Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮೈದಾ-ಹಾಲು ಇದ್ರೆ ರುಮಾಲ್ ರೋಟಿ ಮನೆಯಲ್ಲೇ ಮಾಡಿ..! ಇಲ್ಲಿದೆ ಸುಲಭದ ವಿಧಾನ!
ಮನೆಯಲ್ಲಿ ರೊಟ್ಟಿ ಮಾಡಿ ಸವಿಯೋದು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ರೊಟ್ಟಿಯಲ್ಲಿ ಹತ್ತು ಹಲವು ವಿಧಗಳಿವೆ. ರೊಟ್ಟಿ ಅಂದಾಗ ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ರಾಗಿ ರೊಟ್ಟಿ ಹೀಗೆ ಹಲವು ಬಗೆ ನಿಮ್ಮ ನೆನಪಿಗೆ ಬರಬಹುದು. ಹಾಗೆ ರುಮಾಲ್ ರೋಟಿ ಅಂದ್ರೆ ಕೂಡ ಎಲ್ಲರಿಗು ಅಚ್ಚುಮೆಚ್ಚು. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭವೇ.
ಶುಭ ಸಮಾರಂಭಗಳಲ್ಲಿ ನೀವು ಕೂಡ ರುಮಾಲ್ ರೋಟಿ ಮಾಡೋದು ನೋಡಿರಬಹುದು. ಬಹಳ ತೆಳುವಾದ ಮೃದುವಾದ ಈ ರೋಟಿಯನ್ನು ಸವಿಯುತ್ತಿದ್ದರೆ ಮತ್ತೆ ಮತ್ತೆ ಕೇಳಿ ಸವಿಯುತ್ತೀರಿ. ಆದ್ರೆ ಈ ರೋಟಿ, ಮನೆಯಲ್ಲೇ ಮಾಡಿ ಸವಿಯೋದು ಹೇಗೆ ಅನ್ನೋದು ನಿಮಗೆ ಗೊತ್ತಾ?

ಮನೆಯಲ್ಲಿ ರುಮಾಲ್ ರೋಟಿ ಮಾಡಿ ಸವಿಯುವುದು ಬಹಳ ಸುಲಭ. ಬೆಳಗ್ಗೆ ತಿಂಡಿಯೊಂದಿಗೆ ಹಾಗೆ ರಾತ್ರಿ ಊಟದೊಂದಿಗೂ ಇದನ್ನು ಸವಿಯಬಹುದು. ತೆಳುವಾಗಿ ರುಚಿಯಾಗಿ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಮನೆಯಲ್ಲಿ ರುಚಿಯಾಗಿ ರುಮಾಲ್ ರೋಟಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನೋಡೋಣ.
ರುಮಾಲ್ ರೋಟಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೈದಾ ಹಿಟ್ಟು
- ಹಾಲು
- ತುಪ್ಪ
- ರುಚಿಗೆ ತಕ್ಕಷ್ಟು ಉಪ್ಪು
ರುಮಾಲ್ ರೋಟಿ ಮಾಡುವ ವಿಧಾನವೇನು?
ಮೊದಲು ಒಂದು ಕಪ್ನಲ್ಲಿ ಮೈದಾ ತೆಗೆದುಕೊಂಡು ಒಂದು ಬೌಲ್ಗೆ ಹಾಗೆ ಉಪ್ಪು ಹಾಕಿಕೊಂಡು ಹಾಲು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಇದು ಚಪಾತಿ ಹಿಟ್ಟಿನಂತೆ ಹದಕ್ಕೆ ಈ ಹಿಟ್ಟು ಬರುವವರೆಗೂ ಮಿಕ್ಸ್ ಮಾಡಿ. ಹಾಗೆ ಇದನ್ನು ಮುಚ್ಚಳ ಮುಚ್ಚಿ 20 ನಿಮಿಷ ಹಾಗೆಯೇ ಬಿಡಿ. ನಂತರ ಮತ್ತೆ ಹಿಟ್ಟನ್ನು ನಾದುಕೊಳ್ಳಬೇಕು.
20 ನಿಮಿಷದ ಬಳಿಕ ಹಿಟ್ಟನ್ನು ಉಂಡೆಗಳಾಗಿ ಮಾಡಿಟ್ಟುಕೊಳ್ಳಿ. ಚಪಾತಿ ಹಾಗೂ ಪೂರಿಯ ಗಾತ್ರಕ್ಕೆ ಬೇಕಾಗುವಷ್ಟು ಉಂಡೆಗಳ ಮಾಡಿಡಿ. ಚಪಾತಿ ಪೂರಿ ಲಟ್ಟಿಸುವಂತೆ ನಿಧಾನವಾಗಿ ಪೂರಿಯನ್ನು ಲಟ್ಟಿಸಿಕೊಳ್ಳಬೇಕು. ಒಮ್ಮೆ ಅಷ್ಟು ಹಿಟ್ಟನ್ನು ಲಟ್ಟಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಕಾವಲಿ ಇಟ್ಟು ರೊಟ್ಟಿಗಳನ್ನು ಒಂದೊಂದಾಗಿ ಬೇಯಿಸಲು ಹಾಕಿಕೊಳ್ಳಿ.
ಕಾವಲಿ ಬಿಸಿಯಾದಾಗ ತುಪ್ಪ ಇಲ್ಲವೆ ಎಣ್ಣೆಯನ್ನು ಹಾಕಿಕೊಂಡು ಬೇಯಸಿಬಹುದು. ಇಲ್ಲವೆ ಹಾಗೆಯೇ ಡ್ರೈ ರೊಟ್ಟಿಯನ್ನಾಗಿಯೂ ಇದನ್ನು ಕಾಯಿಸಿಕೊಳ್ಳಬಹುದು. ರುಮಾಲ್ ರೋಟಿಯನ್ನು ದೊಡ್ಡ ಬಾಣಲೆಯನ್ನು ತಿರುಗಿಸಿ ಇಟ್ಟು ಅದರ ಮೇಲೆ ಹಾಕಿ ಕಾಯಿಸಿವುದು ನೀವು ನೋಡಿರಬಹುದು. ಈ ರೀತಿಯಾಗಿಯೂ ಮಾಡಬಹುದು.
ಆದ್ರೆ ಮನೆಯಲ್ಲಿ ಮಾಡೋದ್ರಿಂದ ಈ ವಿಧಾನದಲ್ಲಿ ಮಾಡಿ. ಬಾಣಲೆ ಮೇಲೆ ಕಾಯಿಸುವುದು ವಿಶೇಷ ರುಚಿ ಬರಲಿದೆ. ಹಾಗೆ ಬೆಳಗ್ಗೆ ಈ ರೀತಿಯ ರುಮಾಲ್ ರೋಟಿ ಮಾಡಿ ಸವಿದು ನೋಡಿ. ಹಾಗೆ ಈ ರೋಟಿಯನ್ನು ವೆಜ್ ಕುರ್ಮ, ಬದನೆಕಾಯಿ ಪಲ್ಯ, ಎಣ್ಣೆಗಾಯಿ ಪಲ್ಯ, ಹುರಿಗಡಲೆ, ಶೇಂಗಾ ಚಟ್ನಿ ಹೀಗೆ ಹಲವು ಖಾದ್ಯಗಳ ಜೊತೆಗೂ ಸವಿಯಬಹುದು. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಅದರ ರುಚಿ ಒಮ್ಮೆ ಸವಿದು ನೋಡಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಇದನ್ನು ಮಾಡಲು 2 ವಸ್ತು ಇದ್ದರೆ ಸಾಕು. ಹೀಗಾಗಿ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಮಾಡಬಹುದು.



Click it and Unblock the Notifications