Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಲ್ಲಿ ನೀರು ತರಿಸುವ ರಸ್ತೆ ಬದಿಯ ಮಸಾಲ ಪೂರಿ! 5 ನಿಮಿಷದಲ್ಲಿ ಮಾಡಿ ಸವಿಯಿರಿ!
ಪಾನಿಪೂರಿ, ಮಸಾಲ ಪೂರಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಅದ್ರಲ್ಲೂ ರಸ್ತೆ ಬದಿಯ ಪಾನಿಪೂರಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಪಾನಿಪೂರಿ ಮಸಾಲ ಪೂರಿ ಸವಿಯೋದು ನೋಡಬಹುದು. ಇದರ ರುಚಿ ಹಿಡಿದ ಮಂದಿ ನಿತ್ಯವೂ ಸವಿಯೋದು ನೋಡಬಹುದು. ಹಾಗೆ ಬಹುತೇಕರು ವಾರದಲ್ಲಿ 3ರಿಂದ 4 ಬಾರಿ ಆದರೂ ಸವಿಯುವವರು ಕೂಡ ಇದ್ದಾರೆ.
ಇನ್ನು ರಸ್ತೆ ಬದಿಯ ಪಾನಿಪೂರಿ ಸವಿಯುವ ಮಂದಿ ಮನೆಯಲ್ಲೂ ಮಾಡಿ ಸವಿಯಲು ಮುಂದಾಗೋದು ಕಾಮನ್. ಆದ್ರೆ ಬಹಳ ವಸ್ತುಗಳ ಬಳಸಿ ಇದನ್ನು ಮಾಡಬೇಕು ಎಂಬ ಕಾರಣಕ್ಕೆ ಹಲವರು ಮಾಡಲು ಹಿಂದೇಟು ಹಾಕುತ್ತಾರೆ. ಅದ್ರೆ ನಾವಿಂದು ಮನೆಯಲ್ಲಿ ಮಸಾಲ ಪೂರಿ ಮಾಡೋದು ಹೇಗೆ ಅನ್ನೋದನ್ನು ಹೇಳಲಿದ್ದೇವೆ.

ಅದ್ರಲ್ಲು ಸುಲಭವಾಗಿ ಮನೆಯಲ್ಲೇ ಈ ಮಸಾಲ ಪೂರಿ ಮಾಡುವುದು ಹೇಗೆ? ಮನೆ ಮಂದಿಯಲ್ಲ ಸಂಜೆ ಸಮಯದಲ್ಲಿ ಕುಳಿತು ಸವಿಯುವಂತೆ ಮನೆಯಲ್ಲೇ ನಾವು ಮಾಡಬಹುದು. ಕೆಲವೇ ವಸ್ತುಗಳ ಬಳಸಿಕೊಂಡು ಕೆಲವೇ ನಿಮಿಷದಲ್ಲಿ ರಸ್ತೆ ಬದಿ ಸಿಗುವಂತಹ ರುಚಿಯಲ್ಲೇ ನಾವು ಮನೆಯಲ್ಲಿ ಮಾಡಬಹುದು.
ಹಾಗಾದ್ರೆ ಮನೆಯಲ್ಲಿ ಮಸಾಲ ಪೂರಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸುಲಭದ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮಸಾಲ ಪೂರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಒಣ ಬಟಾಣಿ - 1 ಕಪ್
- ಆಲೂಗಡ್ಡೆ - 4
- ಟೊಮೆಟೊ
- ಈರುಳ್ಳಿ
- ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ಕರಿಮೆಣಸಿನ ಪುಡಿ
- ಕಡಲೆ ಹಿಟ್ಟು
- ಪಾನಿ ಪುರಿ ಮಸಾಲ ಪುಡಿ
- ಜೀರಿಗೆ ಪುಡಿ
- ಬೆಳ್ಳುಳ್ಳಿ
- ಹಸಿರು ಮೆಣಸಿನಕಾಯಿ
- ಶುಂಠಿ
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಚೌಚೌ
- ಪೂರಿ
- ಕ್ಯಾರೆಟ್
- ಕೊತ್ತಂಬರಿ ಸೊಪ್ಪು
- ಉಪ್ಪು
- ಅಡುಗೆ ಎಣ್ಣೆ
ಮಸಾಲ ಪೂರಿ ಮಾಡುವುದು ಹೇಗೆ?
ಇದನ್ನು ಮಾಡಲು ಮೊದಲು ಬಟಾಣಿ ಹಾಗೂ ಆಲೂಗಡ್ಡೆಯನ್ನು 8 ಗಂಟೆಗಳ ಕಾಳ ನೆನೆಸಿಟ್ಟು ಬಳಿಕ ಕುಕ್ಕರ್ಗೆ ಹಾಕಿಕೊಂಡು ನೀರು ಹಾಕಿ 2 ಸೀಟಿ ಹೊಡೆಸಿ ತೆಗೆದು ಇಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಗೂ ಟೊಮೆಟೋ ಹಾಕಿ ಉಪ್ಪು ಸಹ ಹಾಕಿ ಫ್ರೈ ಮಾಡಿಕೊಳ್ಳಿ.
1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ, ಪುದಿನ ಸೊಪ್ಪು, 1 ಬೇಯಿಸಿದ ಆಲೂಗಡ್ಡೆ, ಅರ್ಧ ಮುಷ್ಠಿ ಬೇಯಿಸಿದ ಬಟಾಣಿ ಹಾಕಿ, ನಂತರ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಇದು ನುಣ್ಣಗೆ ರುಬ್ಬಿ ನಂತರ ಒಲೆ ಮೇಲಿನ ಟೊಮೆಟೋ ಜೊತೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಬೇಯಿಸಿಕೊಂಡಿದ್ದ ಆಲೂ ಬಟಾಣಿಯನ್ನು ಸ್ವಲ್ಪ ಪುಡಿ ಮಾಡಿಕೊಳ್ಳಿ. ಈಗ ಈ ಪುಡಿ ಮಾಡಿದ ಆಲೂ ಬಟಾಣಿಯನ್ನು ಒಲೆ ಮೇಲಿನ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ಪೂರಿ ಮಸಾಲ ಆಗಿರಲಿದೆ. ಇದಕ್ಕೆ ಪಾನಿಪೂರಿ ಮಸಾಲ ಅಥವಾ ಚಾಟ್ ಮಸಾಲ, ಖಾರದ ಪುಡಿ, ಜೀರಿಗೆ ಪುಡಿ, 2 ಸ್ಪೂನ್ ಕಡಲೆ ಹಿಟ್ಟು ಕೂಡ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ 5 ನಿಮಿಷ ಕುದಿಬರಲು ಬಿಡಿ.
ಇದಾದರೆ ಮಸಾಲ ರೆಡಿಯಾಗುತ್ತೆ. ಈಗ ಅಂಗಡಿಯಿಂದ ತಂದಿರುವ ಪೂರಿಯನ್ನು ಒಂದು ಪ್ಲೇಟ್ಗೆ ಹಾಕಿಕೊಂಡು ಅದರ ಮೇಲೆ ಈ ಮಸಾಲೆ ಹಾಕಿಕೊಳ್ಳಿ. ಹಾಗೆ ಹಸಿ ಈರುಳ್ಳಿ, ಟೊಮೆಟೋ, ಚೌಚೌ, ತುರಿದ ಕ್ಯಾರೆಟ್ ಕೊತ್ತಂಬರಿ ಸೊಪ್ಪು, ಸೇವ್ ಇದ್ದರೆ ಹಾಕಿಕೊಂಡರೆ ನಿಮ್ಮ ಮುಂದೆ ರಸ್ತೆ ಬದಿ ಸವಿಯುವ ಮಸಾಲ ಪೂರಿ ರೆಡಿಯಾಗುತ್ತೆ. ನೀವು ಕೂಡ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
