Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಕ್ಕಿ ಹಿಟ್ಟಿನಿಂದ ಮಾಡಿ ಬೊಂಬಾಟ್ ರುಚಿಯ ಪೇಡ..! ಈ 3 ವಸ್ತು ಇದ್ದರೆ ಸಾಕು..!
ಸಿಹಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಕ್ಕಳಿಗಂತು ಸಿಹಿ ತಿಂಡಿ ಅಂದ್ರೆ ಪಂಚಪ್ರಾಣ. ನಾವು ಮನೆಯಲ್ಲಿ ಹತ್ತು ಹಲವು ಬಗೆಯ ಸ್ವೀಟ್ ಮಾಡಿರುತ್ತೇವೆ. ಮಕ್ಕಳಿಗೆ, ಮನೆಯವರಿಗೆಲ್ಲ ಇಷ್ಟವಾಗಲಿ ಎಂದು ಬಗೆ ಬಗೆಯ ತಿಂಡಿ ಮಾಡಿ ಸವಿಯುವುದು ಸಾಮಾನ್ಯ. ಅದರಲ್ಲು ಕೆಲವೊಂದು ತಿಂಡಿ ಯಾವಾಗಲು ಮಾಡಿ ಸವಿಯುತ್ತಿರುತ್ತೇವೆ.
ಅದರಲ್ಲಿ ಪೇಡವು ಸಹ ಒಂದು. ಪೇಡ ಎಲ್ಲರು ಇಷ್ಟಪಡುವ ಸಿಹಿ ತಿಂಡಿ. ಪೇಡವನ್ನ ಹಲವು ರೀತಿಯಲ್ಲಿ ಮಾಡಬಹುದು. ಹಾಗೆ ನಮ್ಮ ಧಾರವಾಡ ಪೇಡ ಯಾರಿಗೆ ಇಷ್ಟವಿಲ್ಲ ಹೇಳಿ. ಧಾರವಾಡ ಪೇಡ ವಿಶ್ವದ ಮೂಲೆ ಮೂಲೆಯಲ್ಲೂ ಈಗ ಫೇಮಸ್, ಕರ್ನಾಟಕದ ಈ ಸಿಹಿ ತಿಂಡಿ ಎಲ್ಲರು ಇಷ್ಟಪಟ್ಟು ಸವಿಯುವ ಸಿಹಿ ತಿಂಡಿ.

ಆದ್ರೆ ನಾವಿಂದು ಮನೆಯಲ್ಲಿಯೇ ಅತ್ಯಂತ ರುಚಿಕರವಾಗಿ ಮಾಡಬಹುದಾದ ಒಂದು ಬಗೆಯ ಪೇಡವನ್ನು ನೋಡೋಣ. ಕೆಲವೇ ವಸ್ತುಗಳ ಬಳಸಿ ಕೆ.ಜಿ ಅಷ್ಟು ಅಕ್ಕಿ ಹಿಟ್ಟಿನ ಪೇಡ ಮಾಡಬಹುದು. ಹಾಗಾದ್ರೆ ರುಚಿ ರುಚಿಯ ಪೇಡ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಈ ಪೇಡ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನೋಡೋಣ.
ಅಕ್ಕಿ ಹಿಟ್ಟಿನ ಪೇಡ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು - 2 ಬೌಲ್
- ಹಾಲು - 4 ಕಪ್
- ಸಕ್ಕರೆ - 2 ಕಪ್
- ತುಪ್ಪ
- ಏಲಕ್ಕಿ ಪುಡಿ
ಅಕ್ಕಿ ಹಿಟ್ಟಿನ ಪೇಡ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಅಕ್ಕಿ ಹಿಟ್ಟು ಹಾಕಿಕೊಂಡು ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ಹುರಿದಾಗ ಅದರಿಂದ ಸಣ್ಣ ಸುವಾಸನೆ ಬರುತ್ತದೆ. 5 ನಿಮಷ ಹುರಿದುಕೊಂಡರೆ ಸಾಕಾಗುತ್ತದೆ. ಬಳಿಕ ಒಲೆ ಆಫ್ ಮಾಡಿಕೊಳ್ಳಿ. ನಂತರ ಹಿಟ್ಟನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ನೀವು ಯಾವ ಕಪ್ನಲ್ಲಿ ಅಕ್ಕಿ ಹಿಟ್ಟು ತೆಗೆದುಕೊಂಡಿದ್ದೀರೋ ಆ ಕಪ್ನಲ್ಲಿ 4 ಕಪ್ ಹಾಲು ತೆಗೆದುಕೊಳ್ಳಿ. ಒಂದು ಪಾತ್ರೆ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಹಾಲು ಕಾಯಲು ಬಿಡಿ. ಇದಕ್ಕೆ ಅದೇ ಅಳತೆಯಲ್ಲಿ 1 ಕಪ್ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಹಾಗೆ ಒಂದು ಸ್ಪೂನ್ ತುಪ್ಪ ಸಹ ಹಾಕಿ ಕಲಸಿಕೊಳ್ಳಿ. ಸಕ್ಕರೆ ಕರಗುವಷ್ಟು ಕಲಸಿಕೊಳ್ಳಬೇಕು. ಇದಕ್ಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಇದಕ್ಕೆ ಹುರಿದುಕೊಂಡಿರುವ ಅಕ್ಕಿ ಹಿಟ್ಟನ್ನು ನಿಧಾನವಾಗಿ ಸೇರಿಸುತ್ತಾ ಕಲಸಿಕೊಳ್ಳುತ್ತಾ ಇರಿ. ಗಟ್ಟಿಯಾದರೆ ಹಾಲು ಹಾಕಿಕೊಳ್ಳಿ. ಈ ಹಿಟ್ಟು ಗಂಟು ಗಂಟಾಗಿ ಉಳಿಯಬಾರದು, ಕೇಸರಿಬಾತಿನ ಹದದಂತೆ ಹಿಟ್ಟು ಬರುತ್ತದೆ. ಈ ವೇಳೆ ಅರ್ಧ ಚಮಚ ತುಪ್ಪ ಹಾಕಿಕೊಂಡು ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಗ್ಯಾಸ್ ಆಫ್ ಮಾಡಿಕೊಳ್ಳಿ. ಬಳಿಕ ಹಿಟ್ಟು ತಣ್ಣಗಾಗಲು ಬಿಡಿ.
ಈಗ ಹಿಟ್ಟು ಬೆಚ್ಚ ಬೆಚ್ಚಗಿರುವಾಗ ಕೈಗೆ ತುಪ್ಪ ಹಚ್ಚಿಕೊಂಡು ಸ್ವಲ್ಪ ಹಿಟ್ಟು ತೆಗೆದುಕೊಂಡು ಕೈಯಲ್ಲಿ ಒತ್ತಿಕೊಳ್ಳಿ, ನಿಮಗೆ ಯಾವ ಗಾತ್ರಕ್ಕೆ ಬೇಕೋ ಯಾವ ಆಕಾರಕ್ಕೆ ಬೇಕಾದರು ಮಾಡಿಕೊಳ್ಳಿ. ಎಲ್ಲಾ ಹಿಟ್ಟು ಹೀಗೆ ಮಾಡಿಟ್ಟುಕೊಳ್ಳಿ.
ಈಗ ಒಂದು ಕಪ್ ಸಕ್ಕರೆಯನ್ನು ಮಿಕ್ಸರ್ಗೆ ಹಾಕಿ ಒಂದು ಸುತ್ತು ಬರಿಸಿ ಆಫ್ ಮಾಡಿಕೊಳ್ಳಿ. ಈ ಸಕ್ಕರೆ ಪುಡಿಯನ್ನು ಮಾಡಿರುವ ಎಲ್ಲಾ ಪೇಡಗಳ ಮೇಲೆ ಹಾಕಿಕೊಳ್ಳಿ. ಇಲ್ಲವೆ ಪೇಡವನ್ನು ಸಕ್ಕರೆ ಪುಡಿಯಲ್ಲಿ ಉರುಳಿಸಿದರೆ ನಿಮ್ಮ ಮುಂದೆ ಅಕ್ಕಿ ಹಿಟ್ಟಿನ ಪೇಡ ಸಿದ್ಧವಾಗುತ್ತದೆ. ನೀವು ಸಹ ಮನೆಯಲ್ಲಿ ಈ ಸಿಹಿ ತಿಂಡಿ ಮಾಡಿ ನೋಡಿ.



Click it and Unblock the Notifications
