Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
1 ಕಪ್ ರವೆ ಇದ್ರೆ 1 ವರ್ಷಕ್ಕೆ ಬೇಕಾಗುವಷ್ಟು ಸಂಡಿಗೆ ಮಾಡಬಹುದು! ಇಲ್ಲಿದೆ ತಯಾರಿ ವಿಧಾನ!
ಊಟದ ಜೊತೆಗೆ ಸವಿಯಲು ನೀವು ಹಲವು ಸೈಡ್ ಡಿಶ್‌ಗಳ ಬಯಸುತ್ತೀರಿ. ಚಟ್ನಿ, ಪಲ್ಯ, ಹಪ್ಪಳ, ಮೆಣಸು, ಸಂಡಿಗೆ ಹೀಗೆ ಹಲವು ರೀತಿಯ ವಸ್ತುಗಳನ್ನು ನೀವು ಸವಿಯಲು ಬಯಸೋದು ನೋಡಬಹುದು. ಈ ಎಲ್ಲಾ ವಿಧವಾದ ಖಾದ್ಯಗಳು ನಿಮ್ಮ ಊಟದ ರುಚಿಯನ್ನು ಹೆಚ್ಚಿಸೋದಂತು ನಿಜ. ಅದ್ರಲ್ಲೂ ಬಹಳಷ್ಟು ಮಂದಿ ಸಂಡಿಗೆ ಸವಿಯಲು ಮುಂದಾಗೋದು ನೋಡಬಹುದು.
ಅಂಗಡಿಯಲ್ಲಿ ಸಿಗುವ ಸಂಡಿಗೆಯನ್ನು ತಂದು ಮನೆಯಲ್ಲಿ ಮಾಡಿ ಸವಿಯುತ್ತೇವೆ. ಊಟದೊಂದಿಗೆ ಸಂಡಿಗೆ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚಾಗೋದು ನೋಡಬಹುದು. ಹಾಗೆ ರುಚಿ ರುಚಿಯ ಊಟ ಮಾತ್ರವಲ್ಲ ಸಂಜೆ ಸ್ನ್ಯಾಕ್ಸ್ ಟೈಮ್‌ಗೂ ಕೂಡ ಸಂಡಿಗೆ ಸವಿಯಬಹುದು. ಈಗಂತು ಮಾರ್ಕೆಟ್‌ನಲ್ಲಿ ಬಗೆ ಬಗೆಯ ರುಚಿಯ ಸಂಡಿಗೆ ದೊರೆಯುತ್ತವೆ.

ಆದ್ರೆ ನಾವಿಂದು ಮನೆಯಲ್ಲಿಯೇ ನೀವು ಮಾಡಬಹುದಾದ ಸಂಡಿಗೆ ಕುರಿತು ಹೇಳಲಿದ್ದೇವೆ. ಅದ್ರಲ್ಲೂ ಒಂದು ಕಪ್ ರವೆ ಬಳಸಿಕೊಂಡು ಮಾಡುವ ಈ ಸಂಡಿಗೆಯು ವರ್ಷ ಪೂರ್ತಿ ಇಟ್ಟು ಸವಿಯಬಹುದು. ನೀವು ಮಳೆಗಾಲಕ್ಕೂ ಈಗಲೇ ಸಂಡಿಗೆ ರೆಡಿ ಮಾಡಿಕೊಳ್ಳಬಹುದು. ಹಾಗಾದ್ರೆ ರವೆಯಿಂದ ಸಂಡಿಗೆ ಮಾಡುವುದು ಹೇಗೆ?
ರವೆ ಸಂಡಿಗೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರವೆ ಸಂಡಿಗೆ ಮಾಡಲು ಬೇಕಾಗುವ ವಸ್ತುಗಳು?
- ರವೆ- 1 ಕಪ್
- ಅಜ್ವೈನ ಅಥವಾ ಜೀರಿಗೆ
- ಉಪ್ಪು
ರವೆ ಸಂಡಿಗೆ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ರವೆ ತೆಗೆದುಕೊಂಡ ಕಪ್‌ನಲ್ಲಿ 15 ಕಪ್ ನೀರು ಹಾಕಿಕೊಳ್ಳಿ. ನಂತರ ನೀರು ಕುದಿಬರಲು ಬಿಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಅಳತೆ ಕಪ್‌ನಲ್ಲಿ 1 ಕಪ್ ರವೆ ಹಾಕಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾ ಇರಬೇಕು. ಗಂಟು ಇಲ್ಲದಂತೆ 5 ನಿಮಿಷಗಳ ಕಾಲ ಮಿಕ್ಸ್ ಮಾಡುತ್ತಾ ಇರಿ.
ಇದಕ್ಕೆ 1 ಚಮಚ ಅಜ್ವೈನ ಹಾಕಿ ಮಿಶ್ರಣ ಮಾಡಿ. ಅಜ್ವೈನ ಇಲ್ಲದಿದ್ದರೆ ಜೀರಿಗೆ ಸಹ ಹಾಕಿಕೊಳ್ಳಬಹುದು. ಹಾಗೆ ಮಿಶ್ರಣ ಮಾಡುತ್ತಾ ಒಟ್ಟಾರೆ 10 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಅನಂತರ ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ ಇದು ಸ್ವಲ್ಪ ಗಟ್ಟಿಯಾಗುತ್ತದೆ. ಈಗ ಒಂದು ದೊಡ್ಡ ಪ್ಲಾಸ್ಟಿಕ್ ಅಥವಾ ಕಾಟನ್ ಬಟ್ಟೆ ಹರಡಿಕೊಂಡು ಅದರ ಮೇಲೆ ಸಂಡಿಗೆ ಹಾಕಿ.
ಸಂಡಿಗೆಯನ್ನು ಕೈಯಿಂದ ಅಥವಾ ಹಾಲಿನ ಪ್ಲಾಸ್ಟಿಕ್ ಬಳಸಿಕೊಂಡು ಹಾಕಿಕೊಳ್ಳಬಹುದು. ಎಲ್ಲಾ ಸಂಡಿಗೆ ಹಾಕಿದ ಬಳಿಕ ಬಿಸಿಲಿನಲ್ಲಿ ಒಣಗಿಸಬೇಕು ಎಂಬುದಿಲ್ಲ, ನೆರಳಿನ ಜಾಗದಲ್ಲಿ ಒಂದು ದಿನ ಒಣಗಿಸಿಕೊಂಡರೆ ಸಾಕಾಗುತ್ತದೆ. ಮೊದಲು ಒಂದು ಗಂಟೆ ಬಿಸಿಲಿನಲ್ಲಿ ಒಣಗಿಸಿ ಅನಂತರ ಮನೆಯ ಒಳಗೆ ಒಣಗಿಸಿಕೊಳ್ಳಿ.
ಒಣಗಿದ ಬಳಿಕ ಇದನ್ನು ನೀವು ಎಣ್ಣೆಯ ಹಾಕಿಕೊಂಡು ಕರಿದುಕೊಳ್ಳಬಹುದು. ಉಳಿದ ಸಂಡಿಗೆಯನ್ನು ಒಂದು ಸ್ಟೀಲ್ ಡಬ್ಬಿಯಲ್ಲಿ ಹಾಕಿ ಇಟ್ಟರೆ ಒಂದು ವರ್ಷ ಇಡಬಹುದು. ಇದು ಸೋಡಾ ಹಾಕದೆ ಇದ್ದರೂ ಉಬ್ಬಿ ಬರಲಿದೆ. ಊಟದೊಂದಿಗೆ ಮತ್ತಷ್ಟು ರುಚಿ ಬರಲಿದೆ.



Click it and Unblock the Notifications