Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರೆಸ್ಟೋರೆಂಟ್ ರುಚಿಯ ಪನೀರ್ ಬಿರಿಯಾನಿ ಮನೆಯಲ್ಲೇ ಮಾಡಿ! ಎಷ್ಟು ಸುಲಭ ಗೊತ್ತಾ?
ಬಿರಿಯಾನಿಗಳು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ನಾನ್ವೆಜ್ ಪ್ರಿಯರಿಗೆ ಚಿಕನ್ ಹಾಗೆ ಮಟನ್ ಬಿರಿಯಾನಿ ಅಂದ್ರೆ ಬಹಳ ಇಷ್ಟವಾಗುತ್ತೆ. ಇನ್ನು ವೆಜ್ ಪ್ರಿಯರಿಗೆ ಕೂಡ ಅದ್ಭುತ ರುಚಿಯಲ್ಲಿ ಬಿರಿಯಾನಿಗಳಿವೆ. ಅದ್ರಲ್ಲೂ ಮಶ್ರೂಮ್ ಬಿರಿಯಾನಿ, ವೆಜ್ ಬಿರಿಯಾನಿ, ಪನೀರ್ ಬಿರಿಯಾನಿಗಳ ರುಚಿ ನೋಡಿರುತ್ತಾರೆ. ಹಾಗೆ ಈ ರುಚಿ ರುಚಿಯ ಬಿರಿಯಾನಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವಿಂದು ಈ ವೆಜ್ ಪ್ರಿಯರಿಗಾಗಿ ಅದ್ಭುತವಾದ ಬಿರಿಯಾನಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವಿಂದು ಪನೀರ್ ಬಿರಿಯಾನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಪನೀರ್ನಲ್ಲಿ ನೀವು ಹಲವು ಬಗೆಯ ಖಾದ್ಯಗಳ ಸವಿದಿರುತ್ತೀರಿ. ಅದ್ರಲ್ಲೂ ಪನೀರ್ ಬಳಸಿ ಮಾಡುವಂತಹ ಮಸಾಲಗಳು, ಗ್ರೇವಿಗಳಂತು ಎಲ್ಲರ ಬಾಯಲ್ಲೂ ನೀರು ತರಿಸಲಿದೆ. ಹಾಗೆ ಪನೀರ್ ಬಳಸಿ ನೀವು ರುಚಿ ರುಚಿಯ ಖಾದ್ಯಕ್ಕೆ ಬೇಕಾದ ಸೈಡ್ ಡಿಷ್ ಮಾಡಿ ಸವಿದಿರುತ್ತೀರಿ.

ಇನ್ನು ನಾವು ಸುಲಭವಾಗಿ ಮಾಡುವಂತಹ ಪನೀರ್ ಬಿರಿಯಾನಿ ಕುರಿತಾಗಿ ತಿಳಿದುಕೊಳ್ಳೋಣ. ಪನೀರ್ ಬಿರಿಯಾನಿಯನ್ನು ಬಹಳ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಹಾಗಾದ್ರೆ ಈ ಪನೀರ್ ಬಿಡಿಯಾನಿ ಮಾಡುವುದು ಹೇಗೆ ನೋಡೋಣ.
ಪನೀರ್ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪನೀರ್ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪನೀರ್
- ಕೊತ್ತಂಬರಿ ಸೊಪ್ಪು
- ಬೆಳ್ಳುಳ್ಳಿ
- ಶುಂಠಿ
- ಮೊಸರು
- ಸೋಂಪು ಕಾಳು
- ಜೀರಿಗೆ
- ಚಕ್ರ ಮೊಗ್ಗು
- ಪಲಾವ್ ಎಲೆ
- ಏಲಕ್ಕಿ
- ಜಾಪತ್ರೆ
- ಗೋಡಂಬಿ
- ಹಸಿ ಮೆಣಸು
- ಈರುಳ್ಳಿ
- ಟೊಮೆಟೋ
- ಎಣ್ಣೆ
- ಸಾಸಿವೆ
- ಹಸಿ ಬಟಾಣಿ
ಪನೀರ್ ಬಿರಿಯಾನಿ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ಗೆ ಪುದಿನಮ ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಮೊಸರು ಸ್ವಲ್ಪ, ಸೋಂಪುಕಾಳು, ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನ ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಈಗ ಚೌಕವಾಗಿ ಕತ್ತರಿಸಿಕೊಂಡಿರುವ ಪನೀರ್ ಅನ್ನು ಇದಕ್ಕೆ ಹಾಕಿಕೊಳ್ಳಿ. ಪನೀರ್ ಸ್ವಲ್ಪ ಗಟ್ಟಿಯಾಗಿ ಕೆಂಪಗಾಗುವಷ್ಟು ಪ್ರೈ ಮಾಡಿಕೊಳ್ಳಿ.
ಈಗ ಪನೀರ್ ತೆಗೆದಿಟ್ಟು, ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣ ಹಾಕಿಕೊಂಡು ಬಳಿಕ ಜೀರಿಗೆ, ಲವಂಗ, ಚಕ್ರ ಮೊಗ್ಗು, ಪಲಾವ್ ಎಲೆ, ಏಲಕ್ಕಿ, ಜಾಪತ್ರೆ, ಗೋಡಂಬಿ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಹಸಿ ಮೆಣಸು, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ, ನಂತರ ಒಂದು ಟೊಮೆಟೋ ಕತ್ತರಿಸಿಕೊಂಡು ಮೆತ್ತಗಾಗುವವರೆಗೂ ಫ್ರೈ ಮಾಡಿಕೊಳ್ಳಿ.
ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಇದಕ್ಕೆ ಹಾಕಿಕೊಂಡು 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಹಾಗೆ ಕಾಲು ಕಪ್ ಹಸಿ ಬಟಾಣಿ, ಗರಂ ಮಸಾಲೆ ಪುಡಿ, ಅರಶಿಣ, ಧನಿಯಾ ಪುಡಿ, ಖಾರದ ಪುಡಿ ಕೂಡ ಹಾಕಿಕೊಂಡು ಮಿಕ್ಸ್ ಮಾಡಿ 2 ನಿಮಿಷ ಬಿಡಿ. ಈಗ ಅಳತೆಗೆ ತಕ್ಕಂತೆ ನೀರು ಹಾಕಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ನೀರು ಕುದಿಬರುವಾಗ ಮೊದಲೇ ತೊಳೆದುಕೊಂಡಿದ್ದ ಅಕ್ಕಿಯನ್ನು ಅಳತೆಯ ಪ್ರಕಾರವಾಗಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಫ್ರೈ ಮಾಡಿಕೊಂಡಿರುವ ಪನೀರ್ ಹಾಗೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಬೇಕು. ನಂತರ ಒಲೆ ಆಫ್ ಮಾಡಿ ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಬಾಯಲ್ಲಿ ನೀರು ತರಿಸುವಂಗತಹ ಈ ಪನೀರ್ ಬಿರಿಯಾನಿ ರೆಡಿಯಾಗಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
