಾ ಮಾಡುವ ಸರಿಯಾದ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಒಂದೊಂದಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರುಚಿಕರ ಸಮೋಸಾ ಮಾಡಲು ಬೇಕಾಗುವ ಪದಾರ್ಥಗಳು
- ಸಮೋಸಾ ಹಿಟ್ಟಿನ ಹಾಳೆಗಳು
- ಈರುಳ್ಳಿ- 4
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಎಲೆಕೋಸು - 1/2 ಕಪ್
- ಕ್ಯಾರೆಟ್ - 1/2 ಕಪ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಕೊತ್ತಂಬರಿ ಪುಡಿ-1/2 ಟೀಸ್ಪೂನ್
- ಜೀರಿಗೆ ಪುಡಿ - 1/2 ಟೀಸ್ಪೂನ್
- ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1/2 ಕಪ್
- ಮೈದಾ ಹಿಟ್ಟು - 1/4 ಕಪ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಸಮೋಸಾ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ (ಸ್ಲೈಸ್ ಮಾಡಿಕೊಳ್ಳಿ) ಶುಂಠಿ ಬೆಳ್ಳುಳ್ಳಿ, ಎಲೆಕೋಸು, ಕ್ಯಾರೆಟ್ ಹಾಕಿ ಫ್ರೈ ಮಾಡಿಕೊಳ್ಳಿ, ಇದಕ್ಕೆ ಉಪ್ಪು, ಗರಂ ಮಸಾಲ, ಖಾರದ ಪುಡಿ, ಅರಶಿನ ಪುಡಿ, ಧನಿಯ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಫ್ರೈ ಆದರೆ ಸಾಕು.
ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಒಳಿಕ ಒಲೆ ಆಫ್ ಮಾಡಿ. ಇನ್ನು ಈ ಸಮೋಸಾ ಮಾಡಲು ಸಮೋಸಾ ರೆಡಿಮೇಡ್ ಶೀಟ್ಗಳು ಸಿಗುತ್ತವೆ ಅಂಗಡಿಗಳು, ಆನ್ಲೈನ್ನಲ್ಲೂ ಖರೀದಿಸಬಹುದು. ಇದು ಹಿಟ್ಟಿನಿಂದ ಮೊದಲೇ ಅವರು ರೆಡಿ ಮಾಡಿರುತ್ತಾರೆ. ನಾವು ಇದನ್ನು ತಂದು ಒಂದೊಂದಾಗಿ ಮಸಾಲೆ ತುಂಬಿ ಸುತ್ತಿ ಎಣ್ಣೆಗೆ ಬಿಟ್ಟರೆ ಆಯಿತು.
ಈಗ ಒಂದು ಕಪ್ನಲ್ಲಿ ಮೈದಾಹಿಟ್ಟು ತೆಗೆದುಕೊಂಡು ಅದಕ್ಕೆ ನೀರು ಬೆರೆಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಪೇಸ್ಟ್ ಸ್ವಲ್ಪ ದಪ್ಪವಾಗಿರಲಿ. ಈ ಶೀಟ್ ಒಳಗೆ ಮಸಾಲೆ ತುಂಬುವಂತೆ ಸುತ್ತಿಕೊಳ್ಳಿ. ಅದನ್ನು ಪ್ಯಾಕ್ ಮಾಡುವಾಗ ಅದರ ಗ್ಯಾಪ್ಗೆ ಮೈದಾ ಹಿಟ್ಟಿನ ಪೇಸ್ಟ್ ಹಚ್ಚಿಕೊಂಡು ಬಂದ್ ಮಾಡಿಕೊಳ್ಳಿ.
ಬಳಿಕ ಇದನ್ನು ಎಣ್ಣೆಗೆ ಕರಿಯಲು ಹಾಕಿ. ಸುಮಾರು 5 ನಿಮಿಷಗಳ ಕಾಲ ಈ ಸಮೋಸಾವನ್ನು ಬೇಯಿಸಬೇಕು. ಇಷ್ಟಾದರೆ ನಿಮ್ಮ ಮುಂದೆ ಕರಿ ಕರಿಯ ಸಮೋಸಾ ಸವಿಯಲು ರೆಡಿಯಾಗುತ್ತದೆ. ಇದನ್ನು ಟೀ-ಕಾಫಿ ಜೊತೆ ಸವಿಯಲಯ ಬಹಳ ರುಚಿ ನೀಡುತ್ತದೆ. ಸಮೋಸಾ ಬಿಸಿ ಇದ್ದಾಗಲೇ ಸವಿಯಲು ನೀಡಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.



Click it and Unblock the Notifications
