Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೆಳಗ್ಗೆ ತಿಂಡಿಗೆ ಕೆಂಪು ಅವಲಕ್ಕಿ ಒಗ್ಗರಣೆ ಮಾಡಿ ನೋಡಿ.! ಸಖತ್ ಟೇಸ್ಟಿ ರೆಸಿಪಿ..!
ಬೆಳಗಿನ ತಿಂಡಿಗೆ ನೀವು ಹತ್ತಾರು ಬಗೆಯ ತಿಂಡಿಗಳ ಮಾಡುವುದು ಕಾಮನ್, ನಿತ್ಯ ಒಂದೇ ರೀತಿಯ ಖಾದ್ಯ ಮಾಡಲು ನೀವು ಎಂದಿಗೂ ಇಷ್ಟಪಡುವುದಿಲ್ಲ. ಹಾಗೆ ಬಹಳ ಬೇಗ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ಖಾದ್ಯಗಳನ್ನೇ ಹೆಚ್ಚಾಗಿ ಮಾಡಲು ಇಷ್ಟಪಡುತ್ತೇವೆ. ಬೆಳಗ್ಗೆಯ ಗಡಿ ಬಿಡಿಯ ಸಮಯದಲ್ಲಿ ದೊಡ್ಡ ದೊಡ್ಡದಾದ ತಿಂಡಿ ಮಾಡಲು ಕೂಡ ಆಗುವುದಿಲ್ಲ. ಫ್ರೀ ಟೈಮ್ನಲ್ಲಿ ಮಾತ್ರ ವಿಶೇಷ ತಿಂಡಿಗಳ ಮಾಡುತ್ತಾರೆ.
ಹಾಗೆ ಕಡಿಮೆ ಸಮಯದಲ್ಲಿ ಮಾಡುವ ತಿಂಡಿ ಅಂದ ಕೂಡಲೇ ನಿಮ್ಮ ತಲೆಗೆ ಒಂದಿಷ್ಟು ಖಾದ್ಯಗಳು ನೆನಪಿಗೆ ಬರಬಹುದು. ಆದ್ರೆ ಎಲ್ಲದಕ್ಕಿಂತ ಹೆಚ್ಚಾಗಿ ನಾವು ಸುಲಭವಾಗಿ ಮಾಡಬಹುದಾದ ಖಾದ್ಯ ಅಂದ್ರೆ ಅದು ಅವಲಕ್ಕಿಯಿಂದ ಮಾಡುವಂತಹ ಖಾದ್ಯ ಆಗಿರುತ್ತೆ. ಆದ್ರೆ ಅವಲಕ್ಕಿಯಿಂದ ಎಷ್ಟೊಂದು ಬಗೆಯ ಖಾದ್ಯ ನಾವಿ ಮಾಡಬಹುದು ಎಂಬುದನ್ನು ತಿಳಿದಿದ್ದೇವೆ.

ಅದರಲ್ಲೂ ಒಗ್ಗರಣೆ ಅವಲಕ್ಕಿ, ಅವಲಕ್ಕಿ ಉಸ್ಲಿ ಸೇರಿದಂತೆ ಒಂದಿಷ್ಟು ಅವಲಕ್ಕಿ ಖಾದ್ಯ ಮಾಡಿ ಸವಿದಿರುತ್ತೇವೆ, ಹಾಗೆ ನಾವಿಂದು ಅವಲಕ್ಕಿಯಿಂದ ಮಾಡುವಂತಹ ಕೆಂಪು ಅವಲಕ್ಕಿ ಒಗ್ಗರಣೆ ಮಾಡುವ ಕುರಿತು ತಿಳಿದುಕೊಳ್ಳೋಣ. ಇದೇನು ಕೆಂಪು ಅವಲಕ್ಕಿ ಎಂಬ ನಿಮ್ಮ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರವಿದೆ ನೋಡಿ.
ಹಾಗಾದ್ರೆ ಈ ಕೆಂಪು ಅವಲಕ್ಕಿ ಒಗ್ಗರಣೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಅವಲಕ್ಕಿ ಖಾದ್ಯ ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಕುರಿತ ಎಲ್ಲಾ ವಿಚಾರಗಳನ್ನು ನಾವಿಂದು ತಿಳಿದುಕೊಳ್ಳೋಣ.
ಕೆಂಪು ಅವಲಕ್ಕಿ ಒಗ್ಗರಣೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕೆಂಪು ಅವಲಕ್ಕಿ - 2 ಕಪ್
- ಜೀರಿಗೆ - 1/4 ಟೀಸ್ಪೂನ್
- ಸಾಸಿವೆ - 1/4 ಟೀಸ್ಪೂನ್
- ನೆಲಗಡಲೆ
- ಉದ್ದಿನ ಬೇಳೆ
- ಕಡಲೆ ಬೇಳೆ
- ಇಂಗು
- ಈರುಳ್ಳಿ - 2
- ಒಣ ಮೆಣಸಿನಕಾಯಿ - 2
- ಶುಂಠಿ - 1 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 4
- ಕರಿಬೇವು
- ಕೊತ್ತಂಬರಿ ಸೊಪ್ಪು
- ತೆಂಗಿನ ತುರಿ
- ನಿಂಬೆ ರಸ
- ತುಪ್ಪ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕೆಂಪು ಅವಲಕ್ಕಿ ಒಗ್ಗರಣೆ ಮಾಡುವ ವಿಧಾನವೇನು?
ಅಂಗಡಿಯಲ್ಲಿ ಕೆಂಪು ಅವಲಕ್ಕಿ ಸಿಗುತ್ತದೆ. ಇದು ಉಳಿದ ಅವಲಕ್ಕಿಗಿಂತ ನಿfಮ ಆರೋಗ್ಯಕ್ಕೆ ಉತ್ತಮ ಇದನ್ನು 2 ಕಪ್ ತೆಗೆದುಕೊಂಡು ಒಂದು ಬೌಲ್ಗೆ ಹಾಕಿಕೊಂಡು ಚೆನ್ನಾಗಿ ತೊಳೆದು ಬಳಿಕ ನೆನೆಯಲು ಬಿಡಬೇಕು. ಸುಮಾರು 10 ನಿಮಿಷ ಆದರು ನೆನೆಯಬೇಕು.
ಈಗ ಮತ್ತೊಂದು ಕಡೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಳ್ಳಿ. ನಂತರ ಸಾಸಿವೆ, ಜೀರಿಗೆ, ಕಡಲೆ ಬೀಜ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಇಂಗು ಹಾಕಿ ಮಿಕ್ಸ್ ಮಾಡಿ. ಅನಂತರ ಒಣ ಮೆಣಸು, ಶುಂಠಿ, ಹಸಿ ಮೆಣಸು, ಸಣ್ಣದಾಗಿ ಕತ್ತರಿಸಿಕೊಂಡಿರು ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಉಪ್ಪು ಹಾಕಿಕೊಂಡು 3 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ನೆನೆಸಿಟ್ಟಿರುವ ಅವಲಕ್ಕಿಯನ್ನು ಇದಕ್ಕೆ ಹಾಕಿಕೊಂಡು ಸ್ವಲ್ಪ ತೆಂಗಿನ ತುರಿಯನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿಕೊಳ್ಳುತ್ತಾ ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಮಿಕ್ಸ್ ಮಾಡುತ್ತಾ ಇರಿ.
ಅನಂತರ ಒಲೆ ಆಫ್ ಮಾಡಿಕೊಂಡು ಬೌಲ್ಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕೆಂಪು ಅವಲಕ್ಕಿ ಒಗ್ಗರಣೆ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ, ಇದರ ರುಚಿ ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯುತ್ತೀರಿ.



Click it and Unblock the Notifications
