Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪಿತೃಪಕ್ಷಕ್ಕೆ ರೆಸ್ಟೋರೆಂಟ್ ರುಚಿಯ ಕ್ಯಾಪ್ಸಿಕಂ ಚಿಕನ್ ಫ್ರೈ..!
ನಾನ್ ವೆಜ್ ಪ್ರಿಯರಿಗೆ ಚಿಕನ್ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಹಾಗೆ ಈ ಚಿಕನ್ನಿಂದಲೂ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯೋದು ನೋಡಬಹುದು. ಚಿಕನ್ನಿಂದ ಮಾಡುವ ಖಾದ್ಯಗಳೆಂದರೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಹೋಟೆಲ್ನಲ್ಲಿ, ರೆಸ್ಟೋರೆಂಟ್ನಲ್ಲಿ ಮಾಡುವಂತಹ ಘಮ ಘಮಿಸುವ ಚಿಕನ್ ಅಂದ್ರೆ ಬಾಯಲ್ಲಿ ನೀರು ಬರುತ್ತೆ.
ಈಗ ಪಿತೃ ಪಕ್ಷದ ಸಮಯದಲ್ಲಿ ಹಲವರು ಮಾಂಸಾಹಾರ ಊಟ ಮಾಡೋದು ನೋಡಬಹುದು. ಪೂರ್ವಜರು ಮಾಂಸಾಹಾರ ಇಷ್ಟಪಡುವವರಾಗಿದ್ದರೆ ಮನೆಯಲ್ಲಿ ಅಂದು ನಾನ್ ವೆಜ್ ಇದ್ದೇ ಇರಲಿದೆ. ಹಾಗೆ ಊಟದ ಜೊತೆಗೆ ಚಿಕನ್ನಿಂದ ಮಾಡಿದ ಯಾವುದೇ ಖಾದ್ಯ ಇದ್ದರೂ ಕೂಡ ಸವಿಯಲು ಇಷ್ಟಪಡುತ್ತಾರೆ.

ಹಾಗಾಗಿ ಈ ಪಿತೃಪಕ್ಷದ ಸಮಯದಲ್ಲಿ ನಾವಿಂದು ಕ್ಯಾಪ್ಸಿಕಂ ಬಳಸಿ ರೆಸ್ಟೋರಂಟ್ಗಳಲ್ಲಿ ಮಾಡುವಂತಹ ರುಚಿ ರುಚಿಯ ಚಿಕನ್ ಫ್ರೈ ಮಾಡುವ ಕುರಿತು ತಿಳಿದುಕೊಳ್ಳೋಣ. ಚಿಕನ್ ಫ್ರೈ ಅನ್ನು ಹಲವು ರೀತಿಯಲ್ಲಿ ಮಾಡಿ ಸವಿಯಬಹುದು ಅನ್ನೋದು ನಿಮಗೂ ತಿಳಿದಿರಬಹುದು. ಆದ್ರೆ ಈ ರೀತಿ ಕ್ಯಾಪ್ಸಿಕಂ ಬಳಸಿಕೊಂಡು ಮಾಡುವ ಚಿಕನ್ ಫ್ರೈ ಎಂದಾದ್ರು ಮಾಡಿದ್ದೀರಾ?
ಕ್ಯಾಪ್ಸಿಕಂ ಚಿಕನ್ ಫ್ರೈ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಪ್ಸಿಕಂ ಚಿಕನ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಕೋಳಿ ಮಾಂಸ
ಹಸಿ ಮೆಣಸಿನಕಾಯಿ
ಶುಂಠಿ
ಬೆಳ್ಳುಳ್ಳಿ
ಕಲ್ಲು ಹೂವು
ಏಲಕ್ಕಿ-1
ದಾಲ್ಚಿನ್ನಿ
ಲವಂಗ-2
ಈರುಳ್ಳಿ
ಟೊಮೆಟೊ
ಗರಂ ಮಸಾಲ ಪುಡಿ
ಜೀರಿಗೆ ಪುಡಿ
ಕರಿಮೆಣಸಿನ ಪುಡಿ
ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಕ್ಯಾಪ್ಸಿಕಂ ಚಿಕನ್ ಮಾಡುವ ವಿಧಾನವೇನು?
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ 2 ಸ್ಪೂನ್ ಮೊಸರು, ಉಪ್ಪು, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಿ 15 ನಿಮಿಷ ಹಾಗೆಯೇ ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಹಸಿ ಮೆಣಸು, ಶುಂಠಿ ಹಾಕಿ ನೀರು ಹಾಕಿಕೊಂಡು ರುಬ್ಬಿಕೊಂಡು ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸೋಂ ಕಾಳು, ಲವಂಗ, ಚಕ್ಕೆ, ಕಲ್ಲು ಹೂವು, ಏಲಕ್ಕಿ ಹಾಕಿ ಬಿಸಿ ಮಾಡಿ ನಂತರ ಈರುಳ್ಳಿ ಹಾಕಿ ಚೆನ್ನಾಗಿ 1 ನಿಮಿಷ ಫ್ರೆ ಮಾಡಿಕೊಳ್ಳಿ. ನಂತರ ಇದಕ್ಕೆ 1 ಟೊಮೆಟೋ ಹಾಕಿ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಪೇಸ್ಟ್ ಅನ್ನು ಹಾಕಿಕೊಳ್ಳಿ. ನಂತರ ಉರಿ ದೊಡ್ಡಗೆ ಮಾಡಿ ಫ್ರೈ ಮಾಡಿಕೊಳ್ಳಿ.
3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮುಚ್ಚಿಟ್ಟಿದ್ದ ಚಿಕನ್ ಅನ್ನು ಹಾಕಿಕೊಳ್ಳಿ. ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಿ. ಮುಚ್ಚಳ ಮುಚ್ಚಿ 6 ನಿಮಿಷ ಕುದಿಯಲು ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ನಂತರ ಇದಕ್ಕೆ ಒಂದು ದೊಡ್ಡ ಗಾತ್ರದ ಕ್ಯಾಪ್ಸಿಕಂ ಅನ್ನು ಹೆಚ್ಚಿಕೊಂಡು ಹಾಕಿಕೊಳ್ಳಿ.
ಹಾಗೆ ಇದಕ್ಕೆ ಗರಂ ಮಸಾಲ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು, ಹಾಕಿ ಮತ್ತೆ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 4 ರಿಂದ 5 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಇಷ್ಟಾದರೆ ನಿಮ್ಮ ಮುಂದೆ ಈ ಕ್ಯಾಪ್ಸಿಕಂ ಚಿಕನ್ ರೆಡಿಯಾಗುತ್ತದೆ. ನೀವು ಸಹ ಇದನ್ನು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
