Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸಾಂಬಾರ್ ಪುಡಿ ಬಳಸದೆ ತರಕಾರಿಯೂ ಹಾಕದೆ ಈ ಸಾಂಬಾರ್ ಮಾಡಿ..! ಎಷ್ಟು ಸುಲಭ ಗೊತ್ತಾ?
ಊಟದ ಸಮಯದಲ್ಲಿ ಒಂದು ರುಚಿ ರುಚಿ ಸಾಂಬಾರ್ ಇದ್ದರೆ ಊಟದ ರುಚಿ ದುಪ್ಪಟ್ಟಾಗುತ್ತೆ. ಹೀಗಾಗಿ ಹಲವು ಬಗೆಯ ತರಕಾರಿಯ ಬಳಸಿ ಘಮ ಘಮ ಎನ್ನುವ ಸಾಂಬಾರ್ ಮಾಡುವುದು ಸಾಮಾನ್ಯ. ಹಾಗೆ ಎಲ್ಲರಿಗೂ ವಿಭಿನ್ನ ರುಚಿಯಲ್ಲಿ ಸಾಂಬಾರ್ ಮಾಡಬೇಕು ಎಂಬ ಬಯಕೆ ಇರೋದು ಸಹಜ. ಹಾಗೆ ಉತ್ತಮ ಸಾಂಬಾರ್ ಪುಡಿ ಇದ್ದರೆ ಅಂದಿನ ಸಾಂಬಾರ್ ಬಹಳ ರುಚಿಯಾಗಿರುತ್ತೆ ಎಂದುಕೊಂಡಿರುತ್ತಾರೆ.
ಆದ್ರೆ ನಾವಿಂದು ಸಾಂಬಾರ್ ಪುಡಿಯನ್ನೇ ಬಳಸದೆ ಅದ್ಭುತ ರುಚಿಯಲ್ಲಿ ಊಟಕ್ಕೆ ಸಾಂಬಾರ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲು ತರಕಾರಿಯನ್ನು ಕೂಡ ಬಳಸದೆಯೇ ಈ ರುಚಿ ರುಚಿಯ ಸಾಂಬಾರ್ ಮಾಡಿ ಸವಿಯಬಹುದು. ಹಾಗಾದ್ರೆ ಯಾವ ರೀತಿಯಲ್ಲಿ ಈ ಸಾಂಬಾರ್ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ಸಾಂಬಾರ್ ಮಾಡಲು ಸಾಂಬಾರ್ ಪುಡಿ ಬೇಕೇ ಬೇಕು ಅನ್ನೋದು ಹಲವರ ವಾದ. ಆದ್ರೆ ಯಾವುದೇ ಪುಡಿ, ತರಕಾರಿ ಕೂಡ ಇಲ್ಲದೆ ರುಚಿ ರುಚಿ ಸಾಂಬಾರ್ ಮಾಡಬಹುದು. ಹಾಗಾದ್ರೆ ಈ ಸಾಂಬಾರ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಸಾಂಬಾರ್ ಪುಡಿ ಬಳಸದೆ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ತೊಗರಿಬೇಳೆ 1 ಕಪ್
- ಟೊಮೆಟೋ -4
- ಈರುಳ್ಳಿ -1
- ಹುಣಸೆಹಣ್ಣು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಒಣ ಮೆಣಸಿನಕಾಯಿ
- ಹಸಿಮೆಣಸಿನಕಾಯಿ
- ಬೆಳ್ಳುಳ್ಳಿ
- ಖಾರದ ಪುಡಿ
- ಅರಿಶಿನದ ಪುಡಿ
- ಜೀರಿಗೆ
- ಸಾಸಿವೆ
- ಇಂಗು
- ಉಪ್ಪು
- ಎಣ್ಣೆ
ಸಾಂಬಾರ್ ಪುಡಿ ಬಳಸದೆ ಸಾಂಬಾರ್ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಇಟ್ಟು ಅದಕ್ಕೆ 1 ಕಪ್ ತೊಗರಿ ಬೇಳೆ ತೊಳೆದು ಅದಕ್ಕೆ ಹಾಕಿ ಖಾರದ ಪುಡಿ, ಅರಶಿಣ ಪುಡಿ, 4 ಕಪ್ ನೀರು ಹಾಕಿ 4 ಟೊಮೆಟೋ ಕತ್ತರಿಸಿ ಇದಕ್ಕೆ ಹಾಕಿ 1 ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಹಾಕಿ. ಬಳಿಕ 4 ಸೀಟಿ ಹೊಡೆಯಲು ಬಿಡಿ. ನಂತರ ತಣ್ಣಗಾಗಲು ಬಿಡಿ.
ಈಗ ಕುಕ್ಕರ್ ಮುಚ್ಚಳ ತೆರೆದು ಒಂದು ಬೌಲ್ಗೆ ಅದರಲ್ಲಿನ ನೀರನ್ನು ಬಸಿದುಕೊಳ್ಳಿ. ನಂತರ ಬೇಳೆ ಹಾಗೂ ಟೊಮೆಟೋ ಅನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ನಿಂಬೆ ಹಣ್ಣನ್ನು ನೀರಿನಲ್ಲಿ ನೆನೆಸಿ ಅದನ್ನು ಕಿವುಚಿ ಈ ಕುಕ್ಕರ್ಗೆ ಹಾಕಿಕೊಳ್ಳಿ. ನಂತರ ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಇದು ಒಗ್ಗರಣೆ ಮಾಡಿಕೊಳ್ಳಲು ಮುಂದಾಗಿ.
ಎಣ್ಣೆ ಕಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಇಂಗು, ಬೆಳ್ಳುಳ್ಳಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ನಂತರ ಹಸಿ ಮೆಣಸು, ಒಣ ಮೆಣಸು ಹಾಕಿ ಫ್ರೈ ಮಾಡಿ. ಅನಂತರ ಇದಕ್ಕೆ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಕುಕ್ಕರ್ನಲ್ಲಿರುವ ಬೇಳೆಯ ಸಾರನ್ನು ಇದಕ್ಕೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಕುದಿಯಲು ಬಿಡಿ. ಸಣ್ಣ ಉರಿಯಲ್ಲಿ ಇದು ಕುದಿಯಲಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಅದ್ಭುತ ರುಚಿಯ ಸಾಂಬಾರ್ ರೆಡಿಯಾಗುತ್ತೆ, ಇದಕ್ಕೆ ಸಾಂಬಾರ್ ಪುಡಿ, ತರಕಾರಿ ಯಾವುದೂ ಅಗತ್ಯವಿಲ್ಲ.



Click it and Unblock the Notifications
