Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅದ್ಭುತ ರುಚಿಯ ರವೆ ರೊಟ್ಟಿ: 2 ವಸ್ತು ಇದ್ರೆ ಥಟ್ ಅಂತ ರೆಡಿ!
ನೀವು ದೋಸೆ ರೊಟ್ಟಿ ಪ್ರಿಯರಾಗಿದ್ರೆ ಮನೆಯಲ್ಲಿ ಹಲವು ರೀತಿಯ ದೋಸೆ ಮಾಡಿ ಸವಿದಿರುತ್ತೀರಿ. ಹಾಗೆ ಬಗೆ ಬಗೆಯ ರೊಟ್ಟಿಗಳನ್ನು ಬಾಯಿ ಚಪ್ಪರಿಸಿ ಸವಿದಿರುತ್ತೀರಿ. ಹಾಗೆ ಹಲವು ರೀತಿಯ ರೊಟ್ಟಿಗಳನ್ನು ನೀವು ಮನೆಯಲ್ಲಿ ಮಾಡುವುದರ ಜೊತೆಗೆ ಹೋಟೆಲ್ಗಳಲ್ಲಿ ಸವಿಯಲು ಮುಂದಾಗುವುದು ಸಹ ನೋಡಬಹುದು.
ಅದರಂತೆ ನಾವಿಂದು ರೊಟ್ಟಿ ಇಷ್ಟಪಡುವಂತಹ ಮಂದಿಗೆ ರುಚಿ ರುಚಿಯಾಗಿ ಮನೆಯಲ್ಲಿ ಮಾಡುವಂತೆ ವಿಶೇಷ ರವೆ ರೊಟ್ಟಿ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಗೋಧಿ ಹಿಟ್ಟಿನ ರೊಟ್ಟಿ, ಅಕ್ಕಿ ಹಿಟ್ಟಿನ ರೊಟ್ಟಿ, ಜೋಳದ ರೊಟ್ಟಿ ನಿಮ್ಮ ಇಷ್ಟದ ರೊಟ್ಟಿ ಆಗಿರಬಹುದು. ಆದ್ರೆ ರೊಟ್ಟಿ ಸವಿಯಲು ನೀವು ಹೋಟೆಲ್ ಹೋಗುವ ಅವಶ್ಯಕತೆ ಇಲ್ಲ ಮನೆಯಲ್ಲೇ ಮಾಡಬಹುದು.

ರವೆಯಿಂದ ಮಾಡುವ ದೋಸೆ ಕೂಡ ಹಲವರಿಗೆ ಇಷ್ಟವಾಗುತ್ತೆ. ಆದ್ರೆ ಮೃದುವಾದ ಹತ್ತಿಯಂತಹ ರವೆ ರೊಟ್ಟಿ ಮಾಡುವ ಕುರಿತಾಗಿ ನಾವಿಲ್ಲಿ ತಿಳಿದುಕೊಳ್ಳೋಣ. ಈ ರೊಟ್ಟಿಯೊಂದಿಗೆ ಬದನೆಕಾಯಿ ಎಣ್ಣೆಗಾಯಿ, ಶೇಂಗಾ ಚಟ್ನಿ, ಬೆಣ್ಣ ತುಪ್ಪ ಹೀಗೆ ಹತ್ತಾರು ಬಗೆ ಖಾದ್ಯಗಳ ಜೊತೆಗೆ ಸವಿಯಬಹುದು. ಹಾಗಾದ್ರೆ ಇದನ್ನು ಮಾಡುವುದು ಹೇಗೆ?
ರವೆ ರೊಟ್ಟಿ ಮಾಡಲು ಯಾವೆಲ್ಲಾ ಪದಾರ್ಥಗಳಿ ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ರೊಟ್ಟಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ/ ಉಪ್ಪಿಟ್ಟು ರವೆ
- ಉಪ್ಪು
- ಎಣ್ಣೆ
ರವೆ ರೊಟ್ಟಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಒಂದು ಅಳತೆ ಕಪ್ನಲ್ಲಿ ಒಂದು ಕಾಲು ಕಪ್ ನೀರು ಹಾಕಿ ಕುದಿಯಲು ಬಿಡಿ. ಇದಕ್ಕೆ ಉಪ್ಪು ಹಾಗೂ ಎಣ್ಣೆ ಸಹ ಹಾಕಿಕೊಳ್ಳಿ. ಈ ನೀರು ಕುದಿಯಲು ಆರಂಭಿಸಿದಾಗ ಇದಕ್ಕೆ ಅದೇ ಕಪ್ನಲ್ಲಿ 1 ಕಪ್ನಷ್ಟು ಚಿರೋಟಿ ರವೆ ಹಾಕಿಕೊಳ್ಳಿ. ಉಪ್ಪಿಟ್ಟು ರವೆ ಇದ್ದರೆ ಮಿಕ್ಸಿ ಜಾರ್ಗೆ ಹಾಕಿಕೊಂಡು ಪುಡಿ ಮಾಡಿಕೊಂಡು ಬಳಸಬಹುದು.
ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. ಇದು ಗಟ್ಟಿಯಾಗಲು ಆರಂಭಿಸಲಿದೆ. ನೀರು ಸಂಪೂರ್ಣ ಆವಿಯಾದಾಗ ಒಲೆ ಆಫ್ ಮಾಡಿ 1 ನಿಮಿಷ ಬಿಟ್ಟು ಹದ ಮಾಡಿಕೊಳ್ಳಿ. ಗಂಟು ಇಲ್ಲದಂತೆ ಕೈಯಿಂದ ಕಲಸಿಕೊಳ್ಳಬೇಕು. ನುಣ್ಣಗೆ ಹಾಗೆ ಮೃದುವಾಗಿ ಈ ಹಿಟ್ಟಿನ ಮಿಶ್ರಣ ಬರಬೇಕು. ಹಾಗೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಹಿಟ್ಟು ರೆಡಿಯಾಗುತ್ತದೆ.
ಈಗ ಒಣ ಇಟ್ಟಿನಲ್ಲಿ ನಿಂಬೆ ಗಾತ್ರದ ಈ ಹಿಟ್ಟನ್ನು ಚೆನ್ನಾಗಿ ಹೊರಳಾಡಿಸಿ ಚಪಾತಿ ಮಣೆಯಲ್ಲಿ ಲಟ್ಟಿಸಿಕೊಳ್ಳಬೇಕು. ಬಹಳ ಮೃದುವಾಗಿ ಲಟ್ಟಿಸಬೇಕು ಚಪಾತಿಗಿಂತ ತೆಳುವಾಗಿ ಹಾಗೆ ದೊಡ್ಡದಾಗಿ ಲಟ್ಟಿಸಿಕೊಳ್ಳಿ. ನಂತರ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಾಕದೆಯೇ ಬಿಸಿ ಮಾಡಬಹುದು. ಕಬ್ಬಿಣದ ಕಾವಲಿ ಇದ್ದರೆ ಬಹಳ ಉತ್ತಮ.
ಇಷ್ಟಾದರೆ ನಿಮ್ಮ ಮುಂದೆ ರೊಟ್ಟಿ ರೆಡಿಯಾಗುತ್ತದೆ, ನೀವು ಸಹ ಬಹಳ ಸುಲಭವಾಗಿ ಎರಡು ವಸ್ತು ಇದ್ದರೆ ಇದನ್ನು ಮಾಡಬಹುದು. ಬೆಳಗ್ಗಿನ ತಿಂಡಿಗೆ ಇದು ಹೇಳಿ ಮಾಡಿಸಿದ ಖಾದ್ಯ. ಎಲ್ಲರಿಗೂ ಇಷ್ಟವಾಗುತ್ತೆ ಕೂಡ.



Click it and Unblock the Notifications
