Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ಸ್ಪೆಷಲ್ ಪಲಾವ್ ಒಮ್ಮೆ ಟ್ರೈ ಮಾಡಿ! ವಾವ್ ಎಂಥಾ ರುಚಿ ಅಂತ ಮೈಮರೆತು ತಿಂತಾರೆ
ನೀವು ಯಾವತ್ತೂ ಈ ರೀತಿಯ ಪಲಾವ್ ತಿಂದಿಲ್ಲ ಬಿಡಿ. ಈ ಪಲಾವ್ ಹೆಸರನ್ನು ಕೇಳಿದ ತಕ್ಷಣ ಅನೇಕರ ಬಾಯಲ್ಲಿ ನೀರೂರುತ್ತದೆ. ಹೌದು, ತರಕಾರಿ ಪಲಾವ್, ಮಶ್ರೂಮ್ ಪಲಾವ್, ಪನ್ನೀರ್ ಪಲಾವ್ ಎಲ್ಲಾ ಟ್ರೈ ಮಾಡಿದ್ದರೆ, ಈ ಬಾರಿ ಗೋಡಂಬಿ ಪನ್ನೀರ್ ಪಲಾವ್ (Cashew Paneer Pulao) ಮಾಡಿ ನೋಡಿ. ಇದು ರೆಸ್ಟೋರೆಂಟ್‌ಗಳಲ್ಲಿ ಸಿಗುವ ರುಚಿಗಿಂತ ಹತ್ತು ಪಟ್ಟು ಅಧ್ಬುತವಾಗಿರುತ್ತದೆ. ನೀವು ತಿನ್ನುತ್ತಿದ್ದರೆ ಮತ್ತಷ್ಟ ತಿನ್ನಬೇಕು ಎನ್ನುವಷ್ಟು ಟೇಸ್ಟಿ ಆಗಿರುತ್ತದೆ. ಗೋಡಂಬಿ ಪನ್ನೀರ್ ಪಲಾವ್ ಮಾಡುವುದು ಹೇಗೆ ಅಂತ ನಾವಿಂದು ತಿಳಿಯೋಣ.
ರಾಯಲ್ ಔತಣಕೂಟವನ್ನು ಏರ್ಪಡಿಸಲು ಬಯಸುವವರು ಗೋಡಂಬಿ ಪನ್ನೀರ್ ಪಲಾವ್ ಅನ್ನು ತಮ್ಮ ಮೆನುವಿನಲ್ಲಿ ಸೇರಿಸುತ್ತಾರೆ. ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯಲ್ಲಿ ರುಚಿಕರವಾದ ಗೋಡಂಬಿ ಪನ್ನೀರ್ ಪುಲಾವ್ ಅನ್ನು ಸುಲಭವಾಗಿ ತಯಾರಿಸಬಹುದು. ಇದು ಅನೇಕ ಮಹಿಳೆಯರಿಗೆ ತಿಳಿದಿಲ್ಲ. ಕೆಲವು ಸರಳ ಸಲಹೆಗಳು ಮತ್ತು ಸರಿಯಾದ ಪದಾರ್ಥಗಳೊಂದಿಗೆ ಮನೆಯಲ್ಲಿ ರುಚಿಕರವಾದ ಪನ್ನೀರ್ ಪಲಾವ್ ರೆಡಿ ಮಾಡಬಹುದು. ಸಸ್ಯಾಹಾರಿಗಳು ಸಹ ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ರೈಸ್‌ನಿಂದ ಬರುವ ಮಸಾಲೆಗಳ ಸುವಾಸನೆ ನಡುವೆ ಮೃದುವಾದ ಪನ್ನೀರ್ ತುಂಡುಗಳು, ಗೋಡಂಬಿಯೊಂದಿಗೆ ಬೆರೆತ ಈ ಅದ್ಭುತ ತಿಂಡಿಯೇ ಗೋಡಂಬಿ ಪನ್ನೀರ್ ಪಲಾವ್. ಈ ಗೋಡಂಬಿ ಪನ್ನೀರ್ ಪಲಾವ್ ಅನ್ನು ನಿಮ್ಮ ಅಡುಗೆಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯಲ್ಲಿ, ರಾಯಲ್ ಲುಕ್‌ನಲ್ಲಿ ರುಚಿಕರವಾಗಿ ತಯಾರಿಸಬಹುದು. ಬಿಸಿ ಬಿಸಿಯಾದ ಗೋಡಂಬಿ ಪನ್ನೀರ್ ಪಲಾವ್ ಅನ್ನು ಅತಿಥಿಗಳಿಗೆ ಬಡಿಸಿದರೆ, ವಾವ್ ಎಂಥಾ ರುಚಿ ಎಂದು ಮೈಮರೆತು ತಿನ್ನುತ್ತಾರೆ. ಹಾಗಿದ್ರೆ, ಇನ್ನೇಕೆ ತಡ ಈ ರಾಯಲ್ ಪಲಾವ್ (Cashew Paneer Pulao Recipe) ತಯಾರಿಸುವ ವಿಧಾನವನ್ನು ತಿಳಿಯೋಣ ಬನ್ನಿ.
ಗೋಡಂಬಿ ಪನ್ನೀರ್ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಅಕ್ಕಿ - 2 ಕಪ್
• ಪನ್ನೀರ್ - 250 ಗ್ರಾಂ
• ಗೋಡಂಬಿ - 1 ಕಪ್
• ಈರುಳ್ಳಿ - 1
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
• ಹಸಿ ಮೆಣಸಿನಕಾಯಿ - 2 ರಿಂದ 3
• ಮೊಸರು - 2 ಸ್ಪೂನ್
• ತುಪ್ಪ ಅಥವಾ ಎಣ್ಣೆ - 2 ರಿಂದ 3 ಸ್ಪೂನ್
• ಚಕ್ಕೆ - ಸ್ವಲ್ಪ
• ಏಲಕ್ಕಿ - 4
• ಲವಂಗ - 4
• ಮೆಣಸು - 5
• ಜೀರಿಗೆ - 1 ಸ್ಪೂನ್
• ಅರಿಶಿನ - 1/2 ಸ್ಪೂನ್
• ಖಾರದ ಪುಡಿ - 1/2 ಸ್ಪೂನ್
• ಧನಿಯಾ ಪುಡಿ - 1 ಸ್ಪೂನ್
• ಗರಂ ಮಸಾಲಾ - 1/2 ಸ್ಪೂನ್
• ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು
• ಪುದೀನಾ - ಸಣ್ಣಗೆ ಹೆಚ್ಚಿದ್ದು
• ಉಪ್ಪು - ರುಚಿಗೆ ತಕ್ಕಷ್ಟು
• ನೀರು - 4 ಕಪ್

ಗೋಡಂಬಿ ಪನ್ನೀರ್ ಪಲಾವ್ ಮಾಡುವ ವಿಧಾನ
ನೀವು ಬಾಸ್ಮತಿ ಅಕ್ಕಿಯನ್ನು ಬಳಸಬೇಕು. ನೆನೆಸಿದ ಅಕ್ಕಿಯನ್ನು ತೆಗೆದು, ಅದಲ್ಲಿರುವ ಹೆಚ್ಚುವರಿ ನೀರನ್ನು ಹೊರತೆಗೆಯಿರಿ ಅಥವಾ ಸೋಸಿ. ಪನ್ನೀರ್ ಅನ್ನು ಉಪ್ಪು ನೀರಿನಲ್ಲಿ ಹಾಕಿ ಸ್ವಚ್ಛಗೊಳಿಸಿ. ನೀರಿಲ್ಲದಂತೆ ಮಾಡಿ ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿ. ಈಗ ಗ್ಯಾಸ್ ಸ್ಟವ್ ಮೇಲೆ ಬಾಣಲೆ ಇಡಿ. ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಪನ್ನೀರ್ ತುಂಡುಗಳನ್ನು ಗೋಲ್ಡ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಹೀಗೆ ಮಾಡುವುದರಿಂದ ಪನ್ನೀರ್ ಒಡೆಯದಂತೆ ಇರುತ್ತದೆ. ರುಚಿ ಕೂಡ ಚೆನ್ನಾಗಿರುತ್ತದೆ.
ಇದಾದ ಬಳಿಕ ಪನ್ನೀರ್ ತೆಗೆದು ಒಂದು ತಟ್ಟೆಯಲ್ಲಿ ಹಾಕಿ. ಉಳಿದ ತುಪ್ಪ ಅಥವಾ ಎಣ್ಣೆಯನ್ನು ಅದೇ ಬಾಣಲೆಯಲ್ಲಿ ಹಾಕಿ. ಸ್ವಲ್ಪ ಗೋಡಂಬಿ ಹಾಕಿ ಹುರಿದು ಪನ್ನೀರ್ ತೆಗೆದುಕೊಂಡ ತಟ್ಟೆಗೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಎಲ್ಲಾ ಮಸಾಲೆ ಪದಾರ್ಥಗಳನ್ನು ಚಕ್ಕೆ, ಏಲಕ್ಕಿ, ಲವಂಗ, ಮೆಣಸು, ಜೀರಿಗೆ ಹಾಕಿ. ಒಳ್ಳೆಯ ವಾಸನೆ ಬರುವವರೆಗೆ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಈಗ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ ಹಾಕಿ ಒಂದು ನಿಮಿಷ ಬೇಯಿಸಿ.
ಅಕ್ಕಿ ಒಡೆಯದಂತೆ ನಿಧಾನವಾಗಿ ಮಿಕ್ಸ್ ಮಾಡಿ
ಈಗ ಉರಿಯನ್ನು ಕಡಿಮೆ ಮಾಡಿ. ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೊಸರು ಹಾಕಿ. ಮೊಸರು ಒಡೆಯದಂತೆ ನಿರಂತರವಾಗಿ ತಿರುಗಿಸುತ್ತಾ ಇರಿ. ಎಣ್ಣೆ ಬೇರ್ಪಡಲು ಪ್ರಾರಂಭವಾಗುವವರೆಗೆ ಈರುಳ್ಳಿ ಮಸಾಲಾ ಮಿಶ್ರಣದಲ್ಲಿ ಮೊಸರನ್ನು 3 ನಿಮಿಷಗಳ ಕಾಲ ಫ್ರೈ ಮಾಡಿ. ಈಗ ನೆನೆಸಿದ ಅಕ್ಕಿಯನ್ನು ಹಾಕಿ, ಅಕ್ಕಿ ಒಡೆಯದಂತೆ ನಿಧಾನವಾಗಿ ಮಿಕ್ಸ್ ಮಾಡಿ. ನಂತರ ನೀರು, ಉಪ್ಪು, ಉಳಿದ ಗೋಡಂಬಿ ಹಾಕಿ ಕಲಸಿ. ಇಷ್ಟು ಮಾಡಿದರೆ, ಗೋಡಂಬಿ ಪನ್ನೀರ್ ಪಲಾವ್ ಸಿದ್ಧವಾಗುತ್ತದೆ.



Click it and Unblock the Notifications