Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಖತ್ ರುಚಿ ನೀಡುವ ರವೆ ರೊಟ್ಟಿ ಮಾಡಿದ್ದೀರಾ?: ಎಷ್ಟು ಸುಲಭ ಗೊತ್ತಾ?
ನೀವು ಬೆಳಗ್ಗೆ ತಿಂಡಿ ಮಾಡುವಾಗ ವಿಶೇಷವಾಗಿ ಯಾವುದಾದರೊಂದು ಖಾದ್ಯ ಮಾಡಿ ಸವಿಯಬೇಕು ಎಂಬ ಬಯಕೆ ಇದ್ದೇ ಇರುತ್ತೆ. ಅದರಲ್ಲೂ ನಿತ್ಯ ಒಂದೇ ರೀತಿಯ ತಿಂಡಿಗಳ ಸವಿಯುವುದಕ್ಕಿಂತ ಒಂದು ದಿನವಾದರು ವಿಶೇಷವಾದ ಖಾದ್ಯ ಮಾಡಿ ಸವಿಯುವುದು ಎಲ್ಲರ ಆಸೆ. ಆದ್ರೆ ಯಾವ ತಿಂಡಿಯನ್ನು ಹೇಗೆ ವಿಶೇಷವಾಗಿ ಮಾಡಬೇಕು ಎಂಬುದು ಮಾತ್ರವೇ ದೊಡ್ಡ ಪ್ರಶ್ನೆಯಾಗಿರುತ್ತೆ.
ಇಂತಹ ವಿಶೇಷ ತಿಂಡಿ ಮಾಡಿ ಸವಿಯಬೇಕು ಎಂಬ ಬಯಕೆ ಇಟ್ಟುಕೊಂಡಿರುವವರಿಗೆ ನಾವಿಂದು ರವೆ ರೊಟ್ಟಿ ಮಾಡುವ ಕುರಿತು ಹೇಳಲಿದ್ದೇವೆ. ನೀವು ರೊಟ್ಟಿಯಲ್ಲಿ ಹಲವು ಬಗೆ ಮಾಡಿ ಸವಿದಿರಬಹುದು, ಅಕ್ಕಿ, ಗೋಧಿ, ರಾಗಿ, ಜೋಳ ಹೀಗೆ ಒಂದಿಷ್ಟು ರೊಟ್ಟಿಯ ಬಗೆಯನ್ನು ಸವಿದು ಅದರ ರುಚಿ ನೋಡಿರುತ್ತೀರಿ. ಕೆಲವೊಂದು ರೊಟ್ಟಿ ಮಾಡುವುದು ಕೂಡ ತುಂಬಾನೆ ಸುಲಭ.

ಇನ್ನು ರೊಟ್ಟಿಗಳಲ್ಲಿ ರುಚಿ ರುಚಿಯ ರೊಟ್ಟಿಗಳು, ಅದಕ್ಕೆ ಸವಿಯಲು ನೀಡುವ ಚಟ್ನಿ, ಪಲ್ಯಗಳು ಕೂಡ ರೊಟ್ಟಿಯಂದಲೇ ಫೇಮಸ್ ಆಗಿರುತ್ತವೆ. ಇಂತಹ ರೊಟ್ಟಿಗಳ ಸಾಲಿಗೆ ನಾವಿಂದು ಈ ರವೆ ರೊಟ್ಟಿ ಸಹ ಸೇರಿಸಿ ಅದನ್ನೂ ಮಾಡುವುದು ಹೇಗೆ ಎಂಬುದನ್ನ ತಿಳಿದುಕೊಳ್ಳೋಣ. ರವೆ ರೊಟ್ಟಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹಿಟ್ಟು ಮಾಡಿಕೊಳ್ಳುವುದು ಹೇಗೆ? ಎಷ್ಟು ಸಮಯದಲ್ಲಿ ಮಾಡಬಹುದು ಎಂಬೆಲ್ಲಾ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ರವೆ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು
- ಚಿರೋಟಿ ರವೆ - 1 ಕಪ್
- ಈರುಳ್ಳಿ- 1
- ಮೊಸರು - ಅರ್ಧ ಕಪ್
- ಕ್ಯಾರೆಟ್ ತುರಿ
- ಸಬ್ಬಕ್ಕಿ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನಕಾಯಿ
- ಬಿಳಿ ಎಳು
- ಜೀರಿಗೆ
- ಉಪ್ಪು
- ಎಣ್ಣೆ
ರವೆ ರೊಟ್ಟಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ, ತುರಿದ ಕ್ಯಾರೆಟ್, ಸಬಕ್ಕಿ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಬಿಳಿ ಎಳ್ಳು, ಜೀರಿಗೆ, ಉಪ್ಪು ಸಹ ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ಮೊಸರು, ಚಿರೋಟಿ ರವೆಯನ್ನು ಕೂಡ ಇದಕ್ಕೆ ಸೇರಿಸಿಕೊಳ್ಳಬೇಕು. ಅನಂತರ ಕೈಯಿಂದ ಚೆನ್ನಾಗಿ ಕಲಸಿಕೊಳ್ಳಬೇಕು.
ಹೀಗೆ ಕಲಸಿಕೊಳ್ಳುವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಕಲಸಿಕೊಳ್ಳಬೇಕು. ತುಂಬಾ ತೆಳುವಾಗಿ ಹಿಟ್ಟು ಮಾಡಿಕೊಳ್ಳಬೇಡಿ. ಅನಂತರ ಒಂದು ತಟ್ಟೆ ಮುಚ್ಚಿ 15 ನಿಮಿಷ ಈ ಹಿಟ್ಟನ್ನು ಬಿಡಬೇಕು. ಈಗ ಮುಚ್ಚಳ ತೆಗೆದು ಹಿಟ್ಟು ಹೇಗೆ ಹದ ಆಗಿದೆ ಎಂಬುದನ್ನು ನೋಡಿ. ಒಂದು ವೇಳೆ ಗಟ್ಟಿಯಾಗಿದ್ದರೆ ಸ್ವಲ್ಪವೇ ನೀರು ಹಾಕಿ ಮತ್ತೆ ಕಲಸಿಕೊಳ್ಳಿ.
ರೊಟ್ಟಿ ತಟ್ಟುವ ಹದಕ್ಕೆ ಹಿಟ್ಟು ಮಾಡಿಕೊಳ್ಳಿ, ಕೈಗೆ ಈ ಹಿಟ್ಟು ಹಿಡಿಯಬಾರದು ಆ ಹದ ಮಾಡಿಕೊಳ್ಳಬೇಕು. ಈಗ ರೊಟ್ಟಿ ತಟ್ಟುವ ಪ್ಲಾಸ್ಟಿಕ್ ಅಥವಾ ಯಾವುದಾದರು ದಪ್ಪವಾದ ಪ್ಲಾಸ್ಟಿಕ್ ಕೂಡ ಬಳಸಬಹುದು, ಅದಕ್ಕೆ ಎಣ್ಣೆ ಅಥವಾ ನೀರಿನಲ್ಲಿ ಅದ್ದಿಕೊಂಡು ಅದರ ಮೇಲೆ ಹಿಟ್ಟು ಹಾಕಿ ತಟ್ಟಿಕೊಳ್ಳಬೇಕು. ಬಹಳ ಗಟ್ಟಿಯಾಗಿ ತಟ್ಟಬೇಡಿ, ಹದವಾಗಿ ನಿಧಾನವಾಗಿ ತಟ್ಟಿಕೊಳ್ಳಿ.
ನಂತರ ಒಲೆ ಮೇಲೆ ಕಾವಲಿ ಇಟ್ಟು ಮೊದಲು ಬಿಸಿ ಮಾಡಬೇಕು. ಅನಂತರ ಎಣ್ಣೆ ಹಚ್ಚಿಕೊಂಡು ಬಳಿಕ ತಟ್ಟಿಕೊಂಡಿರುವ ರೊಟ್ಟಿಯನ್ನು ಅದರ ಮೇಲೆ ಹಾಕಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರವೆ ರೊಟ್ಟಿ ಸಿದ್ದವಾಗುತ್ತದೆ. ನಿಮಗೆ ಯಾವ ಹದಕ್ಕೆ ಬೇಕೋ ಹಾಗೆ ಕಾಯಿಸಿಕೊಳ್ಳಿ. ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ನೋಡಿ ಬಹಳ ರುಚಿಯಾಗಿರುತ್ತೆ. ಇದರ ಜೊತೆಗೊಂದು ಚಟ್ನಿ ಇದ್ದರೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications
