Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಪಾತಿಯಂತೆ ಮೃದುವಾದ ಅಕ್ಕಿ ರೊಟ್ಟಿ ಮಾಡಿ..! ಎಷ್ಟು ಸುಲಭ ಗೊತ್ತಾ?
ರೊಟ್ಟಿ ಹಲವು ಮನೆಯ ಬೆಳಗಿನ ತಿಂಡಿ. ರೊಟ್ಟಿಯನ್ನ ಹತ್ತಾರು ವಿಧದಲ್ಲಿ ಮಾಡೋದು ನಾವು ನೋಡಿರುತ್ತೇವೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಇದನ್ನು ಬಿಟ್ಟರೆ ರಾಗಿ ರೊಟ್ಟಿ, ಅಕ್ಕಿ ರೊಟ್ಟಿಯೂ ಸಹ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದ ಖಾದ್ಯ. ಅಕ್ಕಿ ರೊಟ್ಟಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಇಂದಿಗೂ ನಾವು ನೋಡಬಹುದು. ಆದ್ರೆ ಇದನ್ನು ಮಾಡುವ ವಿಧಾನ ಮಾತ್ರ ಸ್ವಲ್ಪ ಬದಲಾಗಿದೆ.
ಹಿಂದೆಲ್ಲಾ ಅಕ್ಕಿ ರೊಟ್ಟಿ ಮಾಡಿ ಅದಕ್ಕೆ ಬೆಣ್ಣೆ ಹಾಕಿಕೊಂಡು ಸವಿಯುತ್ತಿದ್ದ ದಿನಗಳು ನಿಮಗೆ ನೆನಪಿರಬಹುದು. ಅಕ್ಕಿ ರೊಟ್ಟಿ ಒಂದು ಕಾಲದ ಫೇಮಸ್ ಖಾದ್ಯವೂ ಹೌದು. ಆದ್ರೆ ಈಗ ಈ ಅಕ್ಕಿ ರೊಟ್ಟಿ ಮಾಡುವವರೆ ಇಲ್ಲದಂತಾಗಿದೆ. ಏಕೆಂದರೆ ಅಕ್ಕಿ ರೊಟ್ಟಿ ಮಾಡಲು ಸಮಯ ಹೆಚ್ಚಿಗೆ ಬೇಕಾಗುತ್ತದೆ ಎಂಬುದು ಎಲ್ಲರ ದೂರಾಗಿರುತ್ತೆ. ಆದ್ರೆ ಅದರ ರುಚಿ ನೋಡಿದವರು ಸಮಯ ಹಿಡಿದರು ಪರವಾಗಿಲ್ಲ ಎಂದು ಮಾಡಿಯೇ ಮಾಡುತ್ತಾರೆ.

ಹಾಗಾದ್ರೆ ನಾವಿಂದು ಸಹ ಈ ಅಕ್ಕಿ ರೊಟ್ಟಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಅದ್ರಲ್ಲೂ ಸುಲಭವಾಗಿ, ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಮಾಡೋದು ಹೇಗೆ ಎಂಬುದನ್ನು ನೋಡೋಣ. ಈ ಅಕ್ಕಿ ರೊಟ್ಟಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಹಿಟ್ಟು - 2 ಕಪ್
- ಅನ್ನ- 1 ಕಪ್
- ಎಣ್ಣೆ
- ನೀರು
- ಉಪ್ಪು
ಅಕ್ಕಿ ರೊಟ್ಟಿ ಮಾಡುವುದು ಹೇಗೆ?
ಒಂದು ಪಾತ್ರೆಯಲ್ಲಿ 5 ಗ್ಲಾಸ್ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಇದಕ್ಕೆ 1 ಕಪ್ ಅನ್ನವನ್ನ ಹಾಕಿಕೊಂಡು ಕುದಿಯಲು ಬಿಡಿ. ಬಳಿಕ ಇದಕ್ಕೆ 2 ಕಪ್ ಅಕ್ಕಿ ಹಿಟ್ಟು ಹಾಕಿ, ಅಲ್ಲದೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಬಿಸಿ ಬಿಸಿಯಾಗಿರುವಾಗ ಹಿಟ್ಟನ್ನು ಹದ ಮಾಡಿಕೊಳ್ಳಿ.
ಚಪಾತಿಗೆ ಹಿಟ್ಟು ಮಾಡಿಕೊಳ್ಳುವಂತೆಯೇ ಈ ಹಿಟ್ಟನ್ನು ಸಹ ಮಾಡಿಕೊಳ್ಳಬೇಕು, ಸ್ವಲ್ಪ ಸ್ವಲ್ಪ ಒಣ ಹಿಟ್ಟು ಹಾಗು ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ರೆಡಿ ಮಾಡಿಕೊಳ್ಳಿ. ಹಿಟ್ಟು ನುಣ್ಣಗೆ ಬರಬೇಕು. ಹೀಗೆ ಬಂದಾಗ ಚಪಾತಿಯಂತೆ ಅಕ್ಕಿ ರೊಟ್ಟಿ ಬರಲಿದೆ. ಈ ರೀತಿ ನುಣ್ಣಗಾಗುವಂತೆ ಹಿಟ್ಟು ರೆಡಿ ಮಾಡಿಕೊಳ್ಳಿ. ಕೈಗೆ ಸ್ವಲ್ಪವೂ ಅಂಟಿಕೊಳ್ಳಬಾರದು.
ಹಿಟ್ಟು ಮಾಡಿಕೊಂಡ ಬಳಿಕ ಈಗ ಕೈಗೆ ಎಣ್ಣೆ ಹಚ್ಚಿಕೊಂಡು ಉಂಡೆ ಕಟ್ಟಿಕೊಳ್ಳಿ. ಕಡಬು ಮಾಡಿದಂತೆ ಉಂಡೆ ಮಾಡುತ್ತಾ ಹೋಗಿ. ಬಳಿಕ ಒಂದು ಪ್ಲಾಸ್ಟಿಕ್ ಇಟ್ಟು ಅದಕ್ಕೆ ನೀರು ಅಥವಾ ಎಣ್ಣೆ ಸವರಿಕೊಂಡು ಅದರ ಮೇಲೆ ಉಂಡೆ ಇಟ್ಟುಕೊಂಡು ರೊಟ್ಟು ತಟ್ಟಿಕೊಳ್ಳಬಹುದು. ಇಲ್ಲವೆ ಉಂಡೆಯ ಮೇಲೆ ಮತ್ತೊಂದು ಪ್ಲಾಸ್ಟಿಕ್ ಇಟ್ಟು ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಬಹುದು. ತೆಳುವಾಗಿ ಮಾಡಿಕೊಳ್ಳಬೇಕು ಎಂದೇನಿಲ್ಲ. ದಪ್ಪವಿದ್ದರೂ ಏನು ಆಗುವುದಿಲ್ಲ.
ಹೀಗೆ ಮಾಡಿದ ಬಳಿಕ ಕಾವಲಿಯ ಮೇಲೆ ಹಾಕಬೇಕು. ಕಾವಲಿಗೆ ಎಣ್ಣೆ ಹಾಕುವುದು ಬೇಡ. ಹಾಗೆಯೇ ಕಾವಲಿ ಮೇಲೆ ಹಾಕಿ ಎರಡು ಕಡೆ ಬೇಯಿಸಿಕೊಳ್ಳಿ. ಇಷ್ಟಾದರೆ ಮೃದುವಾಗ ಅಕ್ಕಿ ರೊಟ್ಟಿ ತಯಾರಾಗುತ್ತದೆ. ಹಿಟ್ಟು ಸರಿಯಾಗಿ ಮಾಡಿದರೆ ಈ ಅಕ್ಕಿ ರೊಟ್ಟಿ ಕೂಡ ಚಪಾತಿಯಂತೆ ಉಬ್ಬಿ ಬರುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿ ಮಾಡಿ ನೋಡಿ.



Click it and Unblock the Notifications
