Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
ನಾವು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ವೈವಿಧ್ಯಮಯ ಅಡುಗೆಗಳ ನೋಡಬಹುದು. ನಮ್ಮ ರಾಜ್ಯದಲ್ಲೇ ಒಂದು ಭಾಗದಲ್ಲಿ ಒಂದು ವಿಧವಾದ ಅಡುಗೆ ನೋಡಲು ಸಿಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಭಾಗದ ಅಡುಗೆ ಶೈಲಿಯೇ ವಿಭಿನ್ನವಾಗಿರುತ್ತದೆ.
ಇನ್ನು ನಿಮಗೆ ಅಕ್ಕಿ ಹಿಟ್ಟಿನ ಕಡುಬು ನೋಡಬೇಕೆಂದರೆ ಮಲೆನಾಡು ಭಾಗ ಇಲ್ಲವೆ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಕಾಣಲು ಸಿಗುತ್ತದೆ. ಆದರೆ ಎರಡೂ ಕಡೆಗಳಲ್ಲಿ ಈ ಅಕ್ಕಿ ಹಿಟ್ಟಿನ ಕಡುಬು ಮಾಡುವ ವಿಧಾನ ಮಾತ್ರ ಬೇರೆಯದ್ದೇ ಆಗಿದೆ. ಮಲೆನಾಡು ಭಾಗದಲ್ಲಿ ಅಕ್ಕಿ ಹಿಟ್ಟು ಹಾಗೂ ಅನ್ನವನ್ನೂ ಬಳಸಿ ಈ ಕಡುಬು ಮಾಡುತ್ತಾರೆ. ಕಡುಬು ಮಾಡುವುದು ತುಂಬ ಸುಲಭ ಹಾಗೂ ಎಲ್ಲಾ ಖಾದ್ಯಗಳು ಇದಕ್ಕೆ ರುಚಿಸುತ್ತದೆ.

ಕಡುಬು ಮಲೆನಾಡಲ್ಲಿ ಸಾಮಾನ್ಯ ನಿತ್ಯವೂ ಕಾಣಸಿಗುವ ಬೆಳಗ್ಗಿನ ತಿಂಡಿಯಾಗಿದೆ. ವಾರದಲ್ಲಿ ಕನಿಷ್ಠ ಮೂರು ಬಾರಿಯಾದರು ಕಡುಬು ಬೇಯುತ್ತದೆ. ಹಾಗಾದ್ರೆ ನಾವಿಂದು ಮೃದುವಾದ ಕಡುಬು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಕಡುಬು ಮಾಡುವ ವಿಧಾನವೇನು, ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕಡುಬು ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ ಹಿಟ್ಟು- 2 ಕಪ್
- ಅನ್ನ - ಅರ್ಧ ಕಪ್
- ನೀರು
- ಉಪ್ಪು
ಕಡುಬು ಮಾಡುವ ವಿಧಾನವೇನು?
ಮೊದಲು ಕಡುಬು ಮಾಡಲು ಸರಿಯಾದ ಅಕ್ಕಿ ಹಿಟ್ಟಿನ ಅಗತ್ಯವಿದೆ. ಅಂಗಡಿಯಲ್ಲಿ ಸಿಗುವ ಅಕ್ಕಿ ಹಿಟ್ಟು ತೀರಾ ನುಣುಪಾಗಿರುತ್ತದೆ ಹೀಗಾಗಿ ಇದರಲ್ಲಿ ಕಡುಬು ಮಾಡಿದರೆ ಸ್ವಲ್ಪ ಮೆತ್ತನೆಯ ಅನುಭವವಾಗುತ್ತದೆ. ಆದರೆ ಕಡುಬು ಮಾಡಲು ಒಪ್ಪಿಟ್ಟಿಗೆ ಬಳಸುವ ದೊಡ್ಡ ರವೆ ಗಾತ್ರದ ಹಿಟ್ಟು ಇದ್ದರೆ ಉತ್ತಮ.
ನೀವೇ ಮನೆಯಲ್ಲಿ ಅಕ್ಕಿಯನ್ನು ತೆಗೆದುಕೊಂಡು ತೊಳೆದು ಒಣಗಿಸಿ ಮಿಕ್ಸಿಗೆ ಹಾಕಿ ಹಿಟ್ಟು ರುಬ್ಬಿಕೊಳ್ಳಬಹುದು. ಇಲ್ಲವೇ ಕಡುಬು ಮಾಡಲೆಂದೆ ಹಿಟ್ಟು ಮಾಡಿಸಿಕೊಂಡು ಬರಬೇಕು.
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅಳತೆ ಪ್ರಕಾರ 4 ಕಪ್ ನೀರು ಹಾಕಿಕೊಳ್ಳಿ. ಈ ನೀರು ಕುದಿಯಲು ಆರಂಭಿಸಿದಾಗ ಅದೇ ಅಳತೆಯಲ್ಲಿ ಅಕ್ಕಿ ಹಿಟ್ಟು ಹಾಗೂ ಅನ್ನ ಹಾಕಿಕೊಳ್ಳಿ. (ಅನ್ನ ಬಳಸದೆಯೂ ಕಡುಬು ಮಾಡಬಹುದು, ಆದರೆ ಅನ್ನ ಬಳಸಿದರೆ ಕಡುಬು ಮೃದುವಾಗಿ ಹುಡಿಹುಡಿಯಾಗಿ ಬರುತ್ತದೆ. ಅನ್ನ ಬಳಸದಿದ್ದರೆ ಮೆತ್ತಗಾಗುತ್ತದೆ) ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈ ವೇಳೆ ಮಿಕ್ಸ್ ಮಾಡುವಾಗ ಉಪ್ಪು ಹಾಕಿಕೊಳ್ಳಿ. ಹಿಟ್ಟು ಉಂಡೆ ಕಟ್ಟಲು ಬರುವಷ್ಟು ಪ್ರಮಾಣದಲ್ಲಿ ನೀರು ಹಾಕಿಕೊಳ್ಳಬೇಕು. ಹಿಟ್ಟು ತೀರ ನೀರಿನಂತಾಗಬಾರದು, ಗಟ್ಟಿಯೂ ಆಗಬಾರದು, ಚಪಾತಿ ಹಿಟ್ಟಿನಂತಹ ರೂಪಕ್ಕೆ ಬಂದರೆ ಸಾಕು.
ಒಲೆ ಮೇಲಿಂದ ಹಿಟ್ಟು ಕೆಳಗೆ ಇಳಿಸಿ ದೊಡ್ಡ ಪಾತ್ರೆಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ಹಿಟ್ಟು ತಣ್ಣಗಾದ ಬಳಿಕ ಕೈಗೆ ನೀರು ಹಚ್ಚಿಕೊಂಡು ನಿಮಗೆ ಎಷ್ಟು ದೊಡ್ಡ ಗಾತ್ರದ ಕಡುಬು ಬೇಕೋ ಅಷ್ಟು ದೊಡ್ಡ ಗಾತ್ರಕ್ಕೆ ಬಾಲಿನ ಆಕೃತಿಯಲ್ಲಿ ಉಂಡೆ ಮಾಡಿಕೊಳ್ಳಿ.
ಬಳಿಕ ಇದನ್ನು ನೀರನ ಹಬೆಯಲ್ಲಿ ಬೇಯಿಸಬೇಕು. ಇದಕ್ಕೆ ವಿಶೇಷವಾಗಿ ಕಡಬು ಹಾಗೂ ಇಡ್ಲಿ ಮಾಡಲು ಬಳಸುವ ಪಾತ್ರೆಯನ್ನೇ ತೆಗೆದುಕೊಂಡು ಅದರ ಕೆಳಗೆ ನೀರು ಹಾಕಿ ಸಣ್ಣ ಸಣ್ಣ ತೂತುಗಳಿರುವ ಪಾತ್ರೆ ಇಟ್ಟು ಅದರ ಮೇಲೆ ಕಡುಬು ಇಡಬೇಕು. ಸುಮಾರು 20ರಿಂದ 30 ನಿಮಿಷ ಒಲೆಯಲ್ಲಿ ಬೆಂದರೆ ಕಡುಬು ಸವಿಯಲು ಸಿದ್ದವಾಗುತ್ತದೆ.
ಕಡುಬಿನ ಜೊತೆ ಚಟ್ನಿ, ಸಾರು, ಸಾಂಬಾರ್ ಏನೇ ಇದ್ದರೂ ರುಚಿ ಹೆಚ್ಚಿಸುತ್ತದೆ. ಆದರೆ ಕಡುಬನ್ನು ಬರಿದಾಗಿ ತಿನ್ನಲು ರುಚಿ ಇರುವುದಿಲ್ಲ.



Click it and Unblock the Notifications