Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಶಿವನಿಗೆ ಪ್ರಿಯವಾದ ಅಕ್ಕಿ ಖೀರ್ ಮಾಡಿ: ಹಬ್ಬದ ಸಂಭ್ರಮ ಹೆಚ್ಚಿಸುವ ಸಿಹಿ!
ಶಿವರಾತ್ರಿ ಹಬ್ಬದಲ್ಲಿ ಶಿವನಿಗೆ ಪ್ರಿಯವಾದ ತಿನಿಸುಗಳ ಮಾಡುವುದು ಸಾಮಾನ್ಯ. ಶಿವನ ಪೂಜೆಯ ಸಮಯದಲ್ಲಿ ಸರಳವಾಗಿ ಮಾಡುವ ಸಿಹಿ ತಿಂಡಿಗಳು ಎಲ್ಲರು ಮಾಡಲು ಬಯಸುತ್ತಾರೆ. ಬಹಳಷ್ಟು ಮಂದಿ ಈ ದಿನದಂದು ವಿಶೇಷ ಸಿಹಿ ತಿಂಡಿಗಳ ಮಾಡಿ ಶಿವನ ಪೂಜೆಯಲ್ಲಿ ಇಟ್ಟು ಬಳಿಕ ಸೇವಿಸುವುದು ನೋಡಿರಬಹುದು. ಇದರಿಂದ ಶಿವನ ಆಶೀರ್ವಾದ ಪಡೆಯಬಹುದು.
ಹಾಗೆ ಶಿವನ ಆಶೀರ್ವಾದ ಪಡೆಯಲು ಈ ದಿನ ವಿಶೇಷ ಪೂಜೆ ಮಾಡುವುದು ಸಹ ನಾವು ನೋಡಿರುತ್ತೇವೆ. ಆದ್ರೆ ಇಲ್ಲಿ ಶಿವನಿಗೆ ಪ್ರಿಯವಾದ ಪ್ರಸಾದವನ್ನು ಮಾಡುವ ಕುರಿತು ತಿಳಿಯೋಣ. ಶಿವನಿಗೆ ಪ್ರಿಯವಾದ ಹಲವು ವಸ್ತುಗಳಲ್ಲಿ ಈ ಖಾದ್ಯವೂ ಒಂದಾಗಿದೆ. ಹಬ್ಬದ ದಿನ ಈ ರೆಸಿಪಿ ಮಾಡಿ ಸವಿದರೆ ಮನೆಯ ಎಲ್ಲಾ ಸದಸ್ಯರಿಗೂ ಇಷ್ಟವಾಗೋದು ಖಚಿತ.

ಹಾಗೆ ಈ ಅಕ್ಕಿಯಿಂದ ಮಾಡುವ ಪಾಯಸ ಅಥವಾ ಖೀರ್ ಕೂಡ ಎಲ್ಲರ ಬಾಯಲ್ಲೂ ನೀರು ತರಿಸಲಿದೆ. ಈ ಅಕ್ಕಿ ಖೀರ್ ಸವಿಯಲು ಬಹಳ ರುಚಿ ನೀಡಲಿದೆ. ಅದ್ರಲ್ಲೂ ಹಬ್ಬದ ಸಮಯದಲ್ಲಿ ಈ ಸಿಹಿಯನ್ನು ಮಾಡಿ ಸವಿಯೋದನ್ನು ಮರೆಯಬೇಡಿ. ಹಾಗಾದ್ರೆ ಶಿವರಾತ್ರಿಯ ಈ ಸಮಯದಲ್ಲಿ ರುಚಿ ರುಚಿಯ ಅಕ್ಕಿ ಖೀರ್ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ.
ಅಕ್ಕಿಯ ಖೀರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಕ್ಕಿ ಖೀರ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಹಾಲು
- ಸಕ್ಕರೆ
- ಬಾದಾಮಿ
- ದ್ರಾಕ್ಷಿ
- ಗೋಡಂಬಿ
- ತುಪ್ಪ
- ಬೆಲ್ಲ
- ಕೇಸರಿ
ಅಕ್ಕಿ ಖೀರ್ ಮಾಡುವ ವಿಧಾನವೇನು?
ಮೊದಲು ಸಣ್ಣ ಕಪ್ನಲ್ಲಿ ಕಡಲೆ ಬೇಳೆ ತೆಗೆದುಕೊಂಡು ತೊಳೆದು ಒಂದು ಪಾತ್ರೆಗೆ ಹಾಕಿ ನೀರು ಹಾಕಿ ಬೇಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಈಗ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಫ್ರೈ ಮಾಡಿಕೊಂಡು ತೆಗೆದು ಒಂದು ಬೌಲ್ಗೆ ಹಾಕಿಡಿ. ಈಗ 1 ಕಪ್ ಅಕ್ಕಿಯನ್ನು ನೀರಿನಲ್ಲಿ ತೊಳೆದು ಬಳಿಕ ತುಪ್ಪ ಹಾಕಿದ್ದ ಬಾಣಲೆಗೆ ಹಾಕಿ ಫ್ರೈ ಮಾಡಿಕೊಳ್ಳಿ.
ಅಕ್ಕಿ ಚೆನ್ನಾಗಿ ಗರಿ ಗರಿಯಾಗಬೇಕು. ನಂತರ ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ಅನಂತರ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಹೀಗೆ ಅಕ್ಕಿ ಹಿಟ್ಟನ್ನು ತೆಗೆದು ಬೌಲ್ಗೆ ಹಾಕಿಡಿ. ಇನ್ನೊಂದು ಕಡೆ ಬಾಣಲೆಗೆ ಕಡಲೆ ಬೀಜ ಹಾಕಿ ಹುರಿದುಕೊಂಡು ಅದನ್ನು ಕೂಡ ಮಿಕ್ಸಿ ಜಾರ್ಗೆ ಹಾಕಿ 2 ಸುತ್ತು ಗರಿ ಗರಿಯಾಗಿ ರುಬ್ಬಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಬೆಂದಿರುವ ಬೇಳೆಗೆ ಪುಡಿ ಮಾಡಿಕೊಂಡಿದ್ದ ಅಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಅರ್ಧ ಲೀಟರ್ ಕಾಯಿಸಿದ ಹಾಲನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಿ. ಈಗ ಇದಕ್ಕೆ 1 ಕಪ್ ಬೆಲ್ಲವನ್ನು ಪುಡಿ ಮಾಡಿಕೊಂಡು ಹಾಕಿ ಮಿಶ್ರಣ ಮಾಡಿ. ಏಲಕ್ಕಿ ಪುಡಿ ಹಾಗೆ ಮೊದಲು ಪುಡಿ ಮಾಡಿಕೊಂಡಿದ್ದ ಕಡಲೆ ಬೀಜದ ಪುಡಿ ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿ.
2 ರಿಂದ 3 ನಿಮಿಷ ಕುದಿಸಿಕೊಂಡ ಬಳಿಕ ಒಲೆ ಆಫ್ ಮಾಡಿಕೊಂಡು ಮೊದಲು ಹುರಿದುಕೊಂಡಿದ್ದ ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಮನೆಯಲ್ಲಿ ಕೇಸರಿ ಇದ್ದರೂ ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿ ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಅಕ್ಕಿ ಖೀರ್ ಸಿದ್ದವಾಗುತ್ತೆ.



Click it and Unblock the Notifications