Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಬೆಳಗ್ಗೆ ಟಿಫನ್ ಮಧ್ಯಾಹ್ನದ ಬಾಕ್ಸ್‌ಗೂ ಈ ಎರಡು ತಿಂಡಿ ಮಾಡಿ..! 10 ನಿಮಿಷ ಸಾಕು!
ನೀವು ಬೆಳಗ್ಗೆ ತಿಂಡಿಗಾಗಿ ಎಷ್ಟು ವಿಧವಾದ ಅಡುಗೆ ಮಾಡಿರುತ್ತೀರಿ. ಅದರಲ್ಲೂ ವಿಶೇಷವಾಗಿ ರೈಸ್‌ನಿಂದ ಮಾಡುವ ಹಲವು ಬಗೆಯ ಖಾದ್ಯ ಸವಿಯಲು ಇಷ್ಟಪಡುತ್ತೀರಿ. ಆದ್ರೆ ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ ಹೀಗೆ ಹಲವು ರೀತಿಯ ಖಾದ್ಯ ಮಾಡಿ ಸವಿದಿರುತ್ತೀರಿ. ಹಾಗೆ ನಾವಿಂದು ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಅನ್ನ ಬಳಸಿ ಮಾಡುವಂತಹ ಖಾದ್ಯಗಳ ಕುರಿತು ತಿಳಿಯೋಣ.
ಕೆಲವರು ಬೆಳಗ್ಗೆ ತಿಂಡಿಗೆ ಮಾಡುವ ಖಾದ್ಯವನ್ನು ಮಧ್ಯಾಹ್ನ ಬಾಕ್ಸ್‌ಗೂ ತೆಗೆದುಕೊಂಡು ಹೋಗಬೇಕಾಗುತ್ತದೆ. ಏಕೆಂದರೆ ಅವರು ಹೊರಗೆ ಕೆಲಸಕ್ಕೆ ಹೋಗಬಹುದು, ಇಲ್ಲವೆ ಮಕ್ಕಳಿಗೆ ಬಾಕ್ಸ್‌ಗೂ ಅವರು ವಿಶೇಷ ಖಾದ್ಯಗಳ ಮಾಡಬೇಕಾಗಿರುತ್ತದೆ. ಹೀಗಿರುವಾಗ ಬೆಳಗ್ಗೆಯ ಖಾದ್ಯವನ್ನೇ ಎರಡು ಬಾರಿ ಬಳಸಲು ಮುಂದಾಗುವುದು ಹೆಚ್ಚು.

ಅದರಲ್ಲೂ ಬೆಳಗ್ಗೆ ತಿಂಡಿ ಹಾಗೂ ಮದ್ಯಾಹ್ನದ ಊಟಕ್ಕೂ ಕೂಡ ಅದ್ಭುತ ರುಚಿ ನೀಡುವಂತಹ ಖಾದ್ಯಗಳನ್ನು ನಾವಿಂದು ಮಾಡುವುದು ಹೇಗೆ ಅನ್ನದನ್ನು ತಿಳಿದುಕೊಳ್ಳೋಣ. ಅದರಲ್ಲೂ ಕೇವಲ 10 ನಿಮಿಷದ ಸಮಯದಲ್ಲಿ ಈ ಎರಡು ಖಾದ್ಯಗಳ ಮಾಡಿ ಸವಿಯಬಹುದು. ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಇದು ಅದ್ಭುತ ರುಚಿ ನೀಡಲಿದೆ. ಹಾಗಾದ್ರೆ ಆ ಎರಡು ರೈಸ್ ಖಾದ್ಯ ಯಾವುದು? ಎಂಬುದನ್ನು ತಿಳಿಯೋಣ.
ಮಧ್ಯಾಹ್ನದ ಬಾಕ್ಸ್‌ಗೆ ಹಾಕಿಕೊಂಡು ಹೋಗಲು ಬೆಳಗ್ಗೆ ನೀವು ಪುದಿನಾ ರೈಸ್ ಮತ್ತು ಟೊಮೆಟೋ ರೈಸ್ ಎರಡು ಪದಾರ್ಥ ಮಾಡಬಹುದು, ಬಹಳ ಸುಲಭವಾಗಿ ಬಹಳ ರುಚಿಕರವಾಗ ಈ ಎರಡು ಖಾದ್ಯವನ್ನು ಮಾಡಿದ್ರೆ ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಊಟದ ಬಾಕ್ಸ್‌ಗೂ ಬಳಸಬಹುದು. ಇದನ್ನು ಮಾಡಲು ಕೇವಲ 10 ನಿಮಿಷ ಸಾಕಾಗುತ್ತದೆ.
ಹೀಗಾಗಿ ನಾವಿಂದು ಮೊದಲು ಪುದಿನ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪುದಿನ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪುದಿನ ಎಲೆಗಳು
- ಅನ್ನ
- ಜೀರಿಗೆ
- ಲವಂಗ
- ಹಸಿ ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಉಪ್ಪು
- ಎಣ್ಣೆ
- ತುಪ್ಪ
- ಚಕ್ಕೆ
- ಚಕ್ರಮೊಗ್ಗು
- ಏಲಕ್ಕಿ
- ಪಲಾವ್ ಎಲೆ
- ಈರುಳ್ಳಿ
ಪುದಿನ ರೈಸ್ ಮಾಡುವುದು ಹೇಗೆ?
ಮೊದಲು ಪುದಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಚಕ್ಕೆ, ಲವಂಗ, ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಉಪ್ಪು ಹಾಕಿಕೊಂಡು ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ.
ಬಿಸಿ ಆದ ಬಳಿಕ ಈಗ ಇದಕ್ಕೆ ಗೋಡಂಬಿ ಹಾಕಿಕೊಂಡು ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ನಂತರ ಮತ್ತೆ ಎರಡು ಸ್ಪೂನ್ ಎಣ್ಣೆ ಹಾಕಿ ಇದಕ್ಕೆ ಏಲಕ್ಕಿ, ಲವಂಗ, ಚಕ್ರಮೊಗ್ಗು, ಪಲಾವ್ ಎಲೆ ಹಾಕಿಕೊಂಡು ಬಿಸಿ ಮಾಡಿ, ನಂತರ ಇದಕ್ಕೆ ಜೀರಿಗೆ, ಈರುಳ್ಳಿಯನ್ನ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮೊದಲು ರುಬ್ಬಿಕೊಂಡಿರುವ ಪುದಿನ ಪೇಸ್ಟ್ ಅನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಮೊದಲೇ ಮಾಡಿಟ್ಟಿರುವ ಹುಡಿ ಹುಡಿಯಾದ ಅನ್ನವನ್ನು ಈ ಬಾಣಲೆಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಎಲ್ಲಾ ಮಸಾಲೆ ಚೆನ್ನಾಗಿ ಅನ್ನಕ್ಕೆ ಹಿಡಿಯುವಂತೆ ತಿರುಗಿಸುತ್ತಾ ಇರಿ. ಹಾಗೆ ಮೊದಲು ಹುರಿದುಕೊಂಡಿರುವ ಗೋಡಂಬಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಪುದಿನ ರೈಸ್ ರೆಡಿಯಾಗುತ್ತದೆ. ನೀವು ಕೂಡ ಈ ಪುದಿನ ರೈಸ್ ಮಾಡಿ ಸವಿಯಿರಿ. ಇದನ್ನು ಮಾಡಲು 10 ನಿಮಿಷವೂ ಬೇಕಾಗುವುದಿಲ್ಲ. ಹಾಗೆ ಬಾಕ್ಸ್‌ಗೆ ಹಾಕಿ ಕಳುಹಿಸಿದರೆ ಎಲ್ಲರಿಗೂ ಇಷ್ಟವಾಗುತ್ತೆ.
ಹತ್ತೇ ನಿಮಿಷದಲ್ಲಿ ಟೊಮೆಟೋ ರೈಸ್ ಮಾಡಿ
ಈ ಪುದಿನ ರೈಸ್ ಅಲ್ಲದೆ ಟೊಮೆಟೋ ರೈಸ್ ಕೂಡ ಬೆಳಗ್ಗೆ ತಿಂಡಿಗೆ ಹಾಗೂ ಮಧ್ಯಾಹ್ನದ ಬಾಕ್ಸ್‌ಗೆ ಸವಿಯಲು ಅದ್ಭುತ ರುಚಿ ನೀಡಲಿದೆ. ಬೆಳಗ್ಗೆ ಟೊಮೆಟೋ ರೈಸ್ ಮಾಡಿದ್ದನ್ನು ಬಾಕ್ಸ್‌ಗೆ ಹಾಕಿ ಮಧ್ಯಾಹ್ನವೂ ಸವಿಯಬಹುದು. ಟೊಮೆಟೋ ಹಾಗೂ ಮೊದಲೆ ಮಾಡಿಕೊಂಡಿರುವ ಅನ್ನವಿದ್ದರೆ 10 ನಿಮಿಷದ ಒಳಗೆ ಈ ಟೊಮೆಟೋ ರೈಸ್ ಮಾಡಬಹುದು. ಹಾಗಾದ್ರೆ ಈ ಟೊಮೆಟೋ ರೈಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಟೊಮೆಟೋ
- ಅನ್ನ
- ಈರುಳ್ಳಿ
- ಜೀರಿಗೆ
- ಪಾಲವ್ ಎಲೆ
- ಧನಿಯಾ ಪುಡಿ
- ಅರಶಿಣ
- ಖಾರದ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೆಡಲೆ ಬೇಳೆ
- ಉದ್ದಿನ ಬೇಳೆ
- ಸಾಸಿವೆ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಟೊಮೆಟೋ ರೈಸ್ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಕೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಬಿಸಿ ಮಾಡಿ ನಂತರ ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆ, ಸಾಸಿವೆ ಕೂಡ ಹಾಕಿ. ನಂತರ ಗೋಡಂಬಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಒಂದು ಈರುಳ್ಳಿಯನ್ನು ಇದಕ್ಕೆ ಹಾಕಿಕೊಂಡು ಹಾಗೆ ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಹಾಕಿಕೊಂಡು 4 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಹೀಗೆ ಬೇಯುವಾಗ ಉಪ್ಪು ಕೂಡ ಹಾಕಿಕೊಳ್ಳಿ. 5 ನಿಮಿಷದ ಬಳಿಕ ಅರಶಿಣ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷ ಪ್ರೈ ಮಾಡಿದ ಬಳಿಕ ಇದಕ್ಕೆ ಮೊದಲು ಮಾಡಿಟ್ಟಿರುವ ಅನ್ನವನ್ನು ಇದಕ್ಕೆ ಹಾಕಿಕೊಳ್ಳಬೇಕು. ರೈಸ್‌ಗೆ ಚೆನ್ನಾಗಿ ಮಸಾಲೆ ಅಂಶಗಳು ಹಿಡಿಯುವಂತೆ ತಿರುಗಿಸಿಕೊಳ್ಳುತ್ತಾ ಮಿಕ್ಸ್ ಮಾಡಿ. ಅನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಹಾಕಿ ಬಿಟ್ಟು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಟೊಮೆಟೋ ರೈಸ್ ರೆಡಿಯಾಗುತ್ತೆ. 10 ನಿಮಿಷದಲ್ಲಿ ಮಾಡಬಹುದು. ಬಾಕ್ಸ್‌ಗೆ ಹಾಕಿಕೊಂಡು ಮಧ್ಯಾಹ್ನದ ಸಮಯದಲ್ಲಿ ಸವಿಯಲು ಹೇಳಿ ಮಾಡಿಸಿದ ಖಾದ್ಯ.
ಇದರೊಟ್ಟಿಗೆ ಕಾಯಿ ಚಟ್ನಿ ಅಥವಾ ಮೊಸರು ಬಜ್ಜಿ ಇದ್ದರೆ ಎರಡೂ ಖಾದ್ಯಗಳ ರುಚಿ ದುಪ್ಪಟ್ಟಾಗುವುದು ಖಚಿತ. ಪುದಿನ ರೈಸ್ ಹಾಗು ಟೊಮೆಟೋ ರೈಸ್ ಅನ್ನು 10 ನಿಮಿಷದೊಳಗೆ ಮಾಡಿ ಮುಗಿಸಬಹುದು, ನೀವು ಗಡಿ ಬಿಡಿಯಲ್ಲಿ ಬೆಳಗ್ಗೆ ಹೊರಡುವಾಗ ಈ ರೀತಿಯ ಎರಡು ಖಾದ್ಯ ಮಾಡಿ ಸವಿಯಬಹುದು. ಹಾಗೆ ಮಧ್ಯಾಹ್ನದ ಬಾಕ್ಸ್‌ಗೆ ನೀವು ಬೇರೆ ತಿಂಡಿ ಮಾಡುವ ಬದಲಾಗಿ ಇದೊಂದೇ ತಿಂಡಿಯನ್ನು ಸವಿಯಬಹುದು. ಮಕ್ಕಳಿಗೂ ಇದು ಬಹಳ ಇಷ್ಟವಾಗಲಿದೆ.



Click it and Unblock the Notifications