Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಪಾತಿ, ಪೂರಿ, ಇಡ್ಲಿಗೆ ಹೀರೆಕಾಯಿ ಕರಿ ಸಖತ್ ಟೇಸ್ಟ್.! ಮಾಡೋದು ಸುಲಭ!
ಬೆಳಗ್ಗೆ ತಿಂಡಿಯ ಸಮಯಕ್ಕೆ ನೀವು ಚಪಾತಿ, ಪೂರಿ, ಇಡ್ಲಿ ಮಾಡಿರುತ್ತೀರಿ ಅಂದುಕೊಳ್ಳಿ, ಈ ವೇಳೆ ಅದರ ಜೊತೆ ಸವಿಯಲು ಯಾವುದಾದರು ಖಾದ್ಯ ಮಾಡಿಯೇ ಮಾಡುತ್ತೀರಿ. ಚಟ್ನಿ, ಸಾಂಬಾರ್, ಗ್ರೇವಿ, ಪಲ್ಯ ಮಾಡುವುದು ಸಾಮಾನ್ಯ. ಆದ್ರೆ ನೀವು ತಿಂಡಿಯ ಜೊತೆಗೆ ಸವಿಯಲು ಹಾಗೆ ಊಟದ ಜೊತೆಗೂ ಇದು ಸವಿಯಲು ರುಚಿ ನೀಡಬೇಕು ಎಂದು ಭಾವಿಸುವುದು ಹೆಚ್ಚು.
ಇಂತಹ ಸಂದರ್ಭದಲ್ಲಿ ನೀವು ಸುಲಭವಾಗಿ ಹಾಗೆ ರುಚಿ ರುಚಿಯಾಗಿ ಮಾಡಬಹುದಾದ ಹೀರೆಕಾಯಿ ಕರಿ ಮಾಡಿ ನೋಡಿ. ನೀವು ಯಾವುದೇ ತಿಂಡಿ ಮಾಡಿದ್ದರೂ ಅದಕ್ಕೆ ಈ ಹೀರೆಕಾಯಿಯ ಮಸಾಲೆ ಕರಿ ಬಹಳ ರುಚಿ ನೀಡಲಿದೆ. ಹಾಗೆ ಎಲ್ಲಾ ಕಡೆಯಿಂದಲೂ ಊಟಕ್ಕೆ ಇದನ್ನು ಸವಿಯಬಹುದು. ನೀವು ಒಮ್ಮೆ ಮಾಡಿದ ತಿಂಡಿ ಮೂರು ಹೊತ್ತು ಸಹ ಸವಿಯಬಹುದು.

ಇನ್ನು ಹೀರೆಕಾಯಿಯ ಆರೋಗ್ಯಕರ ಲಾಭ ನೀವು ತಿಳಿದರೆ ಹೀರೆಕಾಯಿಗೆ ಫಿದಾ ಆಗುತ್ತೀರಿ. ಹೀರೆಕಾಯಿಯಲ್ಲಿ ವಿಟಮಿನ್ ಎ ಹೇರಳವಾಗಿದೆ. ಹಾಗೆ ಬೀಟಾ ಕ್ಯಾರೋಟಿನ್ ಸಹ ಇದ್ದು, ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ ತರಕಾರಿ ಇದು. ಇದರಲ್ಲಿನ ಕಬ್ಬಿಣಾಂಶ ನಿಮ್ಮ ರಕ್ತ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣ. ಕೆಂಪು ರಕ್ತ ಹೆಚ್ಚಾಗಲು ಇದು ಸಹಕಾರಿಯಾಗಲಿದೆ.
ಇಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿರುವ ಹೀರೆಕಾಯಿಯ ಕರಿಯು ಸುಲಭವಾಗಿ ಮಾಡಬಹುದು. ಹಾಗಾದ್ರೆ ನಾವಿಂದು ಹೀರೆಕಾಯಿ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿಯ ಮಸಾಲ ಕರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹೀರೆಕಾಯಿ
- ಈರುಳ್ಳಿ
- ಬೆಳ್ಳುಳ್ಳಿ
- ಶುಂಠಿ
- ಲವಂಗ
- ದಾಲ್ಚಿನ್ನಿ
- ಬಿಳಿ ಎಳ್ಳು
- ಸೋಂಪು ಕಾಳು
- ತೆಂಗಿನಕಾಯಿ
- ಅರಿಶಿನ ಪುಡಿ
- ಖಾರದ ಪುಡಿ
- ದನಿಯಾ ಪುಡಿ
- ಗರಂ ಮಸಾಲ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ಉಪ್ಪು
ಹೀರೆಕಾಯಿಯ ಮಸಾಲ ಕರಿ ಮಾಡುವುದು ಹೇಗೆ?
ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ಹಾಕಿ ಹಾಗೆ ಸೋಂಪು ಕಾಳು, ಲವಂಗ, ಚಕ್ಕೆ, ಬೆಳ್ಳುಳ್ಳಿ, ಶುಂಠಿ, ಬಿಳಿ ಎಳ್ಳು, ಕೊತ್ತಂಬರಿ ಸೊಪ್ಪು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹಾಗೆ ಈ ಪೇಸ್ಟ್ ಅನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಕರಿಬೇವು, ಹೆಚ್ಚಿಕೊಂಡಿರುವ ಹೀರೆಕಾಯಿಯನ್ನು ಹಾಕಿಕೊಂಡು ಫ್ರೈ ಮಾಡಿ.
ಹಾಗೆ ಇದಕ್ಕೆ ಹೆಚ್ಚಿಕೊಂಡಿರುವ 3 ಟೊಮೆಟೋ ಹಾಕಿಕೊಳ್ಳಿ. ನಂತರ ಇದಕ್ಕೆ ಉಪ್ಪು ಹಾಕಿ ಗೊಜ್ಜು ರೀತಿ ಬರುವವರೆಗೂ 5 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈಗ ಅರಶಿಣ, ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಹಾಕಿಕೊಳ್ಳಿ. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಹಚ್ಚು ನೀರು ಹಾಕದೆ, ಗಟ್ಟಿಯಾಗಿ ಇರುವಂತೆ ನೋಡಿಕೊಳ್ಳಿ.
ಹಾಗೆ ಇದನ್ನು ಕುದಿಬರಲು ಬಿಡಿ. ಸುಮಾರು 10 ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಆಗಾಗ ತಿರುಗಿಸುತ್ತಾ ಇರಿ. 10 ನಿಮಿಷಗಳ ಒಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೀರೆಕಾಯಿ ಕರಿ ರೆಡಿಯಾಗುತ್ತದೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
