Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಹಾ..! ಎಂಥ ರುಚಿ ಈ ಸಾಂಬಾರ್ ಈರುಳ್ಳಿ ಚಟ್ನಿ..!
ಬೆಳಗ್ಗೆ ತಿಂಡಿ ಮಾಡಿರಲಿ ಅಥವಾ ಮಧ್ಯಾಹ್ನದ ಊಟ ಇರಲಿ ಎಲ್ಲದಕ್ಕೂ ನೀವು ಪಲ್ಯ ಅಥವಾ ಚಟ್ನಿ ಮಾಡಿರುತ್ತೀರಿ. ಚಟ್ನಿ ಇದ್ದರೆ ಊಟ ತಿಂಡಿಯನ್ನು ಚೆನ್ನಾಗಿ ಸವಿಯಬಹುದು. ರುಚಿಯೂ ಚೆನ್ನಾಗಿರುತ್ತದೆ. ಚಟ್ನಿ ಮಾಡುವುದಾದ್ರೆ ಸಾಮಾನ್ಯವಾಗಿ ತೆಂಗಿನಕಾಯಿ ಅಥವಾ ಹುರಿಗಡಲೆಯ ಸಿಂಪಲ್ ಚಟ್ನಿ ಮಾಡಿ ಸವಿಯುತ್ತೇವೆ. ಏಕೆಂದರೆ ಚಟ್ಬಿ ಮಾಡುವುದು ತುಂಬಾನೆ ಸುಲಭ ಹಾಗೆ ಚಟ್ನಿ ಮಾಡಲು ಕಡಿಮೆ ಸಮಯ ಹಿಡಿಯುವ ಕಾರಣ ಬೆಳಗ್ಗೆ ತಿಂಡಿಗೆ ಮಾಡಲು ಮುಂದಾಗುತ್ತೇವೆ.
ಇನ್ನು ಚಟ್ನಿ ಅಂದ ಕೂಡಲೆ ಬಾಯಲ್ಲಿ ನೀರು ತರಿಸುವಂತಹ ಒಂದಿಷ್ಟು ಚಟ್ನಿಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಹಾಗೆ ನಾವಿಂದು ಈ ಚಟ್ನಿಯಲ್ಲಿ ಅತ್ಯಂತ ರುಚಿಕರವಾಗಿ ಮಾಡಬಹುದಾದಂತಹ ಸಾಂಬಾರ್ ಈರುಳ್ಳಿ ಚಟ್ನಿಯನ್ನು ಮಾಡಿ ನೋಡೋಣ. ನೀವು ಸಾಂಬಾರ್‌ಗೆ ಬಳಸುವಂತಹ ಸಣ್ಣ ಸಣ್ಣ ಈರುಳ್ಳಿಗಳಿಂದ ನಾವು ಅದ್ಭುತ ರುಚಿಯಲ್ಲಿ ಚಟ್ನಿ ಮಾಡಬಹುದು.

ಸಾಂಬಾರ್ ಮಾಡಲೆಂದೇ ಸ್ವಲ್ಪ ಸಣ್ಣ ಗಾತ್ರದ ಹಾಗೆ ಅದು ಬಹಳ ರುಚಿಕರವಾಗಿರುವ ಈ ಈರುಳ್ಳಿಯು ಅದ್ಭುತವಾದ ಚಟ್ನಿ ಮಾಡಲು ಸಹಕಾರಿ. ಈ ಸಾಂಬಾರ್ ಈರುಳ್ಳಿ ಚಟ್ನಿಯನ್ನು ಬಳಸಿ ಮಾಡಿದ ಈ ಚಟ್ನಿ ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ, ಹಾಗಾದ್ರೆ ಈ ಸಾಂಬಾರ್ ಈರುಳ್ಳಿಯಲ್ಲಿ ಚಟ್ನಿ ಮಾಡುವುದ ಹೇಗೆ ಎಂಬುದನ್ನು ನೋಡೋಣ.
ಸಾಂಬಾರ್ ಈರುಳ್ಳಿ ಬಳಸಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಂಬಾರ್ ಈರುಳ್ಳಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಈರುಳ್ಳಿ
- ಕರಿಬೇವು
- ಒಣ ಮೆಣಸು
- ಕಡಲೆ ಬೇಳೆ
- ಉದ್ದಿನ ಬೇಳೆ
- ಹುಣಸೆ ಹುಳಿ
- ಉಪ್ಪು
- ಎಣ್ಣೆ
ಸಾಂಬಾರ್ ಈರುಳ್ಳಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾದ ಬಳಿಕ ಸ್ವಲ್ಪ ಸಾಂಬಾರ್ ಈರುಳ್ಳಿ ಹಾಕಿಕೊಳ್ಳಿ. ಹಾಗೆ ಇದಕ್ಕೆ ಖಾರಕ್ಕೆ ಒಣ ಮೆಣಸು ಹಾಗೂ ಬೆಳ್ಳುಳ್ಳಿಯನ್ನು ಹಾಕಿಕೊಳ್ಳಿ. ಈರುಳ್ಳಿ ಬೆಳ್ಳುಳ್ಳಿಯನ್ನು ಸ್ವಲ್ಪ ಹೆಚ್ಚಾಗಿಯೇ ಬಳಸಿಕೊಳ್ಳಿ. ಈಗ ಕರಿಬೇವು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ.
3 ನಿಮಿಷದ ಬಳಿಕ ಹುಣಸೆ ಹಣ್ಣು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಈ ಮಸಾಲೆಗಳು ತಣ್ಣಗಾಗಲು ಬಿಡಬೇಕು. ನಂತರ ಈ ಮಸಾಲೆ ತಣ್ಣಗಾದಾಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ಪದಾರ್ಥಗಳನ್ನು ಹಾಕಿ ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಒಂದು ಬೌಲ್‌ಗೆ ಇದನ್ನು ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟಿ ಅದಕ್ಕೆ ಎಣ್ಣೆ ಹಾಕಿ ಎಣ್ಣೆಗೆ ಸಾಸಿವೆ, ಒಣಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಬಿಸಿ ಮಾಡಿಕೊಂಡು ಈಗ ಆ ಚಟ್ನಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಸಾಂಬಾರ್ ಈರುಳ್ಳಿ ಚಟ್ನಿ ರೆಡಿಯಾಗುತ್ತದೆ. ಊಟದ ಜೊತೆಗೆ ಹಾಗೆ ತಿಂಡಿಗೆ ಅದ್ಭುತ ಎನಿಸುವ ರುಚಿ ಇದನು ನೀಡಲಿದೆ.



Click it and Unblock the Notifications
