Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬೆಳಗ್ಗೆ ತಿಂಡಿಗೆ ಮಾಡಿ ಹತ್ತಿಯಂತಹ ಸಬ್ಬಕ್ಕಿ ಇಡ್ಲಿ..! ಹೇಗೆ ಮಾಡೋದು?
ನೀವು ಹಬ್ಬ ಹರಿದಿನಗಳಲ್ಲಿ, ಮನೆಗೆ ಯಾರಾದರು ಅತಿಥಿಗಳು ಬಂದಾಗ ಹಾಗೆ ಮನೆಯಲ್ಲಿ ಯಾವುದಾದರು ಶುಭ ಕಾರ್ಯಗಳು ನಡೆಯುವಾಗ ಸಬ್ಬಕ್ಕಿಯಿಂದ ಪಾಯಸ ಮಾಡಿರಬಹುದು. ಸಬ್ಬಕ್ಕಿಯಲ್ಲಿ ಮಾಡಿದ ಪಾಯಸ ಸವಿಯಲು ಬಹಳ ರುಚಿಯಾಗಿರುತ್ತೆ. ಹಾಗೆ ಈ ಸಬ್ಬಕ್ಕಿ ಪಾಯಸ ಮಾಡುವುದು ಸಹ ತುಂಬಾನೆ ಸುಲಭದ. ಕಡಿಮೆ ವಸ್ತುಗಳ ಬಳಸಿ ಮಾಡಬಹುದು.
ಹೀಗಾಗಿ ಸಬ್ಬಕ್ಕಿ ಪಾಯಸ ತುಂಬಾನೆ ಫೇಮಸ್. ಇದನ್ನು ಬಿಟ್ಟರೆ ಸಬ್ಬಕ್ಕಿಯಿಂದ ಹೆಚ್ಚಾಗಿ ಯಾವುದೇ ಅಡುಗೆ ಅಥವಾ ಖಾದ್ಯ ಮಾಡಿರುವುದಿಲ್ಲ. ಆದ್ರೆ ನಾವಿಂದು ಸಬ್ಬಕ್ಕಿಯಿಂದ ಮಾಡುವ ರುಚಿಕರ ಇಡ್ಲಿ ಕುರಿತಂತೆ ತಿಳಿದುಕೊಳ್ಳೋಣ. ಇಡ್ಲಿ ಎಲ್ಲರಿಗೂ ಪ್ರಿಯವಾದ ಖಾದ್ಯ. ಕೆಲವರಿಗೆ ಬೆಳಗ್ಗೆ ತಿಂಡಿಗೆ ಈ ಇಡ್ಲಿ ಇರಲೇಬೇಕು.

ಇಡ್ಲಿಯಲ್ಲಿ ಕಡಿಮೆ ಎಣ್ಣೆ ಅಂಶ ಇರುವುದರಿಂದ ಆರೋಗ್ಯಕ್ಕೂ ಬಹಳ ಉತ್ತಮ ತಿಂಡಿ ಇದಾಗಿದೆ. ಹೀಗಾಗಿ ಇಡ್ಲಿ ಎಲ್ಲರಿಗೂ ನೆಚ್ಚಿನ ಖಾದ್ಯ. ಇಡ್ಲಿಯಲ್ಲಿ ಹತ್ತಾರು ವಿಧಗಳನ್ನು ಮಾಡಬಹುದು. ಕೆಲವೊಂದು ಸಿಕ್ಕಾಪಟ್ಟೆ ಫೇಮಸ್ ಇಡ್ಲಿ ವಿಧವೂ ಇದೆ. ಆದ್ರೆ ನಾವಿಂದು ವಿಶೇಷ ರೀತಿಯ, ವಿಭಿನ್ನ ರುಚಿಯ ಸಬ್ಬಕ್ಕಿ ಇಡ್ಲಿ ಮಾಡುವುದನ್ನು ತಿಳಿದುಕೊಳ್ಳೋಣ.
ಈ ಸಬ್ಬಕ್ಕಿ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಏನೆಲ್ಲಾ ವಸ್ತುಗಳನ್ನು ಇಟ್ಟುಕೊಳ್ಳಬೇಕು? ಇದಕ್ಕೆ ಹಿಟ್ಟು ಹೇಗೆ ಹದ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಬ್ಬಕ್ಕಿ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
- ಸಬ್ಬಕ್ಕಿ- 1 ಗ್ಲಾಸ್ ಅಥವಾ 100 ಗ್ರಾಮ್
- ಬಾಂಬೆ ರವಾ/ಮಧ್ಯಮ ರವಾ - 2 ಗ್ಲಾಸ್‌ಗಳು
- ಮೊಸರು - 2 ಗ್ಲಾಸ್
- ಈರುಳ್ಳಿ - 1
- ಎಣ್ಣೆ - 1 ಟೀಸ್ಪೂನ್
- ಸಾಸಿವೆ
- ಕರಿಬೇವಿನ ಎಲೆಗಳು
- ಸಬ್ಬಸಿಗೆ ಎಲೆಗಳು
- ರುಚಿಗೆ ಉಪ್ಪು
- ಅಡಿಗೆ ಸೋಡಾ
ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ
ಮೊಸಲು ಒಂದು ಬೌಲ್‌ನಲ್ಲಿ ಸಬ್ಬಕ್ಕಿ ತೆಗೆದುಕೊಂಡು ಸದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿ. ನೀವು ಯಾರು ಲೋಟಲ್ಲಿ ಸಬ್ಬಕ್ಕಿ ತೆಗೆದುಕೊಂಡಿದ್ದೀರೋ ಅದೇ ಗ್ಲಾಸ್‌ನಲ್ಲಿ ನೀರು ಹಾಕಿ ನೆನೆಸಿಡಿ. ಇದನ್ನು ರಾತ್ರಿಯೇ ನೆನೆಸಿಡಬೇಕಾಗುತ್ತದೆ. ಬಳಿಕ ಬೆಳಗ್ಗೆ ನೋಡಿದರೆ ನೀರನ್ನು ಹೀರಿಕೊಂಡು ಉದುರು ಉದುರಾಗಿರುತ್ತದೆ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಜೀರಿಗೆ ಹಾಕಿ ಬಳಿಕ ಕರಿಬೇಚು ಕತ್ತರಿಸಿಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಿ. ಒಂದು ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ನಂತರ ಇದಕ್ಕೆ ಬಾಂಬೆ ರವೆ ಹಾಕಿಕೊಂಡು ಸಣ್ಣ ಉರಿಯಲ್ಲಿ 4 ನಿಮಿಷ ಹುರಿದುಕೊಳ್ಳಿ. ಹುರಿದುಕೊಂಡ ಬಳಿಕ ಒಲೆ ಆಫ್ ಮಾಡಿಕೊಂಡು ಈ ಎಲ್ಲಾ ವಸ್ತುಗಳನ್ನು ನೆನೆಸಿಟ್ಟುಕೊಂಡ ಸಬ್ಬಕ್ಕಿಯೊಂದಿಗೆ ಹಾಕಿ ಮಿಕ್ಸ್ ಮಾಡಿ.
ಈಗ ಉಪ್ಪು, ಸಬ್ಬಸ್ಸಿಗೆ ಸೊಪ್ಪು ಇದ್ದರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ನೀವು ಸಂಬಕ್ಕಿ ತೆಗೆದುಕೊಂಡಿದ್ದ ಲೋಟದಲ್ಲಿ 2 ಲೋಟ ಮೊಸರನ್ನು ಇದಕ್ಕೆ ಹಾಕಿಕೊಂಡು ಮುಕ್ಕಾಲು ಲೋಟ ನೀರು ಹಾಕಿಕೊಂಡು ಕಲಸಿಕೊಳ್ಳಿ. ನಂತರ 15 ನಿಮಿಷ ಮುಚ್ಚಳ ಮುಚ್ಚು ಹಾಗೆ ಇಟ್ಟುಕೊಳ್ಳಿ. 15 ನಿಮಿಷದ ಬಳಿಕ ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಕಲಸಿಕೊಳ್ಳಿ.
ನಂತರ ಇದಕ್ಕೆ ಅಡುಗೆ ಸೋಡಾ, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಹಿಟ್ಟು ರೆಡಿಯಾಗುತ್ತದೆ. ನಂತರ ಇಡ್ಲಿ ಕಪ್‌ಗಳಿಗೆ ಎಣ್ಣೆಯನ್ನು ಸವರಿಕೊಂಡು ಈ ಹಿಟ್ಟು ಹಾಕಿ ಬೇಯಲು ಇಟ್ಟರೆ ಆಯಿತು. ಸುಮಾರು 10ರಿಂದ 12 ನಿಮಿಷ ಬೇಯಿಸಿದರೆ ಇಡ್ಲಿ ರೆಡಿಯಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಇಡ್ಲಿ ರೆಡಿಯಾಗುತ್ತದೆ. ಒಮ್ಮೆ ನೀವು ಮನೆಯಲ್ಲಿ ಈ ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ. ರುಚಿಯೂ ಬೊಂಬಾಟ್ ಆಗಿರುತ್ತದೆ.



Click it and Unblock the Notifications