Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಮಸಾಲೆ ಹುರಿಗಡಲೆ ಮಾಡೋಕೆ 1 ವಸ್ತು ಇದ್ರೆ ಸಾಕು..! ಮಾಡೋದು 2 ನಿಮಿಷದ ಕೆಲಸ!
ನೀವು ಸಂಜೆ ಸಮಯದಲ್ಲಿ ಮನೆಯಲ್ಲಿ ಇದ್ದಾಗ ಬಾಯಿ ರುಚಿಗೆ ಸವಿಯಲೆಂದು ಬೇಕರಿ ತಿಂಡಿ, ಕರಿದ ತಿಂಡಿಗಳ ಸವಿಯಲು ಇಷ್ಟಪಡುತ್ತೀರಿ. ಹಾಗೆ ಕೆಲವೊಂದು ತಿಂಡಿಯನ್ನ ಮನೆಯಲ್ಲೂ ಕೂಡ ಮಾಡಿ ಸಂಜೆ ಸಮಯದಲ್ಲಿ ಸವಿಯಲು ಮುಂದಾಗುವುದು ಸಾಮಾನ್ಯ. ನೀವು ಸಂಜೆ ಸಮಯದಲ್ಲಿ ಕಡ್ಲೆಗಳನ್ನು ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಅದರಲ್ಲೂ ಮಸಾಲೆ ಕಡ್ಲೆಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಏಕೆಂದರೆ ಮಸಾಲೆ ಹಾಕಿದ ಕಡ್ಲೆಯು ನಿಮ್ಮ ಬಾಯಿ ರುಚಿ ಹೆಚ್ಚಿಸುವ ಜೊತೆಗೆ ನಿಮ್ಮ ಸಂಜೆಯ ಸ್ನ್ಯಾಕ್ಸ್ ಸಮಯವನ್ನು ಮತ್ತಷ್ಟು ರುಚಿಯಾಗಿಸಲಿದೆ. ಹೀಗಾಗಿ ಸಂಜೆಯ ಸಮಯದಲ್ಲಿ ಮಸಾಲೆ ಕಡ್ಲೆಗಳನ್ನು ನೀವು ಸವಿಯಲು ಇಷ್ಟಪಡುತ್ತಿರುತ್ತೀರಿ. ಟೀ-ಕಾಫಿಯ ಜೊತೆಗೆ ನಿಮ್ಮ ಇಷ್ಟದ ಯಾವುದಾದರು ಸ್ನ್ಯಾಕ್ಸ್ ಸವಿಯುವುದು ಇಷ್ಟದ ಕೆಲಸದಲ್ಲಿ ಒಂದಾಗಿರಬಹುದು.

ಹಾಗೆ ನಾವಿಂದು ಹಲವು ಬಗೆಯ ಮಸಾಲೆ ಕಡ್ಲೆಗಳ ರುಚಿ ನೋಡಿರಲಿದ್ದೀರಿ. ಆದ್ರೆ ಹಲವು ಬಾರಿ ನೀವು ಬೇಕರಿ ರುಚಿಯ ಕಡ್ಲೆಗಳ ಸವಿದಿರುವುದು ಹೆಚ್ಚು. ಆದ್ರೆ ಮನೆಯಲ್ಲೇ ಈ ಕಡ್ಲೆ ರೆಸಿಪಿ ಮಾಡುವುದು ಎಷ್ಟು ಸುಲಭ ಎಂಬುದು ನಿಮಗೂ ತಿಳಿದಿರುವುದಿಲ್ಲ. ಹಾಗಾದ್ರೆ ಮನೆಯಲ್ಲಿ ಕೇವಲ 5 ನಿಮಿಷದಲ್ಲಿ ಮಸಾಲೆ ಹುರಿಗಡಲೆ ಮಾಡುವುದು ಹೇಗೆ ಅನ್ನೋದು ಗೊತ್ತಾ?
ಹುರಿಗಡಲೆಯಿಂದ ನೀವು ಹಲವು ಬಗೆಯ ರುಚಿ ರುಚಿಯ ಚಟ್ನಿ ಮಾಡಿ ಸವಿದಿರುತ್ತೀರಿ. ಆದ್ರೆ ಈ ರೀತಿಯಲ್ಲಿ ಮಸಾಲೆ ಕಡ್ಲೆ ಮಾಡಿದ್ದೀರಾ? ಹಾಗಾದ್ರೆ ನಾವಿಂದು ಮಸಾಲೆ ಹುರಿಗಡಲೆ ಮಾಡುವ ಸುಲಭದ ವಿಧಾನವ ಕುರಿತಂತೆ ಇಲ್ಲಿ ತಿಳಿದುಕೊಳ್ಳೋಣ. ಈ ಹುರಿಗಡಲೆ ಮಸಾಲೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಂದು ತಿಳಿದುಕೊಳ್ಳಿ.
ಮಸಾಲೆ ಹುರಿಗಡಲೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಹುರಿಗಡಲೆ
ಉಪ್ಪು
ಮಸಾಲೆ ಹುರಿಗಡಲೆ ಮಾಡುವುದು ಹೇಗೆ?
ಮೊದಲು ಜರಡಿಯಲ್ಲಿ ಈ ಕಡಲೆ ಕಾಳುಗಳ ಹಾಕಿಕೊಂಡು ಇಲ್ಲವೆ ಪಾತ್ರೆಗೆ ಹಾಕಿಕೊಂಡು ತೊಳೆದುಕೊಳ್ಳಬೇಕು. ನಂತರ ತಕ್ಷಣ ನೀರಿನಿಂದ ತೆಗೆದು ಕಾಟನ್ ಬಟ್ಟೆಯ ಮೇಲೆ ಹಾಕಿ ಇಲ್ಲವೆ ಫ್ಯಾನ್‌ನ ಕೆಳಗೆ ಒಣಗಿಸಬೇಕು. ಇದರಲ್ಲಿ ನೀರಿನ ಅಂಶ ಇಲ್ಲದಂತೆ ಒಣಗಿಸಿಕೊಳ್ಳಬೇಕು. ನೀರಿನ ಅಂಶವಿದ್ದರೆ ಕಡಲೆ ಮೆತ್ತಗಾಗುತ್ತದೆ.
ಈಗ ಒಂದು ಬಾಣಲೆಯಲ್ಲಿ ಉಪ್ಪು ಹಾಕಿಕೊಳ್ಳಬೇಕು. ಸುಮಾರು ಅರ್ಧ ಕೆಜಿ ಅಷ್ಟು ಉಪ್ಪನ್ನು ಬಾಣಲೆಯಲ್ಲಿ ಹಾಕಿ ಕಾಯಲು ಬಿಡಿ. ಉಪ್ಪು ಬಿಸಿಯಾದಾಗ ಅದಕ್ಕೆ ಸ್ವಲ್ಪ ಸ್ವಲ್ಪವೇ ಕಡಲೆ ಹಾಕಿಕೊಂಡು ಹುರಿಯಬೇಕು. ನೆಲಗಡಲೆಯನ್ನು ಮರಳಿನ ಮೂಲಕ ಹುರಿದುಕೊಂಡಂತೆ ಇದನ್ನು ಉಪ್ಪಿನ ಸಹಾಯದಿಂದ ಹುರಿಯಬೇಕು.
ಸ್ವಲ್ಪ ಕಡಲೆ ಇದಕ್ಕೆ ಹಾಕಿ ತಿರುಗಿಸುತ್ತಾ ಇದ್ದರೆ ಅದು ಅರಳಿಕೊಳ್ಳುತ್ತದೆ. ನೀವು ಸುಲಭವಾಗಿ ಹುರಿದುಕೊಳ್ಳಬಹುದು. ಹೀಗೆ ಎಲ್ಲಾ ಕಡಲೆಯನ್ನು ಸಹ ಹುರಿದುಕೊಳ್ಳಿ. ಇದೇ ರೀತಿಯಾಗಿ ಎಲ್ಲಾ ಕಡಲೆಯನ್ನು ಹುರಿದುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಮಸಾಲೆ ಹುರಿಗಡಲೆ ರೆಡಿಯಾಗುತ್ತದೆ. ಬೇಕಾದರೆ ನೀವು ಈ ಉಪ್ಪಿಗೆ ಖಾರದ ಪುಡಿಯನ್ನು ಸಹ ಸೇರಿಸಿಕೊಂಡು ಮಾಡಬಹುದು. ಆದ್ರೆ ಈ ಉಪ್ಪು ಮರಬಳಕೆ ಮಾಡುವುದು ಕಷ್ಟವಾಗುತ್ತದೆ. ಆದ್ರೆ ಹಾಗೆಯೇ ಹುರಿದು ನಂತರವೂ ನೀವು ಖಾರದ ಪುಡಿಯನ್ನು ಸೇರಿಸಿಕೊಳ್ಳಬಹುದು. ಇದು ಮಸಾಲೆ ಕಡಲೆ ಮಾಡುವ ಸುಲಭದ ವಿಧಾನವಾಗಿದೆ. ನೀವು ಕೂಡ ಮನೆಯಲ್ಲಿ ಸಂಜೆ ಸ್ನ್ಯಾಕ್ಸ್ ಸಮಯಕ್ಕೆ ಸವಿಯಲು ಈ ಕಡಲೆಯನ್ನು ಮಾಡಿ ನೋಡಿ. ಬಹಳ ರುಚಿಕರವಾಗಿ ಮನೆ ಮಂದಿಯಲ್ಲ ಕುಳಿತು ಸವಿಯುವಂತಹ ಸ್ನ್ಯಾಕ್ಸ್ ಇದಾಗಿರಲಿದೆ. ಹಾಗೆ ಮಾಡಲು ಎರಡು ವಸ್ತು ಇದ್ದರೆ ಸಾಕಾಗುತ್ತದೆ. ನೀವು ಹೀಗೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications