Latest Updates
-
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ?
ಅನ್ನ ಬಳಸಿ ಮಾಡಿ ಕೀರು..! ದೇವರ ನೈವೇದ್ಯಕ್ಕೂ, ಬಾಯಿ ರುಚಿಗೂ ಸೈ..!
ಹಬ್ಬ ಅಂದ್ರೆ ಅಲ್ಲಿ ತಿಂಡಿ ಇರಲೇಬೇಕು. ಸಿಹಿ ತಿಂಡಿ ಇಲ್ಲದೆ ಯಾವ ಹಬ್ಬವೂ ಪೂರ್ತಿಯಾಗಲ್ಲ. ಇನ್ನು ಕೆಲ ದಿನದಲ್ಲೇ ಯುಗಾದಿ ಬರುತ್ತಿದೆ. ಯುಗಾದಿ ಅಂದ್ರೆ ಅಲ್ಲಿ ಸಿಹಿ ತಿಂಡಿ ಇರಲೇಬೇಕು. ಯುಗಾದಿಗೆ ಒಂದು ಬಗೆಯ ಸಿಹಿ ಇಲ್ಲವೆ ಎರಡು ಮೂರು ವಿಧದ ಸಿಹಿ ತಿಂಡಿಗಳ ಮಾಡುತ್ತಾರೆ. ಅದರಲ್ಲಿ ಪಾಯಸ ಸಹ ಒಂದು.
ಪಾಯಸವನ್ನು ಹತ್ತಾರು ವಸ್ತುಗಳ ಬಳಸಿ ಮಾಡಬಹುದು. ಆದರೆ ನೀವು ಎಂದಾದರು ಅನ್ನದ ಪಾಯಸ ಮಾಡಿದ್ದೀರಾ? ಹೌದು ಅನ್ನದಿಂದ ಅತ್ಯಂತ ರುಚಿಕರ ಕೀರು ಅಥವಾ ಪಾಯಸ ಮಾಡಬಹುದು. ಈ ಕೀರನ್ನು ದೇವರ ಮುಂದೆ ನೈವೇದ್ಯ ಮಾಡಲು ಅರ್ಪಿಸುವುದರಿಂದ ಹಿಡಿದು ಹಬ್ಬದಲ್ಲಿ ಸಂಬಂಧಿಕರಿಗೆ ಸವಿಯಲು ನೀಡಬಹುದು.

ಯಾರು ಸಹ ಊಹಿಸದ ರೀತಿಯಲ್ಲಿ ಈ ಖಾದ್ಯ ಮಾಡಬಹುದು. ಮಾಡೋದು ಎಷ್ಟು ಸುಲಭವೋ ಅಷ್ಟೇ ರುಚಿಯೂ ಇರಲಿದೆ. ಹಾಗಾದ್ರೆ ಅನ್ನದಿಂದ ಕೀರು ಮಾಡುವುದು ಹೇಗೆ? ಈ ಕೀರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಅನ್ನ ಬಳಸಿ ಮಾಡುವ ಪಾಯಸಕ್ಕೆ ಎಷ್ಟು ಸಮಯ ಹಿಡಿಯಲಿದೆ. ರುಚಿ ಯಾವ ರೀತಿ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅನ್ನದ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ (30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಟ್ಟಿರುವುದು) - 1/2 ಕಪ್
- ಹಾಲು - 500 ಮಿ.ಲಿ
- ಸಕ್ಕರೆ ಅಥವಾ ಕಲ್ಲು ಸಕ್ಕರೆ - 1 ಕಪ್
- ಪಲಾವ್ ಎಲೆ - 2
- ಏಲಕ್ಕಿ- 4
- ಒಣ ದ್ರಾಕ್ಷಿ - 2 ಚಮಚ
- ಗೋಡಂಬಿ- 10
ಅನ್ನದ ಪಾಯಸ ಮಾಡುವುದು ಹೇಗೆ?
ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ 4 ಕಪ್ ನೀರು ಹಾಕಿ ಅದಕ್ಕೆ ನೆನೆಸಿಟ್ಟುರುವ ಬಾಸುಮತಿ ಅಕ್ಕಿ ಹಾಕಿ (ಬಾಸುಮತಿ ಅಕ್ಕಿ ಇಲ್ಲದಿದ್ದರೆ ನೀವು ಮನೆಯಲ್ಲಿ ನಿತ್ಯ ಅಡುಗೆಗೆ ಬಳಸುವ ಸಾಮಾನ್ಯ ಅಕ್ಕಿಯನ್ನೇ ಬಳಸಿಕೊಳ್ಳಬಹುದು) ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮುಚ್ಚಳ ಹಾಕಿ ಮೂರು ಸೀಟಿ ಹೊಡೆಯುವವರೆಗೆ ಬಿಡಿ.
ಇನ್ನೊಂದು ಕಡೆ ಏಲಕ್ಕಿ ಕುಟ್ಟಿ ಪುಡಿ ಮಾಡಿಕೊಳ್ಳಿ, ಇದರ ಜೊತೆಗೆ ಕಲ್ಲು ಸಕ್ಕರೆ ಇಲ್ಲವೆ ಸಾಮಾನ್ಯ ಬಳಕೆಯ ಸಕ್ಕರೆ ತೆತೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಿ (ಮಿಕ್ಸಿಯಲ್ಲಿಯೂ ಪುಡಿ ಮಾಡಿಕೊಳ್ಳಬಹುದು). ನೀವು ಅರ್ಧ ಕಪ್ ಅಕ್ಕಿ ತೆಗೆದುಕೊಂಡಿದ್ದರೆ ಅದೇ ಕಪ್ನಲ್ಲಿ 1 ಕಪ್ ಸಕ್ಕರೆ ತೆಗೆದುಕೊಳ್ಳಬೇಕು. ಅಳತೆ ಸರಿಯಾಗಿರಲಿ.
ಬಳಿಕ ಕುಕ್ಕರ್ ಮುಚ್ಚಳ ತೆಗೆದು ಅನ್ನವನ್ನು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. (ಮೊಸರು ಅನ್ನಕ್ಕೆ ಪುಡಿ ಮಾಡಿಕೊಳ್ಳುವಂತೆ ಹದವಾಗಿ ಪುಡಿ ಮಾಡಿಕೊಳ್ಳಿ) ನಂತರ ಇದಕ್ಕೆ ಕಾಯಿಸಿದ ಅಥವಾ ಹಸಿಯಾದ ಅರ್ಧ ಲೀಟರ್ ಹಾಲನ್ನು ಹಾಕಿ, ಇದಕ್ಕೆ ಪಲಾವ್ ಎಲೆಯನ್ನು ಸಹ ಹಾಕಿ. ಇದಕ್ಕೆ ನಂತರ ಪುಡಿ ಮಾಡಿಕೊಂಡಿರುವ ಏಲಕ್ಕಿ, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಗೋಡಂಬಿ, ದ್ರಾಕ್ಷಿಯನ್ನು ಹಾಕಿ.
ಈ ರೀತಿ ಮಿಶ್ರಣ ಮಾಡಿಕೊಂಡ ಬಳಿಕ ಕಡಿಮೆ ಉರಿಯಲ್ಲಿ ಒಲೆ ಹಚ್ಚಿಕೊಂಡು 10 ನಿಮಿಷದವರೆಗೂ ಕಾಯಿಸಿ. ಸ್ವಲ್ಪ ಕುದಿಬಂದರೆ ಸಾಕು. ಇದಾದ ಬಳಿಕ ಪಾಯಸದಿಂದ ಪಲಾವ್ ಎಲೆಗಳನ್ನು ತೆಗೆದುಹಾಕಿ. ಇಷ್ಟಾದರೆ ನಿಮ್ಮ ಮುಂದೆ ಅನ್ನದ ಕೀರು ರೆಡಿಯಾಗಿರುತ್ತೆ. ಇದಕ್ಕೆ ನೀವು ಕಲರ್ ಪುಡಿ ಬೇಕಾದರೆ ಹಾಕಬಹುದು. ಕೆಂಪು, ಇಲ್ಲವೆ ಅರಶಿಣ ಬಣ್ಣ ಹಾಕಿಯೂ ಮಾಡಬಹುದು.
ಗಮನಿಸಿ: ಹಳೆಯ ಅನ್ನ ಹಾಕಿಯೂ ಇದನ್ನು ಮಾಡಬಹುದು. ಆದರೆ ಹೆಚ್ಚು ಸಮಯ ಇಟ್ಟು ಸೇವಿಸಬೇಕು ಎನ್ನುವಂತಿದ್ದರೆ ಹೊಸ ಅಕ್ಕಿಯಿಂದ ಅನ್ನ ಮಾಡಿಕೊಂಡು ಪಾಯಸ ಮಾಡಿದರೆ ಹೆಚ್ಚು ಕಾಲ ಇಟ್ಟು ಸೇವಿಸಬಹುದು. ದೇವರ ನೈವೇದ್ಯಕ್ಕೆ ಹೇಳಿ ಮಾಡಿಸಿದ ಪದಾರ್ಥ ಇದಾಗಿದೆ.



Click it and Unblock the Notifications
