Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಸೀಸನ್ನಲ್ಲಿ ಸವಿಯಲೇಬೇಕಾದ ತಿಂಡಿ: ಹಲಸಿನಕಾಯಿ ವಡೆ
ಆಯಾ ಸೀಸನ್ ಗೆ ಸಿಗುವ ಹಣ್ಣು, ತರಕಾರಿಗಳನ್ನು ಬಳಸಿ ಅಡುಗೆ ಮಾಡುವ ಮತ್ತು ಅದನ್ನು ಸುವಿಯುವ ಮಜವೇ ಬೇರೆ. ಅದರಲ್ಲೂ ಮಾವಿನ ಕಾಯಿ ಮತ್ತು ಹಲಸಿನ ಹಣ್ಣಿನ ಸೀಸನ್ ಅಂದ್ರೆ ಕರ್ನಾಟಕದವರಿಗಂತೂ ಹಬ್ಬ.
ಹಲವಾರು ವಿಧದ ತಿಂಡಿ ತಿನಿಸುಗಳು ಈ ಹಣ್ಣುಗಳಿಂದ ಸಿದ್ಧವಾಗುತ್ತವೆ. ಇವತ್ತು ನಾವು ಹಲಸಿನ ಕಾಯಿ ತೊಳೆಯಿಂದ ಮಾಡಬಹುದಾದ ಒಂದು ರುಚಿಕರ ವಡೆ ರೆಸಿಪಿ ನೋಡೋಣ. ಇದು ಮಾಡೊಕೆ ತುಂಬಾನೇ ಸುಲಭ. ತಿನ್ನಕ್ಕೆ ಅದ್ಭುತ ರುಚಿ. ಹಾಗಾದರೆ ಹಲಸಿನ ಕಾಯಿ ವಡೆ ಮಾಡುವುದು ಹೇಗೆ ನೋಡೋಣ.

ಬೇಕಾಗುವ ಸಾಮಗ್ರಿಗಳು:
ಹಲಸಿನ ಕಾಯಿ ತೊಳೆ - ಎರಡು ದೊಡ್ದ ಬೌಲ್
ಅಕ್ಕಿ - ಒಂದು ದೊಡ್ದ ಬೌಲ್
ಹಸಿಮೆಣಸು - 5-6
ಉಪ್ಪು -ರುಚಿಗೆ ತಕ್ಕಷ್ಟು
ಫ್ರೆಶ್ ತೆಂಗಿನ ಕಾಯಿ ತುರಿ - ಅರ್ಧ ಬೌಲ್
ಮಾಡುವ ವಿಧಾನ: ಮೊದಲಿಗೆ ಒಂದು ಬೌಲ್ ಅಕ್ಕಿಯನ್ನು ಸ್ವಲ್ಪ ಡ್ರೈ ರೋಸ್ಟ್ ಮಾಡಿಕೊಳ್ಳಿ. ಬಿಸಿ ಬಾಣಲೆಗೆ ಅಕ್ಕಿಯನ್ನು ಹಾಕಿ ಐದರಿಂದ ಏಳು ನಿಮಿಷ ಹುರಿದರೆ ಸಾಕು. ನಂತರ ಅಕ್ಕಿಯನ್ನು ಹದಿನೈದು ನಿಮಿಷಗಳವರೆಗೆ ನೀರಿನಲ್ಲಿ ನೆನೆಸಿಡಿ.
ಈಗ ಹಲಸಿನ ತೊಳೆಯನ್ನು ಬಿಡಿಸಿ, ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಮಿಸ್ಕರ್ ಜಾರ್ ಗೆ ನೆನೆಸಿಟ್ಟ ಅಕ್ಕಿ, ಹೆಚ್ಚಿಟ್ಟುಕೊಂಡ ಹಲಸಿನ ತೊಳೆ, ಅರ್ಧ ಬೌಲ್ ತುರಿದ ತೆಂಗಿನ ಕಾಯಿ, ಹಸಿಮೆಣಸು (ಖಾರ ಜಾಸ್ತಿ ಬೇಕಿದ್ದರೆ ಒಣ ಮೆಣಸನ್ನೂ ಸೇರಿಸಿ, ರುಚಿ ಚೆನ್ನಾಗಿರುತ್ತದೆ) ಮತ್ತು ಉಪ್ಪನ್ನು ಸೇರಿಸಿ, ನುಣ್ಣಗೆ ರುಬ್ಬಿ. ಹಿಟ್ಟು ಹದವಾಗಿರಬೇಕು. ತುಂಬಾ ತೆಳ್ಳಗೆ ಆಗಬಾರದು. ಹೀಗೆ ರುಬ್ಬುವಾಗ ನೀರನ್ನು ಹಾಕಬಾರದು. ನೀರು ಬಳಸಿದರೆ ವಡೆ ಮಾಡಲು ಬರುವುದಿಲ್ಲ.

ಈಗ ಒಂದು ಬಾಣಲೆಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಅದು ಬಿಸಿಯಾದ ನಂತರ, ರುಬ್ಬಿದ ಹಿಟ್ಟನ್ನು ಕೈನಲ್ಲಿ ವಡೆ ಶೇಪ್ ಮಾಡಿ (ಕೈಗೆ ಸ್ವಲ್ಪ ಎಣ್ಣೆ ಸವರಿಕೊಳ್ಳಿ. ಹಿಟ್ಟು ಕೈಗೆ ಹಿಡಿಯುವುದಿಲ್ಲ) ಅಥವಾ ಬಾಳೆ ಎಲೆಯಲ್ಲಿ ಹಾಕಿ, ನಂತರ ಬಾಣಲೆಗೆ ಬಿಡಿ. ಇದನ್ನು ಹೊಂಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ. ನಂತರ ಬೇರೆ ಪಾತ್ರೆಗೆ ಹಾಕಿ.

ಇಷ್ಟು ಮಾಡಿದರೆ ಬಿಸಿ ಬಿಸಿಯಾದ ಹಲಸಿನ ಕಾಯಿ ವಡೆ ಸವಿಯಲು ಸಿದ್ದ. ಬಿಸಿ ಬಿಸಿಯಾದ ವಡೆಯನ್ನು ಸಂಜೆ ಸ್ನಾಕ್ಸ್ ಆಗಿ ಅಥವಾ ಬೆಳಗಿನ ಬ್ರೇಕ್ ಫಾಸ್ಟ್ ಗೂ ಸವಿಯಬಹುದು. ಟೊಮ್ಯಾಟೋ ಸಾಸ್ ಅಥವಾ ಗ್ರೀನ್ ಚಟ್ನಿ ಜೊತೆ ಸವಿಯಲು ಸಕ್ಕತ್ ರುಚಿಯಾಗಿರುತ್ತದೆ. ತಪ್ಪದೇ ಟ್ರೈ ಮಾಡಿ.



Click it and Unblock the Notifications
