Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಯಲ್ಲೇ ರೆಸ್ಟೋರೆಂಟ್ ರುಚಿಯ 'EGG 65' ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ಮೊಟ್ಟೆಗಳಲ್ಲಿ ಎಷ್ಟು ಪ್ರೋಟೀನ್ ಅಂಶವಿದೆ ಎಂಬುದನ್ನು ನಿಮಗೆ ಗೊತ್ತಿದೆ. ಕಡಿಮೆ ಬೆಲೆಗೆ ಅತ್ಯಧಿಕ ಪ್ರೋಟೀನ್ ನೀಡುವ ವಸ್ತು ಅಂದ್ರೆ ಅದು ಮೊಟ್ಟೆ ಮಾತ್ರ. ದಿನಕ್ಕೆರಡು ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.
ಮೊಟ್ಟೆಗಳಲ್ಲಿ ಪ್ರೋಟೀನ್ ರೈಬೋಫ್ಲಾವಿನ್, ಫೋಲೇಟ್, ಕಬ್ಬಿಣ, ರಂಜಕ, ಸೆಲೆನಿಯಮ್, ಮೆಗ್ನೀಸಿಯಮ್, ವಿಟಮಿನ್ ಎ, ಇ ಮತ್ತು ಬಿ6, ವಿಟಮಿನ್ ಡಿ ಮತ್ತು ಮೂಳೆಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ಪ್ರತಿದಿನ ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ ಮತ್ತು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಮನೆಯಲ್ಲಿ ಮೊಟ್ಟೆಗಳಿದ್ದರೆ ಒಡೆದು, ಆಮ್ಲೆಟ್ ಹಾಕಿ ಅಥವಾ ಸಾರುಗಳಿಗೆ ಸೇರಿಸಿ ತಿನ್ನುತ್ತೇವೆ. ಆದರೆ ನೀವು ಎಂದಾದರೂ EGG 65 ಮಾಡಿ ತಿಂದಿದ್ದೀರಾ?
ಇಲ್ಲದಿದ್ದರೆ, ಮನೆಯಲ್ಲಿ ಮೊಟ್ಟೆಗಳ ಬಳಸಿ ಸ್ಟೋರೆಂಟ್ ಶೈಲಿಯ 'EGG 65' ಮಾಡುವುದು ಹೇಗೆ ಎಂಬುದನ್ನು ನೋಡಿ. ಎಗ್ 65ಗೆ ಏನೆಲ್ಲಾ ಪದಾರ್ಥ ಬೇಕು, ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಅಗತ್ಯವಿರುವ ವಸ್ತುಗಳು
- ಬೇಯಿಸಿದ ಮೊಟ್ಟೆ - 5
- ಹಸಿ ಮೊಟ್ಟೆ - 1
- ಕತ್ತರಿಸಿದ ಶುಂಠಿ - 1 ಚಮಚ
- ಕತ್ತರಿಸಿದ ಬೆಳ್ಳುಳ್ಳಿ - 1 ಚಮಚ
- ಹಸಿರು ಮೆಣಸಿನಕಾಯಿ - 2 ಅಥವಾ 3
- ಕಡಲೆ ಹಿಟ್ಟು - 5 ಅಥವಾ 6 ಚಮಚ
- ಅರಿಶಿನ ಪುಡಿ - ಒಂದು ಚಿಟಿಕೆ
- ಕೆಂಪು ಮೆಣಸಿನ ಪುಡಿ - 1/2 ಚಮಚ
- ಕಾಶ್ಮೀರಿ ಚಿಲ್ಲಿ ಪೌಡರ್ - 1/2 ಚಮಚ
- ಜೀರಿಗೆ ಪುಡಿ - 1/2 ಚಮಚ
- ಗರಂ ಮಸಾಲಾ ಪುಡಿ - 1/4 -1/2 ಚಮಚ
- ಉಪ್ಪು - ರುಚಿಗೆ ತಕ್ಕಂತೆ
ಪೇಸ್ಟ್ ಮಾಡಿಕೊಳ್ಳಲು ಏನೆಲ್ಲಾ ಬೇಕು
- ಎಣ್ಣೆ - 1.5 ಚಮಚ
- ಕತ್ತರಿಸಿದ ಬೆಳ್ಳುಳ್ಳಿ - 2 ಚಮಚ
- ಕತ್ತರಿಸಿದ ಹಸಿರು ಮೆಣಸಿನಕಾಯಿ - 3 ಅಥವಾ 4
- ಕರಿಬೇವಿನ ಎಲೆಗಳು - 3 ಗೊಂಚಲುಗಳು
- ಕೆಂಪು ಮೆಣಸಿನ ಪುಡಿ - 1/2 ಚಮಚ
- ಟೊಮೆಟೊ ಕೆಚಪ್ - 3 ಚಮಚ (1 ಚಮಚ ನೀರಿನಲ್ಲಿ ಮಿಶ್ರಣ ಮಾಡಿ)
ಪಾಕವಿಧಾನ
ಮೊದಲಿಗೆ, ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಸಿಪ್ಪೆಯನ್ನು ತೆಗೆಯಬೇಕು ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕವಾಗಿ ಇರಿಸಿ. ಪಕ್ಕಕ್ಕೆ ಇಟ್ಟಿರುವ ಮೊಟ್ಟೆಯ ಬಿಳಿಭಾಗವನ್ನು ಕತ್ತರಿಸಿ. ನಂತರ ಕತ್ತರಿಸಿದ ಮೊಟ್ಟೆಯ ಒಳಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
ಮುಂದೆ, ಅದಕ್ಕೆ ಬೇಕಾದಷ್ಟು ಕಡಲೆ ಹಿಟ್ಟು, ಅರಿಶಿನ ಪುಡಿ, ಮೆಣಸಿನ ಪುಡಿ, ಕಾಶ್ಮೀರಿ ಮೆಣಸಿನ ಪುಡಿ, ಗರಗಸೆ ಪುಡಿ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಅದಕ್ಕೆ ಹಸಿ ಮೊಟ್ಟೆ ಒಡೆದು ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಒಲೆಯಲ್ಲಿ ಪ್ಯಾನ್ ಅನ್ನು ಇರಿಸಿ ಮತ್ತು ಮೊಟ್ಟೆಯ ಮಿಶ್ರಣವನ್ನು ಡೀಪ್ ಫ್ರೈ ಮಾಡಲು ಸಾಕಷ್ಟು ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ, ಮಸಾಲೆಗಳೊಂದಿಗೆ ಬೆರೆಸಿದ ಮೊಟ್ಟೆಯನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ಇವುಗಳನ್ನು ಮಧ್ಯಮ ಉರಿಯಲ್ಲಿ ಸುಮಾರು 3-4 ನಿಮಿಷಗಳ ಕಾಲ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ ತೆಗೆದುಕೊಳ್ಳಿ.
ಮುಂದೆ, ಬಾಣಲೆಯನ್ನು ಒಲೆಯಲ್ಲಿ ಇಟ್ಟು, ಸ್ವಲ್ಪ ಎಣ್ಣೆಯನ್ನು ಸುರಿಯಿರಿ ಮತ್ತು ಅದು ಬಿಸಿಯಾದಾಗ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ಸೇರಿಸಿ ಮತ್ತು 30 ಸೆಕೆಂಡುಗಳ ಕಾಲ ಹೆಚ್ಚಿನ ಉರಿಯಲ್ಲಿ ಹುರಿಯಿರಿ. ನಂತರ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ.
ನಂತರ ಹುರಿದ ಮೊಟ್ಟೆಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಬೆರೆಸಿ.ನಂತರ ಕೆಂಪು ಮೆಣಸಿನ ಪುಡಿ ಮತ್ತು ನೀರು ಬೆರೆಸಿದ ಟೊಮೆಟೊ ಕೆಚಪ್ ಸೇರಿಸಿ ಮಧ್ಯಮ ಉರಿಯಲ್ಲಿ ಸುಮಾರು 1-2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ಇಷ್ಟು ಮಾಡಿದರೆ ಎಗ್ 65 ಸವಿಯಲು ಸಿದ್ದವಾಗುತ್ತದೆ.



Click it and Unblock the Notifications
