Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಬ್ರೇಕ್ಫಾಸ್ಟ್ಗೆ ಫಟಾಫಟ್ ರೈಸ್ ಬಾತ್! ರೆಸಿಪಿ ಇಲ್ಲಿದೆ!
ಬೆಳಗ್ಗೆ ರೈಸ್ ಐಟಂನಿಂದ ಮಾಡಿರುವ ತಿಂಡಿ ಸವಿದರೆ ಹೆಚ್ಚು ಸಮಯ ಹಸಿವಾಗುವುದಿಲ್ಲ. ಅದರಲ್ಲೂ ಪಲಾವ್, ಚಿತ್ರಾನ್ನ, ರೈಸ್ ಬಾತ್ ಎಲ್ಲರ ಫೇವರಿಟ್ ಖಾದ್ಯವಾಗಿದೆ. ಅದರಲ್ಲೂ ರೈಸ್ ಬಾತ್ ಎಲ್ಲರ ಮೆಚ್ಚಿನ ಕುರಿಕರ ತಿಂಡಿಯಾಗಿದೆ. ಬೆಳಗ್ಗೆ ಎದ್ದಾಗ ಸುಲಭವಾಗಿ ಯಾವ ತಿಂಡಿ ಮಾಡಬಹುದು ಅಂದ್ರೆ ಅದಕ್ಕೆ ಉತ್ತರ ರೈಸ್ ಬಾತ್ ಆಗಿದೆ.
ಆದ್ರೆ ಯಾವಾಗಲೂ ಒಂದೇ ರೀತಿಯ ರೈಸ್ ಬಾತ್ ಮಾಡಬೇಡಿ. ಸುಲಭವಾಗಿ ರುಚಿಕರ ಹಾಗೂ ಎಲ್ಲರಿಗೂ ಇಷ್ಟವಾಗುವಂತಹ ರೈಸ್ ಬಾತ್ ಮಾಡಿ ನೋಡಿ. ಒಂದು ಚೂರು ಉಳಿಯದೆ ಖಾಲಿಯಾಗುತ್ತೆ. ಜೊತೆಗೆ ನಿಮ್ಮ ಸಮಯವೂ ಉಳಿಯುತ್ತೆ.

ಹಾಗಾದ್ರೆ ರುಚಿಕರ ರೈಸ್ ಮಾಡುವುದು ಹೇಗೆ? ಈ ರೈಸ್ ಬಾತ್ ಮಾಡಲು ಬೇಕಾಗುವ ವಸ್ತುಗಳೇನು?, ಮಾಡುವ ಪಾಕವಿಧಾನವೇನು? ಎಷ್ಟು ಸಮಯ ಹಿಡಿಯಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.
ರೈಸ್ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ -
- ಈರುಳ್ಳಿ- 2
- ಟೊಮೆಟೊ- 2
- ಕ್ಯಾರೆಟ್- 1
- ಹಸಿರು ಬಟಾಣಿ - 1/4 ಕಪ್
- ಚಕ್ಕೆ
- ಸೋಂಕಾಳು
- ಹಸಿರು ಬೀನ್ಸ್ - 1/2 ಕಪ್
- ಪಲಾವ್ ಎಲೆ - 2
- ಲವಂಗ-2
- ಏಲಕ್ಕಿ-1
- ತೆಂಗಿನಕಾಯಿ - 2 tbs
- ಕಸೂರಿ ಮೇಥಿ - 1/2 ಟೀಸ್ಪೂನ್
- ಶುಂಠಿ-1 ಇಂಚು
- ಬೆಳ್ಳುಳ್ಳಿ-1
- ಪುದೀನ ಎಲೆಗಳು - 2 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 2 ಚಮಚ
- ಹಸಿರು ಮೆಣಸಿನಕಾಯಿ - 5
- ಕೊತ್ತಂಬರಿ ಪುಡಿ - 1 tbs
- ಕೆಂಪು ಮೆಣಸಿನ ಪುಡಿ - 1/2 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ರೈಸ್ ಬಾತ್ ಮಾಡುವ ವಿಧಾನ
ಮೊದಲು ಎಲ್ಲಾ ತರಕಾರಿಗಳ ಹೆಚ್ಚಿಕೊಳ್ಳಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಚಕ್ಕೆ, ಲವಂಗ, ಸೋಂಕಾಳು, ಪಲಾವ್ ಎಲೆ ಹಾಕಿ, ಬಳಿಕ ಇದಕ್ಕೆ ಈರುಳ್ಳಿ ಹಾಕಿ. ಕೆಲ ಸೆಕೆಂಡ್ಗಳ ಟೊಮೆಟೋ ಹಾಕಿ.
ಬಳಿಕ ಬಟಾಣಿ, ಬೀನ್ಸ್, ಕ್ಯಾರೆಟ್ ಹಾಕಿಕೊಂಡಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇನ್ನೊಂದು ಕಡೆ ಮಸಾಲೆ ಮಾಡಿಕೊಳ್ಳಿ. ಅದಕ್ಕೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಟೊಮೆಟೋ, ಈರುಳ್ಳಿ, ಹಸಿಮೆಣಸು, ಪುದಿನ, ಶುಂಠಿ, ಚಕ್ಕೆ, ಲವಂಗ, ಬೆಳ್ಳುಳ್ಳಿ, ದನಿಯಾ, ಖಾರದ ಪುಡಿ, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪವೇ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ರುಬ್ಬಿದ ಮಸಾಲೆಯನ್ನು ಒಲೆ ಮೇಲೆ ಇಟ್ಟಿರುವ ಪಾತ್ರೆಗೆ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ತಿರುಗಿಸಿಕೊಳ್ಳಿ. ಬಳಿಕ ಈ ಮಸಾಲೆ ಹಾಕಿದ ಬಳಿಕ 5 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ. ಇದಾದ ಬಳಿಕ ತೊಳೆದಿಟ್ಟುಕೊಂಡ ಅಕ್ಕಿಯನ್ನು ಹಾಕಿಕೊಳ್ಳಿ, ಸರಿಯಾದ ಅಳತೆಗೆ ನೀರು ಸಹ ಹಾಕಿಕೊಳ್ಳಿ. (ಅಕ್ಕಿ ಹಾಕುವ ಮುನ್ನ ನೆನೆಸಿಟ್ಟುಕೊಳ್ಳಿ).
ಎಲ್ಲಾ ಹಾಕಿದ ಬಳಿಕ ಉಪ್ಪು ಎಷ್ಟು ಬೇಕು ನೋಡಿ ಕೊಂಡಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ರೈಸ್ ಬಾತ್ ರೆಡಿಯಾಗುತ್ತದೆ.
ಬೆಳಗ್ಗೆಯ ಗಡಿಬಿಡಿಯಲ್ಲಿ ಈ ರೀತಿ ರೈಸ್ ಬಾತ್ ಮಾಡಿ ನೋಡಿ. ಎಲ್ಲರಿಗೂ ಇಷ್ಟವಾಗುತ್ತದೆ. ತಿನ್ನಲು ಸಹ ಒಳ್ಳೆಯ ರುಚಿ ನೀಡಲಿದೆ. ಮಧ್ಯಾಹ್ನದ ಬಾಕ್ಸ್ಗೂ ಸಹ ಇದನ್ನು ಹಾಕಿಕೊಂಡು ಸವಿಯಬಹುದು.



Click it and Unblock the Notifications