Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಈ ಸಜ್ಜೆ ಗಂಜಿ 1 ಲೋಟ ಕುಡಿದರೆ ಇಡೀ ದಿನ ಕೆಲಸ ಮಾಡಬಹುದು..! ಮಾಡೋದು ಹೇಗೆ?
ನಾವು ಬೆಳಗ್ಗೆ ತಂಡಿಗೆ ಮಸಾಲೆ ಭರಿತ ಆಹಾರ ಸವಿಯುತ್ತೇವೆ. ಸಾಂಬಾರ್ ಜೊತೆಗೆ ಇಡ್ಲಿ, ದೋಸೆ, ಚಟ್ನಿಗೆ ಜೊತೆಗೆ ಒಂದಿಷ್ಟು ಖಾದ್ಯಗಳ ಮಾಡಿ ಸವಿದಿರುತ್ತೇವೆ. ಬೆಳಗ್ಗೆ ತಿಂಡಿ ನಾಲಿಗೆಗೆ ರುಚಿ ನೀಡಿದರೆ ಇಡೀ ದಿನ ನಾವು ಆರಾಮವಾಗಿ ಕಾಲ ಕಳೆಯುತ್ತೇವೆ. ಅದರಲ್ಲೂ ಬೆಳಗ್ಗೆ ಸಮಯದಲ್ಲಿ ನಾವು ಯಾವಾಗಲು ಗಡಿಬಿಡಿಯಲ್ಲಿಯೇ ತಿಂಡಿ ಸವಿದಿರುತ್ತೇವೆ.
ಆದ್ರೆ ನಮ್ಮ ಆಹಾರ ವೃದ್ಧಿಸುವಂತಹ ಯಾವುದಾದರೊಂದಿ ಜ್ಯೂಸ್ ಕುಡಿದರೆ ಇಡೀ ದಿನ ನೀವು ಅತ್ಯಂತ ಚಟುವಟಿಕೆಯಿಂದ ಇರಬಹುದು, ಅಂತಹ ಹಲವು ಜ್ಯೂಸ್ ನಾವು ಸವಿದಿರಬಹುದು. ಆದ್ರೆ ನಾವಿಂದು ಸಜ್ಜೆಯಿಂದ ಮಾಡಲಾಗುವ ಒಂದು ಗಂಜಿ ಕುರಿತಂತೆ ತಿಳಿದುಕೊಳ್ಳೋಣ. ಸಜ್ಜೆ ಇದು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
ಉತ್ತರ ಕರ್ನಾಟಕದ ಭಾಗದಲ್ಲಿ ಈ ಸಜ್ಜೆಯಿಂದ ರುಚಿ ರುಚಿಯ ರೊಟ್ಟಿ ಮಾಡುತ್ತಾರೆ. ಅದರಲ್ಲೂ ಪ್ರಮುಖ ಹಬ್ಬವಾದ ಎಳ್ಳು ಅಮಾವಾಸ್ಯೆ ದಿನ ಎಳ್ಳು ಹಚ್ಚಿ ಈ ರುಟ್ಟಿ ಮಾಡುತ್ತಾರೆ. ಸಜ್ಜೆಯಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶ ನಾವು ನೋಡಬಹುದು. ಹಾಗೆ ಇದರಲ್ಲಿರುವ ಸಾರಜನಕವು ಎಲ್ಲ ಅವಶ್ಯಕ ಅಮೈನೋ ಆಮ್ಲಗಳನ್ನು ಹೊಂದಿದೆ. ಹೀಗಾಗಿ ಇದು ನಮ್ಮ ದೇಹಕ್ಕ ಅಗತ್ಯವಾಗಿ ಬೇಕಾಗಿರುವ ಒಂದು ಪೋಷಕಾಂಶಗಳ ಮೂಲವನ್ನು ಹೊಂದಿದೆ.
ಈ ಸಜ್ಜೆಯ ಒಂದು ಲೋಟ ಗಂಜಿ ನೀವು ಕುಡಿದರೆ ಇಡೀ ದಿನ ನೀವು ಅತ್ಯಂತ ಆರಾಮವಾಗಿ ಕೆಲಸ ಮಾಡುತ್ತೀರಿ. ಹಾಗೆ ನಿಮ್ಮೆಲ್ಲಾ ಪೋಷಕಾಂಶ ಕೊರತೆಯನ್ನು ಇದು ನೀಗಿಸಲಿದೆ. ಇದರ ಗಂಜಿ ಮಾಡುವುದು ಕೂಡ ತುಂಬಾನೆ ಸುಲಭ. ಮನೆಯಲ್ಲಿ ಮಕ್ಕಳು ಕೂಡ ಬಹಳ ಇಷ್ಟಪಟ್ಟು ಸವಿಯುತ್ತಾರೆ. ನಿತ್ಯ ನೀವು ಇದರ ಒಂದು ಲೋಟ ಗಂಜಿ ಕುಡಿದರೆ ಅನಾರೋಗ್ಯ ನಿಮ್ಮ ಬಳಿ ಸುಳಿಯುವುದಿಲ್ಲ.
ಹಾಗಾದ್ರೆ ಈ ಸಜ್ಜೆ ಗಂಜಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಜ್ಜೆ ಗಂಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಸಜ್ಜೆ - 1 ಕಪ್
- ಉಪ್ಪು
- ಸಾಸಿವೆ
- ಕ್ಯಾರೆಟ್
- ಬೀನ್ಸ್
- ಹಸಿ ಮೆಣಸು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ಎಣ್ಣೆ
ಸಜ್ಜೆ ಗಂಜಿ ಮಾಡುವುದು ಹೇಗೆ?
ಮೊದಲು ಸಜ್ಜೆಯನ್ನು ಚೆನ್ನಾಗಿ ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿದ ಸಜ್ಜೆ ಪುಡಿಯನ್ನು ಹಾಕಿ 3 ಕಪ್ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಮಧ್ಯಮ ಉರಿಯಲ್ಲಿ ಇಟ್ಟು 2 ಸೀಟಿ ಹೊಡೆಯಲು ಬಿಡಬೇಕು.
ಈಗ ಬಾಣಲೆಯನ್ನು ತೆಗೆದುಕೊಂಡು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ ಹಾಕಿ. ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಒಂದು ಕ್ಯಾರೆಟ್, ಬೀನ್ಸ್ ಹಾಕಿ ಕೊಂಡು ಫ್ರೈ ಮಾಡಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ನಂತರ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ.
ನಂತರ ಸ್ವಲ್ಪ ನೀರು ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ. 5 ನಿಮಿಷ ಕುದಿಬಂದ ಬಳಿಕ ಈಗ ಕುಕ್ಕರ್‌ನಲ್ಲಿ ಬೇಯಿಸಿಕೊಂಡಿರುವ ಸಜ್ಜೆಯನ್ನು ತೆಗೆದು ಈ ಪಾತ್ರೆಗೆ ಹಾಕಿಕೊಳ್ಳಿ. ಚೆನ್ನಾಗಿ ತಿರುಗಿಸಿಕೊಂಡು 5 ನಿಮಿಷ ಮತ್ತೆ ಕುದಿಬರಲು ಬಿಡಿ. ಹಾಗೆ ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಆರೋಗ್ಯಕರ ಸಜ್ಜೆ ಗಂಜಿ ರೆಡಿಯಾಗುತ್ತದೆ.



Click it and Unblock the Notifications

