Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಅನ್ನದಿಂದ ಮಾಡಿ ಸಖತ್ ರುಚಿ ಪಾಯಸ..! ಹೇಗೆ ಮಾಡೋದು
ಹಬ್ಬದಲ್ಲಿ ಸಿಹಿ ಮಾಡಿ ಸವಿಯುವುದು ಸಾಮಾನ್ಯ ಆದ್ರೆ ಬಿಡುವಿನ ವೇಳೆಯಲ್ಲಿ ಅನ್ನದಿಂದ ಸಿಹಿಯಾದ ಪಾಯಸ ಮಾಡಬಹುದು. ಈ ರೀತಿಯ ಪಾಯಸ ತುಂಬಾನೆ ರುಚಿ ನೀಡಲಿದೆ. ಮತ್ತೊಂದೆಡೆ ಯಾವುದಾದ್ರು ಹಬ್ಬ ಇದ್ದರೆ ಈ ಸಿಹಿ ಮಾಡುವುದು ಉತ್ತಮ. ಏಕಂದ್ರೆ ಇದನ್ನು ಮಾಡುವುದು ತುಂಬಾನೆ ಸುಲಭ.
ಸಿಹಿ ತಿಂಡಿ ಇಲ್ಲದೆ ಯಾವ ಹಬ್ಬವೂ ಪೂರ್ತಿಯಾಗಲ್ಲ. ಆದ್ರೆ ನೀವು ಎಂದಾದರು ಅನ್ನದ ಪಾಯಸ ಮಾಡಿದ್ದೀರಾ? ಹೌದು ಅನ್ನದಿಂದ ಅತ್ಯಂತ ರುಚಿಕರ ಕೀರು ಅಥವಾ ಪಾಯಸ ಮಾಡಬಹುದು. ಈ ಕೀರನ್ನು ದೇವರ ಮುಂದೆ ನೈವೇದ್ಯ ಮಾಡಲು ಅರ್ಪಿಸುವುದರಿಂದ ಹಿಡಿದು ಹಬ್ಬದಲ್ಲಿ ಸಂಬಂಧಿಕರಿಗೆ ಸವಿಯಲು ನೀಡಬಹುದು.

ಯಾರು ಸಹ ಊಹಿಸದ ರೀತಿಯಲ್ಲಿ ಈ ಖಾದ್ಯ ಮಾಡಬಹುದು. ಮಾಡೋದು ಎಷ್ಟು ಸುಲಭವೋ ಅಷ್ಟೇ ರುಚಿಯೂ ಇರಲಿದೆ. ಹಾಗಾದ್ರೆ ಅನ್ನದಿಂದ ಕೀರು ಮಾಡುವುದು ಹೇಗೆ? ಈ ಕೀರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಅನ್ನ ಬಳಸಿ ಮಾಡುವ ಪಾಯಸಕ್ಕೆ ಎಷ್ಟು ಸಮಯ ಹಿಡಿಯಲಿದೆ. ರುಚಿ ಯಾವ ರೀತಿ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅನ್ನದಿಂದ ಪಾಯಸ ಮಾಡಲು ಬೇಕಾಗುವ ವಸ್ತುಗಳು
ಅಕ್ಕಿ - 1/2 ಕಪ್
ಹಾಲು - 500 ಮಿ.ಲಿ
ಗೋಡಂಬಿ- 10
ಸಕ್ಕರೆ ಅಥವಾ ಕಲ್ಲು ಸಕ್ಕರೆ - 1 ಕಪ್
ಪಲಾವ್ ಎಲೆ - 2
ಏಲಕ್ಕಿ- 4
ಒಣ ದ್ರಾಕ್ಷಿ - 2 ಚಮಚ
ಅನ್ನದ ಪಾಯಸ ಮಾಡುವುದು ಹೇಗೆ?
ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ 4 ಕಪ್ ನೀರು ಹಾಕಿ ಅದಕ್ಕೆ ನೆನೆಸಿಟ್ಟುರುವ ಬಾಸುಮತಿ ಅಕ್ಕಿ ಹಾಕಿ (ಬಾಸುಮತಿ ಅಕ್ಕಿ ಇಲ್ಲದಿದ್ದರೆ ನೀವು ಮನೆಯಲ್ಲಿ ನಿತ್ಯ ಅಡುಗೆಗೆ ಬಳಸುವ ಸಾಮಾನ್ಯ ಅಕ್ಕಿಯನ್ನೇ ಬಳಸಿಕೊಳ್ಳಬಹುದು) ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮುಚ್ಚಳ ಹಾಕಿ ಮೂರು ಸೀಟಿ ಹೊಡೆಯುವವರೆಗೆ ಬಿಡಿ.
ಇನ್ನೊಂದು ಕಡೆ ಏಲಕ್ಕಿ ಕುಟ್ಟಿ ಪುಡಿ ಮಾಡಿಕೊಳ್ಳಿ, ಇದರ ಜೊತೆಗೆ ಕಲ್ಲು ಸಕ್ಕರೆ ಇಲ್ಲವೆ ಸಾಮಾನ್ಯ ಬಳಕೆಯ ಸಕ್ಕರೆ ತೆತೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಿ (ಮಿಕ್ಸಿಯಲ್ಲಿಯೂ ಪುಡಿ ಮಾಡಿಕೊಳ್ಳಬಹುದು). ನೀವು ಅರ್ಧ ಕಪ್ ಅಕ್ಕಿ ತೆಗೆದುಕೊಂಡಿದ್ದರೆ ಅದೇ ಕಪ್‌ನಲ್ಲಿ 1 ಕಪ್ ಸಕ್ಕರೆ ತೆಗೆದುಕೊಳ್ಳಬೇಕು. ಅಳತೆ ಸರಿಯಾಗಿರಲಿ.
ಬಳಿಕ ಕುಕ್ಕರ್ ಮುಚ್ಚಳ ತೆಗೆದು ಅನ್ನವನ್ನು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. (ಮೊಸರು ಅನ್ನಕ್ಕೆ ಪುಡಿ ಮಾಡಿಕೊಳ್ಳುವಂತೆ ಹದವಾಗಿ ಪುಡಿ ಮಾಡಿಕೊಳ್ಳಿ) ನಂತರ ಇದಕ್ಕೆ ಕಾಯಿಸಿದ ಅರ್ಧ ಲೀಟರ್ ಹಾಲನ್ನು ಹಾಕಿ, ಇದಕ್ಕೆ ಪಲಾವ್ ಎಲೆಯನ್ನು ಸಹ ಹಾಕಿ. ಇದಕ್ಕೆ ನಂತರ ಪುಡಿ ಮಾಡಿಕೊಂಡಿರುವ ಏಲಕ್ಕಿ, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಗೋಡಂಬಿ, ದ್ರಾಕ್ಷಿಯನ್ನು ಹಾಕಿಕೊಂಡರಡ ಉತ್ತಮ.
ಈ ರೀತಿ ಮಿಶ್ರಣ ಮಾಡಿಕೊಂಡ ಬಳಿಕ ಕಡಿಮೆ ಉರಿಯಲ್ಲಿ ಒಲೆ ಹಚ್ಚಿಕೊಂಡು 10 ನಿಮಿಷದವರೆಗೂ ಕಾಯಿಸಿ. ಸ್ವಲ್ಪ ಕುದಿಬಂದರೆ ಸಾಕು. ಇದಾದ ಬಳಿಕ ಪಾಯಸದಿಂದ ಪಲಾವ್ ಎಲೆಗಳನ್ನು ತೆಗೆದುಹಾಕಿ. ಇಷ್ಟಾದರೆ ನಿಮ್ಮ ಮುಂದೆ ಅನ್ನದ ಕೀರು ರೆಡಿಯಾಗಿರುತ್ತೆ. ಇದಕ್ಕೆ ನೀವು ಕಲರ್ ಪುಡಿ ಬೇಕಾದರೆ ಹಾಕಬಹುದು. ಕೆಂಪು, ಇಲ್ಲವೆ ಅರಶಿಣ ಬಣ್ಣ ಹಾಕಿಯೂ ಮಾಡಬಹುದು.
ಹಳೆಯ ಅನ್ನ ಹಾಕಿಯೂ ಇದನ್ನು ಮಾಡಬಹುದು. ಆದರೆ ಹೆಚ್ಚು ಸಮಯ ಇಟ್ಟು ಸೇವಿಸಬೇಕು ಎನ್ನುವಂತಿದ್ದರೆ ಹೊಸ ಅಕ್ಕಿಯಿಂದ ಅನ್ನ ಮಾಡಿಕೊಂಡು ಪಾಯಸ ಮಾಡಿದರೆ ಹೆಚ್ಚು ಕಾಲ ಇಟ್ಟು ಸೇವಿಸಬಹುದು. ಇದು ಹಬ್ಬದ ಸಿಹಿ ತಿಂಡಿಯಾಗಿ ಮಾತ್ರವಲ್ಲ ದೇವರ ನೈವೇದ್ಯಕ್ಕೂ ಸಹ ಈ ಅನ್ನದ ಪಾಯಸ ಉತ್ತಮ ಆಯ್ಕೆ.



Click it and Unblock the Notifications