Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ತೆಂಗಿನಕಾಯಿ ಬೆಲೆ ಹೆಚ್ಚಾಗಿದ್ಯಾ? ಕಾಯಿ ಬಳಸದೆ ಮಾಡುವ ಸಾಂಬಾರ್ ಇದು..!!
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದರ ದಿಢೀರ್ ಏರಿಕೆಯಾಗಿದೆ. ಒಂದೊಂದು ಕಾಯಿಯ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಅದರಲ್ಲೂ ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಈ ತೆಂಗಿನಕಾಯಿಯ ದರ ದುಪ್ಪಟ್ಟಾಗಿದೆ. ಸಣ್ಣ ತೆಂಗಿನಕಾಯಿಯಿಂದ ಹಿಡಿದು ದೊಡ್ಡ ತೆಂಗಿನಕಾಯಿ ಕೂಡ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ಫಸಲು ಇಳಿಮುಖ ಆಗಿರುವು ದಿಢೀರ್ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ಇನ್ನು ತೆಂಗಿನಕಾಯಿ ಇಲ್ಲದೆ ಅಡುಗೆ ಕೆಲಸಗಳು ಮುಕ್ತಾಯ ಆಗೋದಿಲ್ಲ. ಸಾಂಬಾರ್ಗೆ, ಸಾರು, ಚಟ್ನಿ, ಪಲ್ಯ ಹೀಗೆ ಎಲ್ಲಾ ಖಾದ್ಯಕ್ಕೂ ತೆಂಗಿನಕಾಯಿ ಬಹಳ ಮುಖ್ಯ. ಅಡುಗೆ ರುಚಿ ಹೆಚ್ಚಿಸುವುದು ಕೂಡ ಇದೇ ತೆಂಗಿನಕಾಯಿ. ಆದ್ರೆ ನಿತ್ಯ ತೆಂಗಿನಕಾಯಿ ಬಳಸಿ ಸಾಂಬಾರ್, ಸಾರು ಮಾಡುವುದು ಈಗ ದುಬಾರಿಯಾಗುತ್ತಿದೆ. ಹಾಗಾದ್ರೆ ತೆಂಗಿನಕಾಯಿ ಬಳಸದೆಯೇ ಸಾರು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿಯೋಣ.

ಕಾಯಿ ಬಳಸದೆಯೂ ಅದ್ಭುತ ರುಚಿಯ ಸಾರು ಮಾಡಬಹುದು. ಇದು ಅನ್ನದ ಜೊತೆಗೆ ಸವಿಯಲು ಅದ್ಭುತವಾಗಿರುತ್ತೆ. ಹಾಗಾದ್ರೆ ಕಾಯಿ ಬಳಸದೆಯೇ ಸಾರು ಮಾಡುವುದು ಹೇಗೆ? ಈ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಹಾಕದೆ ಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸೀಮೆ ಬದನೆಕಾಯಿ
- ಟೊಮೆಟೋ
- ತೊಗರಿ ಬೇಳೆ
- ಸಾಸಿವೆ
- ಜೀರಿಗೆ
- ಅರಶಿಣ
- ಸಾಂಬಾರ್ ಪುಡಿ
- ಖಾರದ ಪುಡಿ
- ಕರಿಬೇವು
- ಎಣ್ಣೆ
- ಉಪ್ಪು
- ಬೆಲ್ಲ
ತೆಂಗಿನಕಾಯಿ ಹಾಕದೆ ಸಾರು ಮಾಡುವ ವಿಧಾನವೇನು?
ಮೊದಲು ಸೀಮೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಸನ್ಣದಾಗಿ ಹೆಚ್ಚಿಕೊಳ್ಳಿ. ಹಾಗೆ ತೊಗರಿ ಬೇಳೆಯನ್ನು ಕೂಡ ತೊಳೆದುಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಸೀಮೆ ಬದನೆ, ತೊಗರಿ ಬೇಳೆ, ನೀರು, ಟೊಮೆಟೋ, ಅರಶಿಣ, ಉಪ್ಪು ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 5 ಸೀಟಿ ಹೊಡೆಯಲು ಬಿಡಿ.
5 ಸೀಟಿ ಬಳಿಕ ಕುಕ್ಕರ್ ಮುಚ್ಚಳ ತೆಗದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಟೊಮೆಟೋ ಇಡಿಯಾಗಿದ್ದರೆ ಅದನ್ನು ಸ್ವಲ್ಪ ಪುಡಿ ಮಾಡುವಂತೆ ತಿರುಗಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ ಎಣ್ಣೆ ಕಾದ ಬಳಿಕ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು, ಕರಿವೇವು, ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ. ಉರಿಯನ್ನು ಸಣ್ಣದಾಗಿ ಇಟ್ಟು ಇದಕ್ಕೆ ಸಾಂಬಾರ್ ಪುಡಿ ಹಾಗೂ ಖಾರದ ಪುಡಿ ಕೂಡ ಹಾಕಿ 30 ಸೆಕೆಂಡ್ಗಳ ಕಾಲ ಫ್ರೈ ಮಾಡಿ.
ಈಗ ಸ್ವಲ್ಪ ನಿಂಬೆ ರಸವನ್ನು ಇದಕ್ಕೆ ಹಾಕಿ ಕುದಿಯಲು ಬಿಡಿ. ಇದು ಕುದಿಯಲು ಆರಂಭಿಸಿದಾಗ ಕುಕ್ಕರ್ನಲ್ಲಿರುವ ಬೇಳೆ ತರಕಾರಿಯನ್ನು ಇದಕ್ಕೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿ ಬರಲು ಬಿಡಿ. ಕೊನೆಯಲ್ಲಿ ಸಣ್ಣ ಉಂಡೆಯ ಬೆಲ್ಲ ಹಾಕಿಕೊಳ್ಳಬಹುದು. ಹಾಗೆ ಕೊತ್ತಂಬರಿ ಸೊಪ್ಪು ಹಾಕಿ ಒಂದು ಕುದಿಬಂದ ಬಳಿಕ ಇಳಿಸಿಕೊಳ್ಳಿ. ಇಷ್ಟಾದರೆ ಕಾಯಿ ಬಳಸದೆ ಮಾಡುವ ಅದ್ಭುತ ಸಾರು ರೆಡಿಯಾಗುತ್ತೆ. ನೀವು ಕೂಡ ಈ ರೆಸಿಪಿಯನ್ನು ಮಾಡಿ.



Click it and Unblock the Notifications