Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಾಂಬಾರ್ ಪುಡಿ ಈ ಹದದಲ್ಲಿ ಮಾಡಿದರೆ ಘಂ ಎನ್ನುವ ಪರಿಮಳ ಮೈಲಿ ದೂರದವರೆಗೆ ಬರುತ್ತೆ
ಸಾಂಬಾರ್ ಪೌಡರ್ ಹೊರಗಡೆಯಿಂದ ತರುವುದಕ್ಕಿಂತ ಮನೆಯಲ್ಲಿಯೇ ಮಾಡಿಟ್ಟರೆ ಅದರ ರುಚಿಯೇ ಭಿನ್ನ, ಕಾಯಿ ರುಬ್ಬಿ ಸೇರಿಸದಿದ್ದರೂ ತರಕಾರಿ ಬೇಯಿಸಿ ಒಂದೆರಡು ಚಮಚ ಸಾಂಬರ್ ಪುಡಿ ಹಾಕಿದರೆ ಸಾಕು ರುಚಿ ಸೂಪರ್ ಆಗಿರುತ್ತೆ. ನೀವು ಇಂಥ ಸಾಂಬಾರ್ ಪುಡಿ ಸ್ಯಾಂಪಲ್ ನೋಡಬೇಕೆ, ಈ ಹದದಲ್ಲಿ ಸಾಮಗ್ರಿ ಹಾಕಿ ಒಮ್ಮೆ ಟ್ರೈ ಮಾಡಿ ನೋಡಿ:

ಬೇಕಾಗುವ ಸಾಮಗ್ರಿ
ಒಂದೂವರೆ ಚಮಚ ಕಡ್ಲೆಬೇಳೆ
ಒಂದೋವರೆ ಚಮಚ ಉದ್ದಿನಬೇಳೆ
1 ಚಮಚ ತೊಗರಿ ಬೇಳೆ
10 ಒಣ ಮೆಣಸು
4 ಬ್ಯಾಡಗಿ ಮೆಣಸು
4 ಚಮಚ ಕೊತ್ತಂಬರಿ ಬೀಜ
1/4 ಚಮಚ ಮೆಂತೆ
ಸ್ವಲ್ಪ ಕರಿಬೇವಿನ ಎಲೆ
1 ಚಮಚ ಕಾಳು ಮೆಣಸು
ಸ್ವಲ್ಪ ಇಂಗು(1/4 ಚಮಚ ಇಂಗು ಪುಡಿ)
1/2 ಚಮಚ ಅರಿಶಿಣ ಪುಡಿ
ಮಾಡುವ ವಿಧಾನ
- ಒಣಮೆಣಸಿನ ತೊಟ್ಟು ತೆಗೆಯಿರಿ,
- ಬಳಸುವ ಧಾನ್ಯಗಳನ್ನು ತೊಳೆದು ಒಣಗಿಸಿ ಇಡಿ
- ಒಣ ಮೆಣಸು,ಕೊತ್ತಂಬರಿ ಬೀಜ ತೊಳೆದು ಬಿಸಿಲಿನಲ್ಲಿ ಒಣಗಿಸಿಡಿ
- ಈಗ ತವಾ ಅಥವಾ ಬಾಣಲೆ ಇಟ್ಟು ಅದರಲ್ಲಿ ಒಣ ಮೆಣಸು , ಕೊತ್ತಂಬರಿ ಬೀಜ ಹಾಕಿ ಹುರಿಯಿರಿ
- ಹೀಗೆ ಹುರಿಯುವಾಗ ಕೊತ್ತಂಬರಿ ಬೀಜ ರೋಸ್ಟ್ ಆಗಬೇಕು, ಆದರೆ ಕಪ್ಪಾಗಬಾರದು(ಕೊತ್ತಂಬರಿ ಬೀಜ ಕಪ್ಪಾದರೆ ಕಹಿ ಟೇಸ್ಟ್ ಬರುತ್ತದೆ, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಬೇಕು)
- ಈಗ ಬೇಳೆಗಳನ್ನು ಹಾಕಿ ರೋಸ್ಟ್ ಮಾಡಬೇಕು, ಇದು ಕೂಡ ಕಪ್ಪಾಗಬಾರದು
- ಬೇಳೆ ಕಾಳುಗಳ ಜೊತೆಗೆ ಮೆಂತೆಯನ್ನು ಹಾಕಿ ರೋಸ್ಟ್ ಮಾಡಿ
- ಈಗ ಜೀರಿಗೆ, ಕಕಾಳು ಮೆಣಸು, ಕರಿಬೇವಿನ ಎಲೆ ಹಾಕಿ ರೋಸ್ಟ್ ಮಾಡಿ
ಈಗ ಇವೆಲ್ಲಾ ತಣ್ಣಗಾದ ಮೇಲೆ ಮೇಲೆ ಮಿಕ್ಸಿ ಗ್ರೈಂಡರ್ಗೆ ಹಾಕಿ, ಅರಿಶಿಣ
ಪುಡಿ, ಇಂಗು ಸೇರಿಸಿ ನುಣ್ಣನೆ ರುಬ್ಬಿ
ನಂತರ ಆ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ನೀವು ಸಾಂಬಾರ್ ಮಾಡುವಾಗ 1 ಚಮಚ ಹಾಕಿದರೆ ಸಾಕು ಇದರ ರುಚಿ ಅಷ್ಟೊಂದು ಸೂಪರ್ ಆಗಿರುತ್ತದೆ.
ಇಲ್ಲಿ ಹೇಳಿರುವ ಪ್ರಮಾಣ ಬಳಸಿ ಪೌಡರ್ ಮಾಡಿದರೆ 2-3 ಸಾಂಬಾರ್ ಮಾಡಬಹುದು. ಮೊದಲಿಗೆ ಟ್ರೈ ಮಾಡುವಾಗ ಸ್ವಲ್ಪ ಪ್ರಮಾಣದಲ್ಲಿ ಟ್ರೈ ಮಾಡುವುದು ಒಳ್ಳೆಯದು. ನಂತರ ಬೇಕಿದ್ದರೆ ಸಾಮಗ್ರಿ ಹೆಚ್ಚು ಹಾಕಿ ಒಂದು ಕಾಲು ಕೆಜಿ ಪುಡಿ ಅಥವಾ ಅರ್ಧ ಕೆಜಿ ಪುಡಿ ಅಂತ ರೆಡಿ ಮಾಡಿಡಬಹುದು.
ಈ ಸಾಂಬಾರ್ ಪುಡಿ ಘಮ್ ಎನ್ನುವ ರುಚಿಯೊಂದಿಗೆ ಸೂಪರ್ ಆಗಿರುತ್ತದೆ. ನೀವು ಬೇಕಿದ್ದರೆ ಬೆಳ್ಳುಳ್ಳಿ ಹಾಗೂ ಶುಂಠಿ ಪುಡಿ ಕೂಡ ಸೇರಿಸಬಹುದು, ಪುಡಿಗೆ ಹಾಕುವ ಬದಲಿಗೆ ಒಗ್ಗರಣೆ ಹಾಕುವಾಗ ಶುಂಠಿ-ಬೆಳ್ಳುಳ್ಳಿ ಸೇರಿಸಿ ರುಚಿ ಸೂಪರ್ ಆಗಿರುತ್ತೆ...



Click it and Unblock the Notifications
