Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತರಕಾರಿ, ಸಾಂಬಾರ್ ಪುಡಿ ಇಲ್ಲದೆಯೇ ರುಚಿಕರ ಸಾರು ಮಾಡಿ..! ಎಷ್ಟು ಸುಲಭ ಗೊತ್ತಾ?
ತರಕಾರಿ ಹಾಕಿ ರುಚಿ ರುಚಿಯ ತರಕಾರಿ ಸಾರು ಮಾಡುವುದು ಸಾಮಾನ್ಯ, ತರಕಾರಿ ಸಾಂಬಾರ್ ಅನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ಆದರೆ ಇದಕ್ಕೆ ಬಳಸುವ ಪದಾರ್ಥಗಳು ಮಾತ್ರ ಒಂದೇ ರೀತಿಯಾಗಿರುತ್ತೆ. ಆದ್ರೆ ವಿಭಿನ್ನ ರೀತಿಯಲ್ಲಿ ವಿಭಿನ್ನ ಶೈಲಿಯಲ್ಲಿ ಸಾಂಬಾರ್ ಮಾಡಬಹುದು. ಹಾಗಾದ್ರೆ ನಾವಿಂದು ಇಂತಹ ವಿಭಿನ್ನ ಶೈಲಿಯ ಸಾಂಬಾರ್ ಮಾಡುವುದನ್ನು ತಿಳಿದುಕೊಳ್ಳೋಣ.
ವಿಭಿನ್ನ ಶೈಲಿನ ಸಾಂಬಾರ್ ಎಂದರೆ ತರಕಾರಿ, ಸಾಂಬಾರ್ ಪುಡಿ ಇಲ್ಲದೆಯೂ ಕೂಡ ಸಾಂಬಾರ್ ಮಾಡಬಹುದು. ಹೌದು ನಿಮ್ಮಲ್ಲಿ ತರಕಾರಿ ಇಲ್ಲದಿದ್ದರೂ ಕೂಡ ರುಚಿಕರ ಸಾಂಬಾರ್ ಮಾಡಬಹುದು. ಹಾಗಾದ್ರೆ ಇದನ್ನು ಮಾಡುವುದು ಹೇಗೆ?

ತರಕಾರಿ, ಸಾಂಬಾರ್ ಪುಡಿ ಇಲ್ಲದೆಯೇ ರುಚಿ ರುಚಿಯ ಸಾಂಬಾರ್ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತರಕಾರಿಯೇ ಇಲ್ಲದೆ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೊಗರಿಬೇಳೆ -1 ಕಪ್
- ಟೊಮೆಟೋ - 4
- ಈರುಳ್ಳಿ- 1
- ಹುಣಸೆಹಣ್ಣು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಒಣ ಮೆಣಸು- 6
- ಹಸಿಮೆಣಸು - 7
- ಎಣ್ಣೆ
- ಬೆಳ್ಳುಳ್ಳಿ 1 ಗೆಡ್ಡೆ
- ಖಾರದ ಪುಡಿ
- ಅರಿಶಿನದ ಪುಡಿ
- ಜೀರಿಗೆ
- ಸಾಸಿವೆ
- ಇಂಗು
- ಉಪ್ಪು
- ತರಕಾರಿಯೇ ಇಲ್ಲದೆ ಸಾಂಬಾರ್ ಮಾಡುವುದು ಹೇಗೆ?
ಮೊದಲು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ತೊಗರಿ ಬೇಳೆ ತೋಳೆದು ಹಾಕಿಕೊಳ್ಳಿ, ಇದಕ್ಕೆ ಖಾರದ ಪುಡಿ, ಟೊಮೆಟೋ, ಎಣ್ಣೆ, ಅರಶಿನ, 4 ಕಪ್ ನೀರು ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಡಿ. ನಂತರ ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ಮುಚ್ಚಳ ತೆಗೆದುಕೊಂಡು ಬೆಳೆ ನೀರನ್ನು ಸ್ವಲ್ಪ ತೆಗೆದಿಟ್ಟು ಅದರಲ್ಲಿ ಉಳಿದಿರುವ ಟೊಮೆಟೋ ಹಾಗು ಬೇಳೆಯನ್ನು ಮಸೆದುಕೊಳ್ಳಬೇಕು. ಅಂದರೆ ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಆದಷ್ಟು ಒಳ್ಳೆಯದು. ಈಗ ಒಂದು ಬೌಲ್ನಲ್ಲಿ ಹುಣಸೆ ಹುಣ್ಣು ನೆನೆಯಲು ಹಾಕಿ ಇಟ್ಟುಕೊಳ್ಳಿ.
ಈಗ ಬೇಳೆ ನೀರನ್ನು ಸಹ ಇದೇ ಕುಕ್ಕರ್ಗೆ ಹಾಕಿಕೊಳ್ಳಿ. ನಂತರ ಹುಣಸೆ ಹುಳಿ ನೀರನ್ನು ಕೂಡ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಗ್ಗರಣೆ ಹಾಕಿಕೊಳ್ಳಿ. ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಸಾಸಿವೆ, ಜೀರಿಗೆ, ಇಂಗು, ಬೆಳ್ಳುಳ್ಳಿ ಫ್ರೈ ಮಾಡಿ. ಈಗ ಇದಕ್ಕೆ ಕರಿಬೇವು, ಹಸಿ ಮೆಣಸು, ಒಣ ಮೆಣಸು ಹಾಕಿ ಫ್ರೈ ಮಾಡಿ.
ನಂತರ ಇದಕ್ಕೆ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. 3 ನಿಮಿಷದ ಬಳಿಕ ಇದಕ್ಕೆ ಕುಕ್ಕರ್ನಲ್ಲಿರುವ ಬೆಳೆ ನೀರನ್ನು ಹಾಕಿಕೊಂಡು ನಂತರ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ.
ಸುಮಾರು 10 ನಿಮಿಷ ಪಾತ್ರೆಯನ್ನು ಮುಚ್ಚಿ ಕುದಿಸಿಕೊಳ್ಳಬೇಕು. ಅಂತಿಮವಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿ ಸಾರು ಇಳಿಸಿಕೊಳ್ಳಿ. ಇಷ್ಟು ಮಾಡಿದರೆ ನಿಮ್ಮ ಮುಂದೆ ತರಕಾರಿ ಇಲ್ಲದೆ ಸಾಂಬಾರ್ ಪುಡಿ ಇಲ್ಲದೆಯೇ ಸಾರು ರೆಡಿಯಾಗುತ್ತದೆ. ನೀವು ಸಹ ಒಮ್ಮೆ ತರಕಾರಿ ಬಳಸದೆಯೇ ಈ ಸಾರು ಮಾಡಿ ನೋಡಿ. ಮನೆಯಲ್ಲಿ ತರಕಾರಿ ಇಲ್ಲದಾಗ ಈ ಸಾಂಬಾರ್ ಮಾಡಿ ನೋಡಿ. ಅದರ ರುಚಿಗೆ ಮತ್ತೆ ಮತ್ತೆ ನೀವು ಮಾಡಲು ಮುಂದಾಗುವುದು ಖಚಿತ.



Click it and Unblock the Notifications
