Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ನೀವು ಬೆಳಗ್ಗೆ ಬ್ರೇಕ್ ಫಾಸ್ಟ್ ಸಮಯಕ್ಕೆ ರುಚಿ ರುಚಿಯಾದ ತಿಂಡಿ ಸವಿಯಲು ಬಯಸಬಹುದು. ಹಾಗೆ ಇಡ್ಲಿ, ವಡೆ ಸವಿಯೋದು ಅಂದ್ರೆ ಕೂಡ ಬಹಳ ಜನರಿಗೆ ಇಷ್ಟವಾಗುತ್ತೆ. ಸಾಮಾನ್ಯವಾಗಿ ಹೋಟೆಲ್ಗೆ ತೆರಳಿದ ಸಂದರ್ಭದಲ್ಲಿ ಹಲವರು ವಡೆಯನ್ನು ಸವಿಯಲು ಬಯಸುತ್ತಾರೆ. ಸಾಂಬಾರ್ನೊಂದಿಗೆ ವಡೆ ಸವಿಯುವುದು ಅಂದ್ರೆ ಬಹುತೇಕರು ಇಷ್ಟಪಡುತ್ತಾರೆ. ಹಾಗೆ ವಡೆ ಮಾಡುವುದು ಬಹಳ ಸುಲಭ ಅನ್ನೋದನ್ನು ಹಲವರು ತಿಳಿದಿರೋದಿಲ್ಲ.
ವಡೆ ಮಾಡಿಕೊಳ್ಳಲು ಉದ್ದು ನೆನೆಸಿಟ್ಟು ಹಿಟ್ಟು ರುಬ್ಬಿಕೊಂಡು ಒಂದು ದಿನ ಇಟ್ಟು ವಡೆ ಮಾಡಬೇಕು ಎಂಬುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದ್ರೆ ನಾವಿಂದು ಸುಲಭವಾಗಿ 1 ಕಪ್ ರವೆ ಬಳಸಿಕೊಂಡು ಥಟ್ ಅಂತ ರುಚಿ ರುಚಿಯಾದ ವಡೆ ಮಾಡುವುದು ಹೇಗೆ ಅನ್ನೋದನ್ನು ಹೇಳಲಿದ್ದೇವೆ. ಹೌದು 1 ಕಪ್ ರವೆಯನ್ನು ಬಳಸಿಕೊಂಡು ಥಟ್ ಅಂತ ಈ ವಡೆ ಮಾಡಬಹುದು.

ವಡೆ ಅಂದ್ರೆ ಎಲ್ಲರು ಇಷ್ಟಪಟ್ಟು ಸವಿಯುವ ತಿಂಡಿ, ಹಾಗೆ ಮಾಡೋದು ಬಹಳ ಸುಲಭ. ಹಾಗಾದ್ರೆ ಉದ್ದು ಬಳಸದೆಯೇ ಬರೀ ರವೆ ಬಳಸಿಕೊಂಡು ವಡೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ. ಸುಲಭದ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ವಡೆ ಮಾಡಲು ಬೇಕಾಗುವ ವಸ್ತುಗಳು
- ರವೆ
- ಉಪ್ಪು
- ಎಣ್ಣೆ ಅಥವಾ ತುಪ್ಪ
- ಅಕ್ಕಿ ಹಿಟ್ಟು
ರವೆ ವಡೆ ಮಾಡುವ ಸುಲಭದ ವಿಧಾನವೇನು?
ವಡೆ ಮಾಡಿಕೊಳ್ಳಲು ಮೊದಲಿಗೆ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 4 ಕಪ್ ನೀರು ಹಾಕಿಕೊಂಡು ಬಿಸಿಯಾಗಲು ಬಿಡಿ. ನೀರು ಬಿಸಿಯಾಗುವಾಗ ಉಪ್ಪು, ತುಪ್ಪ ಅಥವಾ ಎಣ್ಣೆ ಸೇರಿಸಿಕೊಳ್ಳಿ. ಅನಂತರ ಇದಕ್ಕೆ 2 ಕಪ್ ರವೆಯನ್ನು ತೆಗೆದುಕೊಂಡು ಕುದಿಯುತ್ತಿರುವ ನೀರಿಗೆ ಹಾಕಿಕೊಂಡು ಮಿಕ್ಸ್ ಮಾಡಬೇಕು. ಉಪ್ಪಿಟ್ಟು ರವೆ ಹಾಕುತ್ತಾ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡಬೇಕು. ಗಂಟುಗಳು ಇಲ್ಲದಂತೆ ಮಿಶ್ರಣ ಮಾಡಿ. ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಿ ಇಡಿ.
1 ನಿಮಿಷ ಇಟ್ಟುಕೊಂಡು ಬಳಿಕ ಒಮ್ಮೆ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ. ಕೈಯಲ್ಲಿ ಮುಟ್ಟುವಷ್ಟು ತಣ್ಣಗಾಗಬೇಕು. ಈಗ ಈ ರವೆ ಹಿಟ್ಟನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹದ ಮಾಡಿಕೊಳ್ಳಬೇಕು. ಈ ಹಿಟ್ಟು ಮೃದುವಾಗಿ ಬರಬೇಕು. ಇದು ತೆಳು ಎನಿಸಿದರೆ ಅಕ್ಕಿ ಹಿಟ್ಟು ಹಾಕಿ ಹದ ಸರಿ ಮಾಡಿಕೊಳ್ಳಿ. ಈ ಹಿಟ್ಟು ಸ್ವಲ್ಪ ಗಟ್ಟಿಯಾಗಿ ಬರಬೇಕು. ಹದ ಮಾಡಲು ಹಲವು ಸಹ ಮಿಕ್ಸ್ ಮಾಡಿ.
ಈ ಹಿಟ್ಟು ಉಂಡೆ ಕಟ್ಟಲು ಬರಬೇಕು. ಆ ಹದಕ್ಕೆ ಮಿಕ್ಸ್ ಮಾಡಿ. ಈಗ ಉಂಡೆ ಕಟ್ಟಿಕೊಂಡು ಮಧ್ಯದಲ್ಲಿ ತೂತು ಮಾಡಿಕೊಳ್ಳಿ. ಮೊದಲು ಎಲ್ಲಾ ವಡೆಗಳನ್ನು ಈ ರೀತಿ ತಟ್ಟಿಕೊಂಡು ಬಳಿಕ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ 3ರಿಂದ 4 ವಡೆಗಳನ್ನು ಒಂದೇ ಬಾರಿಗೆ ಕರಿದುಕೊಳ್ಳಿ. ವಡೆ ಚೆನ್ನಾಗಿ ಕರಿದುಕೊಳ್ಳಬೇಕು.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ರವೆ ವಡೆ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲೀ ಈ ರೀತಿಯ ವಿಧಾನದಲ್ಲಿ ವಡೆ ತಯಾರಿಸಿ ನೋಡಿ. ಇದು ಎಲ್ಲರಿಗೂ ಇಷ್ಟವಾಗುವಂತಹ ವಡೆ ಆಗಿರಲಿದೆ.



Click it and Unblock the Notifications
