Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಳೆಕಾಯಿ ಬಜ್ಜಿ ಮಾಡಿದ್ರೆ 5 ನಿಮಿಷದಲ್ಲಿ ಖಾಲಿಯಾಗುತ್ತೆ..! ಮಾಡುವ ವಿಧಾನವಿದು!
ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಈ ಮಳೆಗಾಲದ ಆರಂಭದ ದಿನದಲ್ಲಿ ನೀವು ಸ್ನ್ಯಾಕ್ಸ್ ಸವಿಯಲು ಮುಂದಾದರೆ ಬಹಳ ರುಚಿ ಹಾಗೆ ಅದ್ಭುತ ರುಚಿ ನೀಡಲಿದೆ. ಆದ್ರೆ ಸಂಜೆ ಬಾಯಿ ರುಚಿಗೆ ಯಾವ ಸ್ನ್ಯಾಕ್ಸ್ ಮಾಡಬೇಕು? ಸಂಜೆ ಸಮಯದಲ್ಲಿ ಸವಿಯಲು ನೀವು ಹೆಚ್ಚಾಗಿ ಅಂಗಡಿಯಿಂದ ತಂದಿರುವ ತಿಂಡಿಗಳನ್ನು ಸವಿಯುವುದು ನೋಡಬಹುದು. ಹಾಗೆ ರಸ್ತೆ ಬದಿ ಸಿಗುವಂತಹ ಸ್ನ್ಯಾಕ್ಸ್‌ಗಳನ್ನು ಕೂಡ ಮಾಡಿ ಸವಿಯುವುದು ಸಾಮಾನ್ಯ.
ಇಂದು ನಾವು ಇಂತಹ ಸಂಜೆ ಸಮಯದಲ್ಲಿ ಸವಿಯಲು ಬಳಸುವ ಬೋಂಡಾ, ಬಜ್ಜಿಯಲ್ಲಿ ವಿಶೇಷವಾಗಿ ಹೊಸದಾಗಿ ವಿಶೇಷ ರುಚಿಯ ಬೋಂಡಾ ಸವಿಯೋಣ. ಅದರಲ್ಲೂ ಬಾಳೆಯಿಯ ಈ ಬಚ್ಚಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಮಾವಿನಕಾಯಿ ಬಜ್ಜಿ ಸವಿಯಲು ಗರಂ ಗರಂ ಆಗಿ ಚಟ್ನಿ ಜೊತೆಗೆ ಸವಿಯಲು ಬಹಳ ರುಚಿಯಾಗಿರಲಿದೆ. ಹಾಗಾದರೆ ಈ ಬಾಳೆಕಾಯಿ ಬಜ್ಜಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ.

ಬಾಳೆಕಾಯಿ ಬಜ್ಜಿ ಮಾಡಿದ್ರೆ ನಿಮಿಷದಲ್ಲಿ ಖಾಲಿಯಾಗುತ್ತೆ. ಎಲ್ಲರು ಟೀ-ಕಾಫಿಯ ಜೊತೆಗೆ ಸವಿಯಲು ಬಹಳ ರುಚಿಯಾಗಿರುತ್ತೆ. ಸಂಜೆ ಸಮಯದಲ್ಲಿ ಇದನ್ನು ಸವಿದು ನೋಡಿದ್ರೆ ಬಹಳ ರುಚಿಯಾಗಿರಲಿದೆ. ಹಾಗಾದ್ರೆ ಈ ಬಾಳೆಕಾಯಿ ಬಜ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳೋಣ.
ಬಾಳೆಕಾಯಿ ಬಜ್ಜಿ ಮಾಡಲು ಯಾವ ವಸ್ತುಗಳು ಬೇಕು?
ಬಾಳೆಕಾಯಿ
ಸೋಡಾ
ಕಡಲೆ ಹಿಟ್ಟು
ಉಪ್ಪು
ಎಣ್ಣೆ
ಅರಶಿಣ
ಖಾರದ ಪುಡಿ
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಪ್ ಕಡಲೆ ಹಿಟ್ಟು ಹಾಕಿಕೊಳ್ಳಿ. 2 ಸ್ಪೂನ್ ಅಕ್ಕಿ ಹಿಟ್ಟು, ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಖಾರದ ಪುಡಿ, ಅರಶಿಣ ಪುಡಿ, ಅಜ್ಬೈನ, ಇಂಗು, ಜೀರಿಗೆ ಪುಡಿ, ರುಚಿ ತಕ್ಕಷ್ಟು ಉಪ್ಪು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತೆರ ಎರಡು ಚಮಚ ಬಿಸಿ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು.
ಈ ಹಿಟ್ಟು ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಬಹಳ ತೆಳುವಾಗಿ ಹಾಗೆ ದಪ್ಪವಾಗಿ ಹಿಟ್ಟು ಹದ ಮಾಡಬೇಡಿ. ಇಡ್ಲಿ ಹಿಟ್ಟಿನಂತಹ ಹದದಲ್ಲಿ ಬಜ್ಜಿಗೆ ಹಿಟ್ಟು ಮಾಡಿಕೊಳ್ಳಿ. ನಂತರ ಸೋಡಾ ಪುಡಿ ಕೂಡ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಿಟ್ಟು ಬದಿಗಿಟ್ಟು ಬಾಳೆಕಾಯಿ ಕತ್ತರಿಸಿಕೊಳ್ಳಿ. ಕೈಗೆ ಎಣ್ಣೆ ಹಚ್ಚಿಕೊಂಡು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಬಳಿಕ ಉದ್ದವಾಗಿ ತೆಳುವಾಗಿ ಕತ್ತರಿಸಿಕೊಳ್ಳಬೇಕು. ಇಲ್ಲವೆ ಸ್ಲೈಸರ್‌ನಿಂದ ತೆಳುವಾಗಿ ಕತ್ತರಿಸಿ ಇಟ್ಟುಕೊಳ್ಳಿ.
ಈಗ ಕತ್ತರಿಸಿದ ಬಾಳೆಕಾಯಿಯನ್ನು ಹಿಟ್ಟಿನಲ್ಲಿ ಹಾಕಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಟ್ಟು ನಂತರ ಬಾಳೆಕಾಯಿಗಳನ್ನು ಇದಕ್ಕೆ ಹಾಕಿಕೊಳ್ಳಬೇಕು ಒಂದೊಂದೇ ಬಾಳೆಕಾಯಿ ಹಾಕಿ ಬಜ್ಜಿ ಹಾಕಿ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ ಕರಿದುಕೊಂಡು ನಂತರ ಬದಿಗಿಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯ ಬಾಳೆಕಾಯಿ ಬಜ್ಜಿ ರೆಡಿಯಾಗುತ್ತದೆ, ನೀವು ಕೂಡ ಇದನ್ನು ಮಾಡಿ ನೋಡಿ. ಟೀ ಕಾಫಿಯ ಜೊತೆಗೆ ಹಾಗೆ ಸಂಜೆಯ ಸಮಯದಲ್ಲಿ ಅದ್ಭುತ ರುಚಿಯ ಸ್ನ್ಯಾಕ್ಸ್ ಇದಾಗಿರಲಿದೆ.
ಇದನ್ನು ಊಟ ತಿಂಡಿಯ ಜೊತೆಗೂ ಕೂಡ ನೀವು ಸವಿಯಬಹುದು. ಎಲ್ಲ ಸಮಯದಲ್ಲೂ ಅದ್ಭುತ ರುಚಿ ನೀಡುವ ಬಜ್ಜಿ ಇದಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಇದು ಟೈಮ್ ಪಾಸ್ ಮಾಡಲು ಬಹಳ ರುಚಿ ನೀಡುತ್ತೆ.



Click it and Unblock the Notifications
