Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಚಕ್ಕುಲಿಯಂತಹ ಅಕ್ಕಿ ಸಂಡಿಗೆ ಥಟ್ ಅಂತ ರೆಡಿ ಮಾಡಿ..! ಹೇಗೆ ಗೊತ್ತಾ?
ಊಟದ ಜೊತೆಗೆ ಸವಿಯಲು ಉಪ್ಪಿನಕಾಯಿ, ಪಲ್ಯ ಎಷ್ಟು ರುಚಿ ನೀಡಲಿದ್ಯೋ ಹಾಗೆ ಹಪ್ಪಳ, ಸಂಡಿಗೆ ಕೂಡ ಅಷ್ಟೇ ರುಚಿ ನೀಡಲಿದೆ. ಹಲವರಿಗೆ ಈ ಹಪ್ಪಲ ಸಂಡಿಗೆ ಇಲ್ಲದೆ ಊಟವೇ ರುಚಿಕರ ಅನಿಸೋದಿಲ್ಲ. ಹಾಗೆ ಈಗಂತು ಅಂಗಡಿಗಳಲ್ಲಿ ವಿವಿಧ ರೀತಿಯ ವಿವಿಧ ರುಚಿಯ ಸಂಡಿಗೆ ಪ್ಯಾಕೆಟ್ಗಳು ಸಿಗುತ್ತವೆ. ಅದನ್ನು ಖರೀದಿಸಿ ತಂದು ಕಾದ ಎಣ್ಣೆಗೆ ಇಳಿಬಿಟ್ಟು ಸವಿಯೋದು ನೋಡಬಹುದು.
ಊಟದೊಂದಿಗೆ ಈ ರೀತಿ ಸಂಡಿಗೆ ಹಾಗೂ ಹಪ್ಪಳ ಬಹಳ ರುಚಿ ತರಲಿದೆ. ಈ ಸಂಡಿಗೆ ಮಾಡೋದು ಕೂಡ ಬಹಳ ಸುಲಭ. ಅಕ್ಕಿಯನ್ನು ಬಳಸಿ ವಿವಿಧ ಬಗೆಯಲ್ಲಿ ಸಂಡಿಗೆ ಮಾಡಬಹುದು. ನಾವಿಂದು ರುಚಿ ರುಚಿಯಾದ ಅಕ್ಕಿ ಹಿಟ್ಟಿನಿಂದ ಮಾಡುವ ಚಕ್ಕುಲಿಯಂತಹ ಸಂಡಿಗೆಯ ಕುರಿತು ತಿಳಿದುಕೊಳ್ಳೋಣ. ನೋಡಲು ಚಕ್ಕುಲಿಯಂತಿದ್ದರೂ ಊಟದೊಂದಿಗೆ ಇದು ಬಹಳ ರುಚಿ ನೀಡಲಿದೆ.

ಅಕ್ಕಿ ಸಂಡಿಗೆಯನ್ನು ನೀವು ಕೂಡ ಮಾಡಿರುತ್ತೀರಿ. ಅನ್ನ ಉಳಿದಿದ್ದರೂ ಕೂಡ ಅದರಿಂದ ಸಂಡಿಗೆ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಮನೆಯಲ್ಲೇ ಹೇಗೆ ಅಕ್ಕಿ ಬಳಸಿ ಚಕ್ಕುಲಿಯಂತಹ ಸಂಡಿಗೆ ಮಾಡುವುದು ಅನ್ನೋದನ್ನು ತಿಳಿಯೋಣ. ಅಕ್ಕಿ ಸಂಡಿಗೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅಕ್ಕಿ ಸಂಡಿಗೆ ಮಾಡಲು ಬೇಕಾಗುವ ಪದಾರ್ಥಗಳು
ಅಕ್ಕಿ
ಸಾಬುದಾನಿ
ಜೀರಿಗೆ
ಬಿಳಿ ಎಳ್ಳು
ಅಕ್ಕಿ ಸಂಡಿಗೆ ಮಾಡುವ ವಿಧಾನವೇನು?
ಒಂದು ಪಾತ್ರೆಯಲ್ಲಿ 4 ಕಪ್ ಅಕ್ಕಿ ಹಾಕಿ ಚೆನ್ನಾಗಿ ತೊಳೆದು ನಂತರ ಸತತ 2 ದಿನಗಳ ಕಾಲ ನೆನೆಸಿಡಬೇಕು. ಹಾಗೆ ಒಂದು ದಿನ ಮೊದಲು 1 ಕಪ್ ಸಾಬುದಾನಿಯನ್ನು ಸಹ ಪಾತ್ರೆಯಲ್ಲಿ ಹಾಕಿ ನೆನೆಸಿಡಬೇಕು. 2 ದಿನದ ಬಳಿಕ ಈಗ ಅಕ್ಕಿಯನ್ನು ನೀರಿನಿಂದ ತೆಗೆದು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಒಟ್ಟು 3 ಕಪ್ಗಿಂತ ಹೆಚ್ಚು ನೀರು ಬಳಸಬೇಡಿ.
ಈಗ ನೆನೆಸಿಟ್ಟ ಸಾಬುದಾನಿಯನ್ನು ಸಹ ನುಣ್ಣಗೆ ರುಬ್ಬಿಕೊಂಡು ಅಕ್ಕಿ ಹಿಟ್ಟಿನಲ್ಲಿ ಹಾಕಿಕೊಂಡು ಮಿಕ್ಸ್ ಮಾಡಿ. ಎರಡು ಹಿಟ್ಟು ಚೆನ್ನಾಗಿ ಮಿಶ್ರಣವಾಗಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 8 ಕಪ್ ನೀರು ಹಾಕಿ ಅದಕ್ಕೆ 3 ಸ್ಪೂನ್ ಉಪ್ಪು ಸಹ ಹಾಕಿಕೊಂಡು ಕುದಿಬರಲು ಬಿಡಿ. ನಂತರ ರುಬ್ಬಿಕೊಂಡ ಹಿಟ್ಟನ್ನು ನಿಧಾನವಾಗಿ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ಇದು ಗಟ್ಟಿಯಾಗಲು ಆರಂಭಿಸಬೇಕು ಹಾಗೆ ಕೈ ಬಿಡದೆ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 3 ನಿಮಿಷ ಬಿಡಿ. ಇದು ಬೆಣ್ಣೆಯಂತೆ ಹದವಾದಾಗ ಒಲೆ ಆಫ್ ಮಾಡಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬಿಳಿ ಎಳ್ಳು, ಜೀರಿಗೆ ಸಹ ಹಾಕಿ ಮಿಕ್ಸ್ ಮಾಡಬೇಕು. ಈ ಹಿಟ್ಟು ಗಟ್ಟಿ ಮೊಸರಿನ ಹದಕ್ಕೆ ಬಂದಿರಬೇಕು. ಈಗ ಸಂಡಿಗೆ ಮಾಡಲು ಚಕ್ಕುಲಿ ಅಚ್ಚು ತೆಗೆದುಕೊಳ್ಳಿ. ಅದರ ಒಳಗೆ ಸಂಡಿಗೆ ಹಿಟ್ಟನ್ನು ಹಾಕಿಕೊಂಡು ಪ್ಲಾಸ್ಟಿಕ್ ಮೇಲೆ ಅಥವಾ ಕಾಟನ್ ಬಟ್ಟೆಯ ಮೇಲೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಚಕ್ಕುಲಿ ರೀತಿಯಲ್ಲಿ ಹಾಕಿಕೊಳ್ಳಿ.
ನಂತರ ಒಂದು ಬಿಸಿಲು ಒಂದು ಕಡೆ ಹಾಗೆ ಇನ್ನೊಂದು ಬಿಸಿಲಿ ಇನ್ನೊಂದು ಕಡೆ ಒಣಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸಂಡಿಗೆ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಈ ಸಂಡಿಗೆ ಮಾಡಿ ಸವಿದು ನೋಡಿ. ಎಲ್ಲರಿಗೂ ಇದು ಇಷ್ಟವಾಗೋದು ಖಚಿತ.



Click it and Unblock the Notifications