Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಹೊಸ ರುಚಿ! ಬಾಯಿ ಚಪ್ಪರಿಸೋ ಬಟರ್ ಚಿಕನ್.. ಈ ಟಿಪ್ಸ್ ಫಾಲೋ ಮಾಡಿದ್ರೆ ನೀವೇ ಬೆಸ್ಟ್ ಶೆಫ್
ಮಳೆಗಾಲ ಶುರುವಾಗಿದೆ. ಮನೆಯಲ್ಲಿ ಏನಾದರೂ ಡಿಫರೆಂಟ್ ಆಗಿ ನಾನ್ ವೆಜ್ ಮಾಡಬೇಕು ಅಂತ ಹಲವರ ಬಯಕೆ. ನೀವು ಸಹ ಇದೇ ಪ್ಲಾನ್ ಮಾಡಿದ್ದರೆ, ಬಾಯಲ್ಲಿ ನೀರೂರಿಸುವ ಈ ಹೊಸ ರುಚಿಯನ್ನು ಕುಟುಂಬಕ್ಕೆ ಪರಿಚಯಿಸಬಹುದು. ಹೌದು, ನಾವು ಹೇಳುತ್ತಿರುವುದು ಬಟರ್ ಚಿಕನ್ (Butter Chicken) ಬಗ್ಗೆ. ಇದು ಜನ ಸಾಮಾನ್ಯರು ಅಷ್ಟೇ ಅಲ್ಲ, ಟಾಪ್ ನಟ, ನಟಿಯರ ಫೇವರಿಟ್ ಖಾದ್ಯಗಳಲ್ಲಿ ಒಂದು. ಬಟರ್ ಚಿಕನ್ ಭಾರತೀಯರಿಗೆ ಮಾತ್ರವಲ್ಲದೆ ವಿದೇಶಿಯರಲ್ಲಿಯೂ ತುಂಬಾ ಜನಪ್ರಿಯ. ಬನ್ನಿ, ಇಂದು ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ಬಟರ್ ಚಿಕನ್ ತಯಾರಿಸುವ ವಿಧಾನವನ್ನು (Butter Chicken Recipe) ತಿಳಿಯೋಣ.
ಮಾಂಸಾಹಾರಿಗಳು ಸಾಮಾನ್ಯವಾಗಿ ಕೋಳಿ, ಕುರಿ ಮತ್ತು ಸೀಗಡಿಗಳಿಂದ ತಯಾರಿಸಿದ ವಿವಿಧ ಐಟಂಗಳನ್ನು ಸವಿಯಲು ಇಷ್ಟಪಡುತ್ತಾರೆ. ಚಿಕನ್ ಬಿರಿಯಾನಿ, ಚಿಕನ್ ಕರಿ, ಚಿಕನ್ ಸೂಪ್ ಹೀಗೆ ಹಲವಾರು ಬಗೆಯ ಖಾದ್ಯಗಳು ಚಿಕನ್ ಪ್ರಿಯರಿಗೆ ಲಭ್ಯವಿದೆ ಅದರಲ್ಲಿ ಬಟರ್ ಚಿಕನ್ ಒಂದು ವಿಶಿಷ್ಟವಾದ ಗ್ರೇವಿ ಕರಿ ಆಗಿದೆ. ಇದು ಮಸಾಲೆಯುಕ್ತವಾಗಿರದ ಕಾರಣ ಮಕ್ಕಳು ಸಹ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಬಟರ್ ಚಿಕನ್ ಅಡುಗೆಯಲ್ಲಿ ಬಹಳ ಪ್ರಸಿದ್ಧವಾದ ಮತ್ತು ರುಚಿಕರವಾದ ಖಾದ್ಯವಾಗಿದೆ.

ಇದು ಕೆನೆಭರಿತ ಗ್ರೇವಿಯನ್ನು ಹೊಂದಿದ್ದು, ಹೆಚ್ಚು ರುಚಿ ಹೊಂದಿರುತ್ತದೆ. ಇದನ್ನು ಮಕ್ಕಳು ಮತ್ತು ದೊಡ್ಡವರು ಇಷ್ಟಪಡುತ್ತಾರೆ. ಬಟರ್ ಚಿಕನ್ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದನ್ನು ಸಾಮಾನ್ಯವಾಗಿ ನಾನ್, ರೋಟಿ ಅಥವಾ ಅನ್ನದೊಂದಿಗೆ ಬಡಿಸಲಾಗುತ್ತದೆ. ಬಟರ್ ಚಿಕನ್ ತಯಾರಿಸಲು ಸ್ವಲ್ಪ ಸಮಯ ಹಿಡಿಯಬಹುದು. ಆದರೆ, ಇದು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ, ಬಟರ್ ಚಿಕನ್ ಮಾಡಲು ಹಾಕಿದ ಶ್ರಮವೆಲ್ಲಾ ಸಾರ್ಥಕ ಎನಿಸುತ್ತದೆ.
ಬಟರ್ ಚಿಕನ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಚಿಕನ್ - 500 ಗ್ರಾಂ
• ಈರುಳ್ಳಿ - 2
• ಟೊಮ್ಯಾಟೊ - 4
• ಹಸಿ ಮೆಣಸಿನಕಾಯಿ - 2
• ಮೊಸರು - 1 ಕಪ್
• ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
• ಕೆಂಪು ಮೆಣಸಿನಕಾಯಿ ಪುಡಿ - 1 ಸ್ಪೂನ್
• ಧನಿಯಾ ಪುಡಿ - 1 ಸ್ಪೂನ್
• ಗರಂ ಮಸಾಲಾ ಪುಡಿ - 1 ಸ್ಪೂನ್
• ರುಚಿಗೆ ತಕ್ಕಷ್ಟು ಉಪ್ಪು
• ಬೆಣ್ಣೆ - 4 ಸ್ಪೂನ್
• ಎಣ್ಣೆ - 2 ಸ್ಪೂನ್
• ಗೋಡಂಬಿ ಪೇಸ್ಟ್ - 2 ಸ್ಪೂನ್
• ಫ್ರೆಶ್ ಕ್ರೀಮ್ - 1/2 ಕಪ್
• ಕೊತ್ತಂಬರಿ ಸೊಪ್ಪು

ಬಟರ್ ಚಿಕನ್ ಮಾಡುವ ವಿಧಾನ
ಮೊದಲಿಗೆ, ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ಚಿಕನ್ ತುಂಡುಗಳನ್ನು ಹಾಕಿ, ಮೊಸರು, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಕೆಂಪು ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಚಿಕನ್ ತುಂಡುಗಳಿಗೆ ಚೆನ್ನಾಗಿ ಹಚ್ಚಿ ಕನಿಷ್ಠ 2 ಗಂಟೆಗಳ ಕಾಲ ಫ್ರಿಜ್ನಲ್ಲಿಡಿ. ಬಳಿಕ ಗೋಡಂಬಿ ಪೇಸ್ಟ್ ತಯಾರಿಸಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಗ್ರಿಲ್ ಮಾಡಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.
ಈಗ ಒಂದು ಬಾಣಲೆ ತೆಗೆದುಕೊಂಡು ಒಲೆಯ ಮೇಲೆ ಇಡಿ. ಅದರಲ್ಲಿ ಬೆಣ್ಣೆ ಹಾಕಿ ಕಾಯಿಸಿ, ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, ಅದು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಬಳಿಕ ಟೊಮ್ಯಾಟೊ ಹಾಕಿ, ಅದು ಸಂಪೂರ್ಣವಾಗಿ ಬೆಂದು ಎಣ್ಣೆ ಬಿಡಲು ಪ್ರಾರಂಭಿಸಿದ ನಂತರ, ಗೋಡಂಬಿ ಪೇಸ್ಟ್ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸಮಯ ಬೇಯಿಸಿದ ನಂತರ ಗ್ರೇವಿ ಸಿದ್ಧವಾಗುತ್ತದೆ. ಗ್ರೇವಿಯನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಬಿಸಿ ಮಾಡಿ. ಅದರಲ್ಲಿ ಸ್ವಲ್ಪ ಬೆಣ್ಣೆ ಹಾಕಿ, ರುಬ್ಬಿದ ಪೇಸ್ಟ್, ತಾಜಾ ಕ್ರೀಮ್, ಹಸಿ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಗ್ರೇವಿಯನ್ನು 7 ನಿಮಿಷಗಳ ಕಾಲ ಕುದಿಸಿ. ಬಳಿಕ ಗ್ರಿಲ್ ಮಾಡಿದ ಅಥವಾ ಹುರಿದ ಚಿಕನ್ ತುಂಡುಗಳನ್ನು ಗ್ರೇವಿಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಗಳ ಕಾಲ ಚಿಕನ್ ಅನ್ನು ಬೇಯಿಸಿ. ಈಗ ಕೊತ್ತಂಬರಿ ಸೊಪ್ಪು ಹಾಕಿ. ಇಷ್ಟು ಮಾಡಿದರೆ ಬಟರ್ ಚಿಕನ್ ಸಿದ್ಧ. ಇದನ್ನು ರೋಟಿ ಅಥವಾ ಅನ್ನದೊಂದಿಗೆ ಸವಿದರೆ ಅದರೆ ಮಜವೇ ಬೇರೆ. ಇದನ್ನು ಮನೆಯಲ್ಲಿಯೇ ತಯಾರಿಸಿದರೆ ಆರೋಗ್ಯಕ್ಕೂ ಹಿತ ಮತ್ತು ಟೇಸ್ಟ್ ಕೂಡ ಸೂಪರ್.



Click it and Unblock the Notifications