Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಲ್ಲಿ ನೀರು ತರಿಸಲಿದೆ ಅಕ್ಕಿ ಪಾಯಸ: ನವರಾತ್ರಿಯ ಸ್ಪೆಷಲ್ ಸಿಹಿ!
ನವರಾತ್ರಿ ಹಬ್ಬ ಆರಂಭಗೊಂಡಿದೆ. ಎಲ್ಲರ ಮನೆಯಲ್ಲೂ ಕೊನೆಯ ದಿನವನ್ನಾದರು ಹಬ್ಬವಾಗಿ ಆಚರಿಸುತ್ತಾರೆ. ಹಾಗೆ ಈ ವಾರದಾದ್ಯಂತ ಸಿಹಿ ತಿನಿಸು ಮಾಡುವುದು ಕಾಮನ್. ಹಾಗೆ ದೇವಾಲಯ ಭೇಟಿ ನೀಡುವುದು ಪೂಜೆಗಳಲ್ಲಿ ಭಾಗಿಯಾಗುವುದು, ಮನೆಯಲ್ಲಿ ಪೂಜೆ ಮಾಡುವುದು ಇತ್ಯಾದಿ ಕಾರ್ಯವಂತು ನಡೆಯುತ್ತಲೇ ಇರಲಿದೆ.
ಹಾಗೆ ಈ ಹಬ್ಬದಲ್ಲಿ ಮನೆಯಲ್ಲಿ ಸಿಹಿ ಮಾಡಿ ಸವಿಯಬೇಕು ಎಂಬ ಬಯಕೆ ಇದ್ದರೆ ಪಾಯಸ ಮಾಡುವುದು ಸುಲಭ. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಈ ಪಾಯಸಗಳ ಮಾಡಿ ಮುಗಿಸಬಹುದು. ಅದ್ರಲ್ಲೂ ಸುಲಭವಾಗಿ ಅಕ್ಕಿಯನ್ನು ಬಳಸಿ ಮಾಡುವ ಅಕ್ಕಿ ಪಾಯಸ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಅಕ್ಕಿಯನ್ನು ಹಾಗೆ ಹಾಲು ಹಾಕಿ ಮಾಡುವ ಈ ಪಾಯಸ ನೆನೆದರೆ ಬಾಯಲ್ಲಿ ನೀರು ಬರಲಿದೆ. ನೀವು ಕೂಡ ಹಬ್ಬದಲ್ಲಿ ಈ ಪಾಯಸ ಮಾಡಿ ಮನೆ ಮಂದಿಗೆಲ್ಲಾ ಸವಿಯಲು ನೀಡಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಹಾಗೆ ಕಡಿಮೆ ಪದಾರ್ಥಗಳ ಬಳಸಿ ಮಾಡುವಂತಹ ರುಚಿ ರುಚಿಯಾದ ತಿಂಡಿ ಇದು ಎನ್ನಬಹುದು.
ಹಾಗಾದ್ರೆ ಈ ಅಕ್ಕಿ ಪಾಯಸ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಅಕ್ಕಿ ಪಾಯಸ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಡ್ರೈ ಫ್ರೂಟ್ಸ್ (ಗೋಡಂಬಿ, ದ್ರಾಕ್ಷಿ)
- ಹಾಲು
- ಸಕ್ಕರೆ
- ತುಪ್ಪ
- ಬಾದಾಮಿ ಪುಡಿ
- ಏಲಕ್ಕಿ ಪುಡಿ
ಅಕ್ಕಿ ಪಾಯಸ ಮಾಡುವ ಸುಲಭದ ವಿಧಾನವೇನು?
ಮೊದಲು ಪಾಯಸ ಮಾಡಲು ಅರ್ಧ ಕಪ್ ಅಕ್ಕಿ ತೆಗೆದುಕೊಳ್ಳಿ. ಈ ಅಕ್ಕಿಯನ್ನು ನೆನೆಸಿಟ್ಟುಕೊಳ್ಳಿ. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ಹಾಲು ಹಾಕಿಕೊಳ್ಳಿ. ಹಾಗೆ ಸ್ವಲ್ಪ ನೀರು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಈಗ ನೆನೆಸಿಟ್ಟ ಅಕ್ಕಿಯಲ್ಲಿ 4 ರಿಂದ 5 ಸ್ಪೂನ್ ಅಕ್ಕಿ ಹಾಕಿಕೊಂಡು ಮಿಕ್ಸ್ ಮಾಡಿ.
ನಂತರ ಅಕ್ಕಿಯನ್ನು 10 ನಿಮಿಷಗಳ ಕಾಲ ಬೇಯಲು ಬಿಡಿ. ಅಕ್ಕಿ ಬೆಂದು ಅನ್ನವಾಗಬೇಕು. ಹಾಗೆ ಬೇಯಿಸಿಕೊಳ್ಳಿ. ಮುಕ್ಕಾಲು ಭಾಗ ಅಕ್ಕಿ ಬೆಂದಾಗ ಇದಕ್ಕೆ ಮುಕ್ಕಾಲು ಕಪ್ ಬೆಲ್ಲ ಅಥವಾ ಸಕ್ಕರೆ ಹಾಕಿಕೊಳ್ಳಬಹುದು. ನಂತರ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಅಕ್ಕಿ ಮತ್ತೆ ಬೇಯಲು ಬಿಡಿ.
ಈಗ ಕುದಿಬರಲು ಬಿಟ್ಟು ಆಗಾಗ ಮಿಕ್ಸ್ ಮಾಡುತ್ತಾ ಇರಿ. ನೀರು ಅಥವಾ ಹಾಲಿನ ಅಂಶ ಹಾಗೆಯೆ ಇರಬೇಕು. ನಂತರ ಬಾದಾಮಿ ಪುಡಿಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ತುಪ್ಪದಲ್ಲಿ ಡ್ರೈ ಫ್ರೂಟ್ಸ್ಗಳ ಹುರಿದು ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಪಾಯಸ ರೆಡಿಯಾಗುತ್ತದೆ. ಈ ಅಕ್ಕಿ ಪಾಯಸ ಎಲ್ಲರಿಗೂ ಇಷ್ಟವಾಗುವ ಜೊತೆಗೆ ಎಲ್ಲರು ಸವಿಯಲು ಮುಂದಾಗುತ್ತಾರೆ.
ಹಬ್ಬದ ಸಮಯದಲ್ಲಿ ಯಾವುದಾದರು ಸಿಹಿ ಮಾಡುವ ಉದ್ದೇಶ ಇದ್ದೇ ಇರಲಿದೆ. ಈ ಸಮಯದಲ್ಲಿ ಪಾಯಸ ನಿಮ್ಮ ಬಾಯಿಗೆ ರುಚಿಯ ಮಜಾ ಹೆಚ್ಚಿಸಲಿದೆ.



Click it and Unblock the Notifications
