Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪಪ್ಪಾಯಿ ಕಾಯಿಯಿಂದ ಸುಲಭದಲ್ಲಿ ಮಾಡಬಹುದು ರುಚಿಯಾದ ಹಲ್ವಾ: ನಾಲ್ಕೇ ಸಾಮಗ್ರಿ ಸಾಕು
ಪಪ್ಪಾಯಿ ಕಾಯಿಯಿಂದ ತುಂಬಾನೇ ರುಚಿಯಾದ ಹಲ್ವಾ ಮಾಡಬಹುದು ಎಂಬುವುದು ನಿಮಗೆ ಗೊತ್ತೇ, ಅದರಲ್ಲಿಯೂ ಈ ಹಲ್ವಾ ಅಂತೂ ತುಂಬಾ ಸುಲಭದಲ್ಲಿ ಮಾಡಬಹುದು, ಬನ್ನಿ ಪಪ್ಪಾಯಿ ಕಾಯಿಯಿಂದ ಹಲ್ವಾ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಒಂದು ಕಾಯಿ ಪಪ್ಪಾಯಿ
ಅರ್ಧ ಕೆಜಿ ಬೆಲ್ಲ
ತುಪ್ಪ
200 ಗ್ರಾಂ ಕಾರ್ನ್ಫ್ಲೋರ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ:
ನೀವು ಪಪ್ಪಾಯಿ ಸಿಪ್ಪೆ ಸುಲಿದು ತೊಳೆದು ಚಿಕ್ಕದಾಗಿ ಕತ್ತರಿಸಿ ಕುಕ್ಕರ್ನಲ್ಲಿ
ಹಾಕಿ ಬೇಯಲು ತಕ್ಕ ನೀರು ಹಾಕಿ ಬೇಯಿಸಿ, 2-3 ವಿಶಲ್ ಬರುವವರೆಗೆ ಬೇಯಿಸಿ
ನಂತರ ಕುಕ್ಕರ್ನ ಆವಿ ಸಂಪೂರ್ಣ ಹೋದ ಮೇಲೆ ಪಪ್ಪಾಯಿ ತುಂಡುಗಳನ್ನು ತೆಗೆದು ಒಂದು
ತಟ್ಟೆಯಲ್ಲಿ ಹಾಕಿ, ಅದರಲ್ಲಿರುವ ನೀರಿನಂಶ ಹೋಗುವಂಥ ಪಾತ್ರೆಯಲ್ಲಿ ಹಾಕಿಡಿ ಅಥವಾ
ನೀರನ್ನು ಸೋಸಿ ಬೆಂದ ಪಪ್ಪಾಯಿಯನ್ನು ತಟ್ಟೆಯಲ್ಲಿ ಹಾಕಿಡಿ
ಇದೇ ಸಮಯದಲ್ಲಿ ನೀವು ಬೆಲ್ಲವನ್ನು ಕರಗಿಸಿ, ಬೆಲ್ಲದ ಪಾಕ ಮಂದವಾಗಿರಲಿ
ಪಪ್ಪಾಯಿ ತಣ್ಣಗಾದ ಮೇಲೆ ನೀವು ಮಿಕ್ಸಿ ಜರ್ಗೆ ಹಾಕಿ ರುಬ್ಬಿ
ಈಗ ನೀವು ಪ್ಯಾನ್ಗೆ 2-3 ಚಮಚ ತುಪ್ಪ ಹಾಕಿ
ನಂತರ ರುಬ್ಬಿದ ಪಪ್ಪಾಯಿ ಹಾಕಿ
ಒಂದು 5 ನಿಮಿಷ ಬಿಸಿ ಮಾಡುವಷ್ಟರಲ್ಲಿ ಮೆತ್ತಗಾಗುತ್ತದೆ, ಅದರಲ್ಲಿ ಬೆಲ್ಲದ ಪಾಕ
ಹಾಕಿ ಮಿಕ್ಸ್ ಮಾಡಿ, ಆಗಾಗ ಸೌಟ್ನಿಂದ ಆಡಿಸುತ್ತಾ ಇರಿ. ನಂತರ 200 ಗ್ರಾಂ
ಕಾರ್ನ್ಫ್ಲೋರ್ಗೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಹಲ್ವಾ ಜೊತೆ
ಸೇರಿಸಿ ಮಿಕ್ಸ್ ಮಾಡಿ.
ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಆವಾಗ ನೀವು ಮತ್ತೆ ಸ್ವಲ್ಪ ತುಪ್ಪ ಸೇರಿಸಿ,
ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ
ಹಲ್ವಾ ಸೌಟ್ನಿಂದ ಆಡಿಸುವಾಗ ಅದರ ತಳ ಬಿಟ್ಟು ಬರುವಾಗ ಹಲ್ವಾ ರೆಡಿಯಾಗಿದೆ
ಎಂದರ್ಥ.
ಈಗ ನೀವು ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಹಲ್ವಾ ಸುರಿದು ಸ್ಪೂನ್ನಿಂದ
ಸೆಟ್ ಮಾಡಿ ಅರ್ಧ ಗಂಟೆ ಬಿಡಿ
ನಂತರ ಕತ್ತರಿಸಿದರೆ ರುಚಿಯಾದ ಹಲ್ವಾ ರೆಡಿ.
ಇತರ ಸಲಹೆ
ಹಣ್ಣಾದ ಪಪ್ಪಾಯಿ ಬಳಸಬೇಡಿ
ಹಸಿ ಅಥವಾ ಬಲಿತ ಪಪ್ಪಾಯಿ ಬಳಸಬಹುದು
ಬೆಲ್ಲದ ಪುಡಿ ಅಥವಾ ಬೆಲ್ಲ ಬಳಸಬಹುದು
ಡ್ರೈ ಫ್ರೂಟ್ಸ್ ಗೋಡಂಬಿ, ದ್ರಾಕ್ಷಿ, ಪಿಸ್ತಾ ಅಂತ ಏನಿದೆಯೋ ಅದನ್ನು
ಬಸಬಹುದು.
ಅರ್ಧ ಗಂಟೆಯಲ್ಲಿ ಹಲ್ವಾ ರೆಡಿಯಾಗುತ್ತೆ.



Click it and Unblock the Notifications
