Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರಿ ಗರಿಯ ರವೆ ವಡೆ ಮಾಡೋದು ಹೇಗೆ ಗೊತ್ತಾ? ಬೊಂಬಾಟ್ ರುಚಿ ನೀಡುತ್ತೆ..!!
ನೀವು ಸಂಜೆ ಸಮಯದಲ್ಲಿ ಸವಿಯಲೆಂದು ಹಲವು ಬಗೆಯ ಕರಿದ ತಿಂಡಿಗಳ ಮಾಡುತ್ತಿರಬಹುದು. ಇಲ್ಲವೆ ಹೊರಗಿನಿಂದ, ಅಂಗಡಿಗಳಿಂದ ಖರೀದಿಸಿ ತಂದು ಸವಿಯುವ ಅಭ್ಯಾಸ ಕೂಡ ಇಟ್ಟುಕೊಂಡಿರುತ್ತೀರಿ. ಟೀ ಕಾಫಿ ಜೊತೆಗೆ ಮಾತ್ರವಲ್ಲ ಊಟದ ಜೊತೆಗೂ ಸಹ ಕರಿದ ತಿಂಡಿಗಳ ಸವಿಯಲು ನೀವು ಇಷ್ಟಪಡುತ್ತಿರುತ್ತೀರಿ. ಅದರಲ್ಲಿ ಹೆಚ್ಚಾಗಿ ಬೋಂಡಾ, ಬಜ್ಜಿ, ವಡೆಗಳ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲೂ ನೀರು ಬರಬಹುದು.
ಇನ್ನು ರಸ್ತೆ ಬದಿಯಲ್ಲಿ ಸಿಗುವಂತಹ ವಿವಿಧ ಬಗೆಯ ತಿಂಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಹೀಗಾಗಿ ಸಂಜೆ ಸಮಯದಲ್ಲಿ ಈ ಅಂಗಡಿಗಳ ಮುಂದೆ ಜನರು ಸಾಲಿಗಟ್ಟಿ ನಿಂತಿರುತ್ತಾರೆ ಹಾಗೆ ಈ ಅಂಗಡಿಯಲ್ಲಿ ನೀಡುವ ವಡೆಗಳಂತು ಬಾಯಲ್ಲಿ ನೀರು ತರಿಸುತ್ತವೆ. ಇನ್ನು ಈ ಮಸಾಲೆ ವಡೆಗಳಲ್ಲಿ ಹತ್ತಾರು ಬಗೆಗಳಿವೆ. ಕಡಲೆಗಳ ಹಾಕಿ ಮಾಡುವಂತಹ ವಡೆ ತುಂಬಾನೆ ಫೇಮಸ್.

ಹಾಗಾದ್ರೆ ನಾವಿಂದು ಈ ವಡೆಯಲ್ಲಿ ಗರಿ ಗರಿಯಾಗಿ ಕ್ರಿಸ್ಪಿಯಾಗಿ ಮಾಡುವಂತಹ ರವೆ ವಡೆಯ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ರೀತಿ ರವೆ ವಡೆಯನ್ನು ಬೆಳಗ್ಗೆ ತಿಂಡಿಯ ಜೊತೆಗೆ ಸವಿಯಲು ನೀಡಬಹುದು, ಸಂಜೆ ಸ್ನ್ಯಾಕ್ಸ್ ಸಮಯದಲ್ಲೂ ಅತ್ಯುತ್ತಮ ರುಚಿ, ಹಾಗೆ ಊಟದ ಜೊತೆಗೂ ಇದು ರುಚಿ ಹೆಚ್ಚಿಸುತ್ತೆ. ಹಾಗಾದ್ರೆ ನಾವಿಂದು ಈ ರವೆ ವಡೆ ಮಾಡುವ ಕುರಿತು ತಿಳಿಯೋಣ.
ಸ್ನ್ಯಾಕ್ಸ್ ಸಮಯಕ್ಕೆ ಮಾಡುವಂತಹ ಈ ರವೆ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ವಡೆ ಮಾಡಲು ಬೇಕಾಗುವ ವಸ್ತುಗಳು
- ಮೀಡಿಯಂ ರವೆ- 250 ಗ್ರಾಮ್
- ಈರುಳ್ಳಿ-2
- ಮೊಸರು- ಅರ್ಧ ಕಪ್
- ತೆಂಗಿನಕಾಯಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
- ಶುಂಠಿ
- ಎಣ್ಣೆ
- ಸೋಡಾ
- ಉಪ್ಪು
ರವೆ ವಡೆ ಮಾಡುವ ವಿಧಾನವೇನು?
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ, ಮೊಸರು, ಸಣ್ಣದಾಗಿ ಹೆಚ್ಚಿಕೊಂಡಿರುವ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿ ಮೆಣಸು, ತುರಿದ ಶುಂಠಿ, ಉಪ್ಪು, ಅಡುಗೆ ಸೋಡಾ ಕೂಡ ಇದಕ್ಕೆ ಹಾಕಿಕೊಳ್ಳಬೇಕು. ಬಳಿಕ ಒಂದು ಸ್ಪೂನ್ ಎಣ್ಣೆ ಹಾಕಿ ಕೈಯಿಂದ ಚೆನ್ನಾಗಿ ಕಲಸಿಕೊಳ್ಳಬೇಕು. ಕೊನೆಯದಾಗಿ ಇದಕ್ಕೆ ಮೀಡಿಯಂ ರವೆ ಹಾಕಿ.
ರವೆ ಹಾಕಿದ ಬಳಿಕ ಚೆನ್ನಾಗಿ ಕಲಸಿಕೊಳ್ಳಬೇಕು, ಎಲ್ಲಾ ವಸ್ತುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ಅನಂತರ ಒಂದು ತಟ್ಟೆ ಮುಚ್ಚಿ 10 ನಿಮಿಷ ನೆನೆಯಲು ಬಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಕಾಯಲು ಬಿಟ್ಟು ಅದೇ ಸಮಯದಲ್ಲಿ ಹಿಟ್ಟನ್ನು ತೆಗೆದುಕೊಂಡು ಒಂದು ನಿಂಬೆ ಹಣ್ಣಿನ ಗಾತ್ರಕ್ಕೆ ಹಿಟ್ಟನ್ನು ಉಂಡೆ ಮಾಡಿಟ್ಟುಕೊಳ್ಳಿ.
ಎಣ್ಣೆ ಕಾದ ಬಳಿಕ ಈ ಉಂಡೆಯನ್ನು ಒಂದೊಂದಾಗಿ ತೆಗೆದುಕೊಂಡು ವಡೆ ರೀತಿ ನಯವಾಗಿ ತಟ್ಟಿಕೊಳ್ಳಬೇಕು. ಕೈ ಮೇಲೆ ಇಟ್ಟುಕೊಂಡು ತಟ್ಟಿಕೊಳ್ಳಬಹುದು. ಹಾಗೆ ಒಂದೊಂದಾಗಿ ಎಣ್ಣೆಗೆ ಹಾಕಿ ಒಟ್ಟಿಗೆ 5ರಿಂದ 6 ವಡೆ ಕರಿದುಕೊಳ್ಳಬಹುದು. ಸಣ್ಣ ಉರಿಯಲ್ಲಿ 5 ನಿಮಿಷ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿ ರುಚಿಯ ಈ ರವೆ ವಡೆ ಸಿದ್ದವಾಗುತ್ತೆ.



Click it and Unblock the Notifications
