Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಪಾತಿಗೆ ಹೀರೆಕಾಯಿ ಪಲ್ಯ..! ನೀವೆಂದು ಸವಿದಿರದ ರುಚಿ ಇದು..!
ನೀವು ಬೆಳಗ್ಗೆ ತಿಂಡಿಗೆ ಚಪಾತಿ, ದೋಸೆ, ಇಡ್ಲಿ ಸೇರಿ ಯಾವುದೇ ರುಚಿಯ ಖಾದ್ಯ ಮಾಡಿದ್ರೂ ಅದಕ್ಕೊಂದು ಚಟ್ನಿ ಅಥವಾ ಪಲ್ಯ ಮಾಡುತ್ತೀರಿ. ಅದರಲ್ಲೂ ಚಪಾತಿ ಮಾಡಿದಾಗ ಪಲ್ಯ ಇದ್ದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಹಾಗೆ ಬೆಳಗ್ಗೆ ತಿಂಡಿಗೆ ಮಾಡಿದ ಪಲ್ಯ ಮಧ್ಯಾಹ್ನದ ಊಟಕ್ಕೂ ರುಚಿ ನೀಡುವಂತೆ ಮಾಡಬಹುದು. ಹಾಗಾದ್ರೆ ಬೆಳಗ್ಗೆ ಮಾಡುವ ಪಲ್ಯ ಮಧ್ಯಾಹ್ನದ ಊಟಕ್ಕೂ ಸವಿಯಬೇಕಾದರೆ ಈ ರೀತಿಯ ಹೀರೆಕಾಯಿ ಪಲ್ಯ ಮಾಡಿ ನೋಡಿ. ಹೀರೆಕಾಯಿ ಪಲ್ಯ ಎಲ್ಲಾ ಖಾದ್ಯಕ್ಕೂ ಹೊಂದುವ ಹಾಗೆ ಮಾಡಿ ಸವಿಯಬಹುದು.
ಹಾಗಾದ್ರೆ ಅದ್ಭುತ ರುಚಿಯಲ್ಲಿ ಬೆಳಗ್ಗೆ ತಿಂಡಿಗೂ ಹಾಗೂ ಮಧ್ಯಾಹ್ನದ ಊಟಕ್ಕೂ ಸೇರಿ ಈ ಈ ಹೀರೆಕಾಯಿ ಪಲ್ಯ ಮಾಡಿದ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಹಾಗೆ ಹೀರೆಕಾಯಿ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಹೀರೆಕಾಯಿಯ ಚಟ್ನಿ ಹಾಗೆ ಸಾಂಬಾರ್ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಈ ಹೀರೆಕಾಯಿ ಪಲ್ಯ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಅದ್ರಲ್ಲೂ ಚಪಾತಿ ಮಾಡಿದಾಗ ಸವಿಯಲು ಇದು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ಹೀರೆಕಾಯಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಹೀರೆಕಾಯಿ
- ಈರುಳ್ಳಿ
- ಟೊಮೊಟೋ
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಕರಿಬೇವಿನ ಸೊಪ್ಪು
- ಎಣ್ಣೆ
- ಸಾಸಿವೆ
- ಜೀರಿಗೆ
- ಕಡ್ಲೆಬೇಳೆ
- ಉದ್ದಿನಬೇಳೆ
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಉಪ್ಪು
ಹೀರೆಕಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಹೀರೆಕಾಯಿಯ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಬೆಳ್ಳುಳ್ಳಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು ಹಾಕಿಕೊಳ್ಳಿ. ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಒಂದು ಈರುಳ್ಳಿ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಚಿಕ್ಕದಾಗಿ ಕತ್ತರಿಸಿದ ಟೊಮೆಟೋ ಕೂಡ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ರುಚಿಗರ ತಕ್ಕಷ್ಟು ಉಪ್ಪು, ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಹೀರೆಕಾಯಿಯನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 5 ನಿಮಿಷ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ.
ನಂತರ ಮುಚ್ಚಳ ತೆಗೆದು ತಿರುಗಿಸಿಕೊಂಡು ನೀರಿನ ಅಂಶ ಆವಿಯಾಗುವಂತೆ ಫ್ರೈ ಮಾಡಿ. ಈಗ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಒಂದರಿಂದ ಎರಡು ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹೀರೆಕಾಯಿ ಪಲ್ಯ ರೆಡಿಯಾಗುತ್ತದೆ. ಇದನ್ನು ಚಪಾತಿ ಜೊತೆಗೆ ಸವಿಯಲು ನೀಡಿದರೆ ರುಚಿ ದುಪ್ಪಟ್ಟಾಗುತ್ತೆ. ಹಾಗೆ ಅನ್ನದ ಜೊತೆಗೂ ಬಹಳ ರುಚಿ ನೀಡಲಿದೆ.
ಹೀರೆಕಾಯಿಯಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಇದರ ಸಿಪ್ಪೆಯಿಂದ ಮಾಡುವಂತಹ ಚಟ್ನಿ ಅದ್ಭುತ ರುಚಿ ನೀಡುತ್ತದೆ. ನೀವು ಕೂಡ ಈ ಪಲ್ಯ ಅಥವಾ ಚಟ್ನಿಯನ್ನು ಒಮ್ಮೆ ಸವಿದು ನೋಡಿ.



Click it and Unblock the Notifications
