Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
5 ನಿಮಿಷದೊಳಗೆ ಈ ಸ್ಪೆಷಲ್ ಹೀರೆಕಾಯಿ ಚಟ್ನಿ ಮಾಡಿ..! ತುಂಬಾ ಸರಳ!
ನಾವು ಯಾವುದೇ ತಿಂಡಿ ಮಾಡಿದರು ಕೂಡ ಅದಕ್ಕೊಂದು ಚಟ್ನಿ ಮಾಡಿದರೆ ಮಾತ್ರವೇ ತಿಂಡಿಯ ರುಚಿ ದುಪ್ಪಟ್ಟಾಗುತ್ತೆ. ಹೀಗಾಗಿ ಬೆಳಗ್ಗೆಯ ಬ್ರೇಕ್‌ಫಾಸ್ಟ್‌ಗೆ ಹೆಚ್ಚಾಗಿ ಯಾವುದಾದರು ಒಂದು ಚಟ್ನಿ ಮಾಡುತ್ತೇವೆ. ಆದ್ರೆ ಸುಲಭವಾಗಿ ಮಾಡುವ ಚಟ್ನಿ ಎಂಬ ಕಾರಣಕ್ಕೆ ನಾವು ಯಾವಾಗಲು ತೆಂಗಿನಕಾಯಿಯ ಚಟ್ನಿ ಮಾಡುತ್ತೇವೆ, ಇಲ್ಲವೆ ಹುರಿಗಡಲೆಯಿಂದ ಮಾಡುವ ರುಚಿ ರುಚಿ ಚಟ್ನಿ ಖಾಯಂ ಎನ್ನಬಹುದು.
ಆದ್ರೆ ಇದನ್ನು ಬಿಟ್ಟು ನಾವು ಮಾಡುವ ಕೆಲವೊಂದು ಚಟ್ನಿಗಳು ರುಚಿಯಲ್ಲಿ ಫಸ್ಟ್ ಕ್ಲಾಸ್ ಆಗಿರುತ್ತೆ. ಆದ್ರೆ ದಿನಾಲು ಮಾಡಲು ಆಗುವುದಿಲ್ಲ. ಅಂತಹ ಚಟ್ನಿಗಳಲ್ಲಿ ಒಂದು ಹೀರೆಕಾಯಿ ಚಟ್ನಿ. ಹೀರೆಕಾಯಿ ಚಟ್ನಿ ನೀವು ಸವಿದಷ್ಟು ರುಚಿ ನೀಡುವಂತಹ ಚಟ್ನಿ ಆಗಿದೆ. ಇದರಿಂದ ನಿಮ್ಮ ತಿಂಡಿಯ ರುಚಿ ಕೂಡ ಹೆಚ್ಚಾಗುತ್ತದೆ. ಹಾಗೆ ಈ ಹೀರೆಕಾಯಿಯಲ್ಲಿ ಆರೋಗ್ಯಕರ ಅಂಶಗಳು ಕೂಡ ಇವೆ.

ಆದ್ರೆ ಈ ಹೀರೆಕಾಯಿ ಚಟ್ನಿ ಮಾಡುವುದಾದ್ರು ಹೇಗೆ? ನಿಮ್ಮ ಈ ಪ್ರಶ್ನೆಗೆ ನಾವಿಂದು ಸರಳವಾದ ರೆಸಿಪಿ ಮೂಲಕ ಉತ್ತರ ನೀಡಲಿದ್ದೇವೆ. ಈ ರೀತಿಯಾಗಿ ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಹೀರೆಕಾಯಿ ರುಚಿ ರುಚಿಯ ಚಟ್ನಿ ಮಾಡಬಹುದು. ಹಾಗಾದ್ರೆ ಹೀರೆಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಮಾಡುವಾಗ ಏನೆಲ್ಲಾ ನಿಯಮ ಪಾಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೀರೆಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಹೀರೆಕಾಯಿ ಅರ್ಧ ಕೆಜಿ
- ಜೀರಿಗೆ
- ಅರಶಿಣ
- ಈರುಳ್ಳಿ
- ಹುಣಸೆ ಹುಳಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
- ಬೆಳ್ಳುಳ್ಳಿ
- ಶೇಂಗಾ ಬೀಜ
ಹೀರೆಕಾಯಿ ಚಟ್ನಿ ಮಾಡುವ ವಿಧಾನವೇನು?
ಮೊದಲು ಹೀರೆಕಾಯಿಯ ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ಹೀರೆಕಾಯಿಯ ಗೆರೆಗಳು ಮುಚ್ಚುವಷ್ಟು ಈ ಸಿಪ್ಪೆ ತೆಗೆದರೆ ಸಾಕು. ಹಾಗೆ ಇದನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಹೆಚ್ಚಿಕೊಂಡಿರುವ ಹೀರೆಕಾಯಿ ಹಾಕಿ ಫ್ರೈ ಮಾಡಬೇಕು.
ಇದಕ್ಕೆ ಹಸಿ ಮೆಣಸು, ಈರುಳ್ಳಿ ಹಾಕಿಕೊಂಡು 6 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ ಹಾಕಿ ಫ್ರೈ ಆಗಲು ಬಿಡಿ. ಆಗಾಗ ತಳ ಹಿಡಿಯದಂತೆ ಅಲ್ಲಾಡಿಸುತ್ತಾ ಇರಿ. ಹಾಗೆ ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಫ್ರೈ ಮಾಡಿಕೊಂಡು ಅರಶಿಣ, ಸಣ್ಣ ಗೋಲಿ ಗಾತ್ರದ ಹುಣಸೆ ಹುಳಿ, ಜೀರಿಗೆ ಹಾಕಿ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಈ ಎಲ್ಲಾ ವಸ್ತುಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಹಾಗೆ ಇದಕ್ಕೆ ಒಂದು ಮುಷ್ಠಿ ಶೇಂಗಾ ಬೀಜ ಹುರಿದು ಅದರ ಸಿಪ್ಪೆಯನ್ನು ತೆಗೆದು ಇದಕ್ಕೆ ಸೇರಿಸಿಕೊಳ್ಳಿ. ಹಾಗೆ ಸ್ಪೂನ್ ಬೆಲ್ಲ, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ತರಿತರಿಯಾಗಿ ಇದನ್ನು ರುಬ್ಬಿಕೊಂಡರೆ ಚಟ್ನಿ ರೆಡಿಯಾಗುತ್ತದೆ.
ಇಷ್ಟದಾರೆ ನಿಮ್ಮ ಮುಂದೆ ಹೀರೆಕಾಯಿ ಚಟ್ನಿ ರೆಡಿಯಾಗಲಿದೆ. ನೀವು ಕೂಡ ಮನೆಯಲ್ಲಿ ಸುಲಭವಾಗಿ ಈ ಚಟ್ನಿ ಮಾಡಿ ನೋಡಿ.



Click it and Unblock the Notifications
