Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರೇಕ್ಫಾಸ್ಟ್ಗೆ ಇನ್ಸ್ಟಾಂಟ್ ಆಗಿ ಮಾಡಬಹುದು ಸಾಬುದಾನ ಇಡ್ಲಿ
ಇಡ್ಲಿಯಲ್ಲಿ ನೂರಕ್ಕೂ ಹೆಚ್ಚು ಬಗೆ ಮಾಡಬಹುದು, ಹಾಗಿರುವಾಗ ಪ್ರತಿಬಾರಿಯೂ ಒಂದೇ ರುಚಿಯ ಇಡ್ಲಿ ಸವಿಯುವುದೇಕೆ ಅಲ್ವಾ? ನಾವಿಲ್ಲಿ ನಿಮಗೆ ವಿಭಿನ್ನ ರುಚಿಗೆ ಸಾಬುದಾನ ಇಡ್ಲಿ ರೆಸಿಪಿ ನೀಡಿದ್ದೇವೆ. ಇದನ್ನು ಇನ್ಸ್ಟಾಂಟ್ ಇಡ್ಲಿಯಾಗಿ ಮಾಡಬಹುದು ಅಥವಾ ಹುದುಗು ಬರಿಸಿ ಕೂಡ ಮಾಡಬಹುದು. ಎರಡೂ ವಿಧಾನ ಇಲ್ಲಿ ನೀಡಲಾಗಿದ್ದು ಸಾಬುದಾನ ಇಡ್ಲಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ಸಾಬುದಾನ
1ಕಪ್ ರವೆ (ಬನ್ಸ್ ರವೆ) ಅಥವಾ ಇಡ್ಲಿ ಅಕ್ಕಿ
2 ಕಪ್ ಮೊಸರು
ಇಡ್ಲಿ ಹದಕ್ಕೆ ಕಲೆಸಲು ಬೇಕಾಗುವಷ್ಟು ನೀರು
1/4 ಚಮಚ ಅಡುಗೆ ಸೋಡಾ
ರುಚಿಗೆ ತಕ್ಕ ಉಪ್ಪು
10-15 ಗೋಡಂಬಿ
ಎಣ್ಣೆ (ಇಡ್ಲಿ ತಟ್ಟೆಗೆ ಸವರಲು)
ಮಾಡುವ ವಿಧಾನ
- ನೀವು ಸಾಬುದಾನ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ, ಬೆಳಗ್ಗೆ ಮಾಡುವುದಾದರೆ ರಾತ್ರಿಯೇ ನೆನೆ ಹಾಕಿ ಮಾಡಬಹುದು.
- ಈಗ ಒಂದು ಬೌಲ್ಗೆ ರವೆ ಹಾಕಿ, ನಂತರ ನೆನೆ ಹಾಕಿಟ್ಟ ಸಾಬುದಾನ ಸೇರಿಸಿ,ನಂತರ 2 ಕಪ್ ಮೊಸರು ಸೇರಿಸಿ
- ಈಗ ನೀವು ಇಡ್ಲಿ ಹದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ
- ನಂತರ ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿ ಒಂದು ಗಂಟೆ ಇಡಿ
- ಬಳಿಕ ಇಡ್ಲಿ ತಟ್ಟೆಗೆ ಹಾಕಿ 15-20 ನಿಮಿಷ ಬೇಯಿಸಿದರೆ ಸಾಬುದಾನ ಇಡ್ಲಿ ರೆಡಿ.
- ಈ ಇಡ್ಲಿಗೆ ನೀವು ಬೇಕಾದರೆ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಬಹುದು.
ಈ ರೀತಿಯೂ ಮಾಡಬಹುದು
- ನೀವು ಉದ್ದು ನೆನೆ ಹಾಕಿ
- ನಂತರ ಉದ್ದು ರುಬ್ಬಿ
- ಸಾಬುದಾನ ಹಾಕಿ ಒಂದು ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ ಹುದುಗು ಬರಲು ಇಡಿ
- ಮಿಶ್ರಣ 8 ಗಂಟೆ ಹುದುಗು ಬಂದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಬಹುದು ಅಥವಾ ಒಗ್ಗರಣೆ ಹಾಕಬಹುದು
- ನಂತರ ಇಡ್ಲಿ ತಟ್ಟೆಗೆ ಸುರಿದು ಬೇಯಿಸಿದರೆ ರುಚಿ ಸೂಪರ್ ಆಗಿರುತ್ತದೆ.
ಇತರ ಟಿಪ್ಸ್
ಸಾಬುದಾನ ಇಡ್ಲಿ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.
ಈ ಇಡ್ಲಿಯನ್ನು ಚಟ್ನಿ, ಸಾಂಬಾರ್ ಜೊತೆಗೆ ಸವಿಯಬಹುದು.
ಸಾಬುದಾನ ಇಡ್ಲಿ ತಣ್ಣಗಾದ ಮೇಲೆ ತಿನ್ನಲು ಇಷ್ಟವಾಗಲ್ಲ, ನೀವು ಬಿಸಿ ಬಿಸಿ ಇಡ್ಲಿ
ಸರ್ವ್ ಮಾಡಿದರೆ ತುಂಬಾನೇ ರುಚಿಯಾಗಿರುತ್ತದೆ.
ಇನ್ನು ಸಾಬುದಾನ ಇಡ್ಲಿ ತುಂಬಾನೇ ಮೃದುವಾಗಿರುತ್ತದೆ.
ಇನ್ಸ್ಟಾಂಟ್ ಇಡ್ಲಿಯಾಗಿಯೂ ಬಳಸಬಹುದು
ರವೆ ಹಾಕಿ ಮಾಡುವುದಾದರೆ ರವೆಯನ್ನು ಸ್ವಲ್ಪ ರೋಸ್ಟ್ ಮಾಡಿ ಸೇರಿಸಿ.



Click it and Unblock the Notifications
